
ಕೊಲ್ಲೂರು ಶ್ರೀ ಮುಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಬೆಳಗಿನ ಉಪಹಾರದ ವ್ಯವಸ್ಥೆಯನ್ನು ಮಂಡಳಿಯ ಅಧ್ಯಕ್ಷರಾದ ಶ್ರೀ ಬಾಬು ಹೆಗಡೆಯವರು ಕಳೆದ ವರ್ಷದಂತೆ ಈ ವರ್ಷವೂ ನೋಡಿಕೊಂಡರು.
ಪಾದಯಾತ್ರಿಕರಿಗೆ ಕುಡಿಯಲು ಪಾನೀಯ ಮತ್ತು ಹಣ್ಣು ವಿತರಣೆಯನ್ನು ಅರೇಶಿರೂರು ಮತ್ತು ಜಡ್ಕಲ್ ಮಾಸ್ತಿ ಅಮ್ಮನವರ ಗುಡಿ ಹತ್ತಿರ ನೆರವೇರಿಸಲಾಗಿತ್ತು.
2ಕಡೆ ಪಾನೀಯ ಉಪಚಾರ ಪಡೆದ ಯಾತ್ರಿಕರು ಸರಿಸುಮಾರು 10:30ಕ್ಕೆ ಸೌಪರ್ಣಿಕಾ ನದಿ ತೀರದ ಗಣಪತಿ ದೇವಸ್ಥಾನಕ್ಕೆ ಬಂದರು. ಸೌಪರ್ಣಿಕೆಯಲ್ಲಿ ಸ್ನಾನ ಮಾಡಿ ನಡೆದು ಬಂದ ಆಯಾಸ ನೀಗಿಸಿಕೊಂಡ ಯಾತ್ರಿಕರು ಅಲ್ಲಿಯೇ ದೇವಸ್ಥಾನದವರು ಏರ್ಪಾಡು ಮಾಡಿದ ಉಪಹಾರವನ್ನು ಸವಿದರು.
ನಂತರ ಗಣಪತಿ ದೇವಸ್ಥಾನದಲ್ಲಿ ಭಜನೆ ಸಂಕೀರ್ತನೆ ಮುಗಿಸಿ ಅಲ್ಲಿಂದ ಎಲ್ಲರೂ ಒಟ್ಟಾಗಿ ಸಂಕೀರ್ತನೆ ಮಾಡುತ್ತ ಮುಕಾಂಬಿಕೆಯ ಸನ್ನಿದಾನಕ್ಕೆ ಬಂದರು.
ದೇವಸ್ಥಾನದಲ್ಲಿ ಎಲ್ಲಾ ಪಾದಯಾತ್ರಿಕರರಿಗೆ ದೇವಸ್ಥಾನದ ಆಡಳಿತ ಮಂಡಳಿಯವರು ಶೀಘ್ರದರ್ಶನ ವ್ಯವಸ್ಥೆ ಕಲ್ಪಿಸಿದರು. ತಾಯಿ ಮುಕಾಂಬಿಕೆಯ ದರ್ಶನ ಪಡೆದ ಯಾತ್ರಿಕರು ಮತ್ತೆ ಮೈ ಮರೆಯುವಂತೆ ಭಜನೆ ಸಂಕೀರ್ತನೆಯಲ್ಲಿ ಹೆಜ್ಜೆ ಹಾಕಿದರು.
ನಂತರ ಮುಕಾಂಬಿಕೆಯ ಊಟಪ್ರಸಾದ ಸ್ವೀಕರಿಸಿದ ಭಕ್ತಾದಿಗಳು ಸಂಘಟಕರು ವ್ಯವಸ್ಥೆ ಮಾಡಿದ ಬಸ್ ನಲ್ಲಿ ತಮ್ಮ ತಮ್ಮ ಊರುಗಳಿಗೆ ತೆರಳಿದರು.
ಹಣ್ಣುಗಳ ವಿತರಣೆ ಮೈಕ್ ಆಟೋದ ವ್ಯವಸ್ಥೆಯನ್ನು ಕಳೆದ 6ವರ್ಷಗಳಿಂದ ವಹಿಸಿಕೊಳ್ಳುತ್ತಿರುವ ಅನಿಲ್ ಶೇಟ್ ಉಪ್ಪುಂದ ಮತ್ತು ಶ್ರೀಗಣೆಶ್ ಗಾಣಿಗ ಉಪ್ಪುಂದ ನಿರ್ವಹಿಸಿದರು.
ಈ ವರ್ಷ ಯಾತ್ರಿಕರ ಅನುಕೂಲಕ್ಕಾಗಿ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು ಅದರ ವೆಚ್ಚವನ್ನು ಲಿಂಗಯ್ಯ ಖಾರ್ವಿ ಉಪ್ಪುಂದ, ಚಂದ್ರಯ್ಯ ಆಚಾರ್ಯ ನಾಯ್ಕನಕಟ್ಟೆ ವಹಿಸಿಕೊಂಡರು ಮತ್ತು ಕಳೆದ 6 ವರ್ಷಗಳಿಂದ ಸಹಕಾರ ನೀಡುತ್ತಾ ಬಂದಿರುವ SVMS ಮಾಲೀಕರಾದ ಶಿವಾನಂದ ಗಾಣಿಗ ಕೂಡ ವ್ಯವಸ್ಥೆ ಕಲ್ಪಿಸಿದರು.
ಕಾರ್ಯಕ್ರಮದ ವ್ಯವಸ್ಥೆಯನ್ನು ರವೀಂದ್ರ
ತಾರಪತಿ ಅಚ್ಚುಕಟ್ಟಾಗಿ ನಿರ್ವಹಿಸಿದರು. ಪ್ರದೀಪ್ ಕಾರಿಕಟ್ಟೆ ಮತ್ತು ಗುರುರಾಜ್ ಉಪ್ಪುಂದ ಸಹಕರಿಸಿದರು.
ಮಂಜುನಾಥ್ ಮದ್ಯಾಸ್ತ ಮರವಂತೆ ನಾಗಚಂದ್ರ ದೇವಾಡಿಗ ಸಣ್ಣ ಪುಟ್ಟ ಖರ್ಚುಗಳ ನೋಡಿಕೊಂಡರು
ಬೈಂದೂರು ಆರಕ್ಷಕ ಸಿಬ್ಬಂದಿಗಳು, ಮಾಧ್ಯಮ ಮಿತ್ರರು ಕೂಡ ಈ ಪಾದಯಾತ್ರೆಯ ಸಂಘಟಕರಿಗೆ ಸಾಥ್ ನೀಡಿದರು.
ಉಡುಪಿ ಇಂದ ಮುರ್ಡೇಶ್ವರ ತನಕ ಸುಮಾರು 250ಕ್ಕೂ ಅಧಿಕ ಭಕ್ತರು ಈ ಯಾತ್ರೆಯಲ್ಲಿ ಪಾಲ್ಗೊಂಡು ಪುನೀತರಾದರು.
ಕೊನೆಯಲ್ಲಿ ಆಚಾರ್ಯ ಕೇಶವ ಬೆಳ್ಳಿಯವರು ಎಲ್ಲರನ್ನು ಅಭಿನಂದಿಸಿರುತ್ತಾರೆ.
