ಮಾವುತನನ್ನು ಸೊಂಡಲಿನಿಂದ ಬೀಳಿಸಿ, ಎರಡು ಕಾಲು ಆತನ ಮೇಲಿಟ್ಟು ನಿಂತ ಆನೆ – ಭಯಾನಕ ವಿಡಿಯೋ ವೈರಲ್
ದಿ ಹಿಂದೂ ವರದಿ ಪ್ರಕಾರ, ಇಡುಕ್ಕಿಯ ಸಫಾರಿ ಕೇಂದ್ರದಲ್ಲಿ ಆನೆಗಳನ್ನು ಅಕ್ರಮವಾಗಿ ಸಾಕಲಾಗುತ್ತಿದೆ. ಈ ಸಂಬಂಧ ಅರಣ್ಯ ಇಲಾಖೆ ಪ್ರಕರಣವನ್ನು ದಾಖಲಿಸಿಕೊಂಡಿದೆ. ಮಾವುತನ ಸಾವಿನ ಬಳಿಕ ಸಫಾರಿ ಕೇಂದ್ರಕ್ಕೆ ಅರಣ್ಯ ಇಲಾಖೆ ನೋಟಿಸ್ ನೀಡಿದೆ. ಮೃತ ಮಾವುತನನ್ನು 62 ವರ್ಷದ ಬಾಲಕೃಷ್ಣ
ಎಂದು ಗುರುತಿಸಲಾಗಿದೆ. ಮರಣೋತ್ತರ ಶವ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
ತಪ್ಪಿದ ದೊಡ್ಡ ಅನಾಹುತ: ಮೃತ ಮಾವುತ ಬಾಲಕೃಷ್ಣ ನೀಲೇಶ್ವರಂ ನಿವಾಸಿಯಾಗಿದ್ದು, ಕೇರಳದ ಅಡಿಮಲಿ ಸಮೀಪದ ಕಲ್ಲರ್ ಬಳಿಯ ಖಾಸಗಿ ಫಾರ್ಮ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು. ಆನೆ ದಾಳಿಗೂ ಮುನ್ನ ಮಾವುತ ಬಾಲಕೃಷ್ಣ ಪ್ರವಾಸಿಗರನ್ನು ಸಫಾರಿಗೆ ಕರೆದುಕೊಂಡು ಹೋಗಲು ಸಿದ್ಧವಾಗಿದ್ದರು. ಅದಕ್ಕೂ ಮೊದಲು ಘಟನೆ ನಡೆದಿದ್ದು, ಭಾರೀ ಅನಾಹುತವೊಂದು ತಪ್ಪಿದೆ.
ವರದಿ; ಜನಾರ್ದನ ಮರವಂತೆ