October 23, 2025
IMG-20240722-WA0078.jpg

ಪುತ್ತೂರಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ಆರ್ಮಿ ಎನ್‌ಸಿಸಿ ಕೆಡೆಟ್ ಸಮೃದ್ಧಿ ಚೌಟ ರಾಷ್ಟ್ರಮಟ್ಟದ ಪರ್ವತಾರೋಹಣಕ್ಕೆ ಆಯ್ಕೆ.

ಪುತ್ತೂರು: ಅಟಲ್ ಬಿಹಾರಿ ವಾಜಪೇಯಿ ಇನ್‌ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್ ಮತ್ತು ಅಲೈಡ್ ಸ್ಪೋರ್ಟ್‌ನ ಆಶ್ರಯದಲ್ಲಿ ಹಿಮಾಚಲ ಪ್ರದೇಶದ ಮನಾಲಿಯಲ್ಲಿ ನಡೆದ ಎನ್‌ಸಿಸಿ ಅಖಿಲ ಭಾರತ ವಿಶೇಷ ಮೂಲ ಪರ್ವತಾರೋಹಣ ತರಬೇತಿಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ಆರ್ಮಿ ಎನ್‌ಸಿಸಿ ಕೆಡೆಟ್ ಸಮೃದ್ಧಿ ಚೌಟ ಭಾಗವಹಿಸಿ ಮುಂದಿನ ರಾಷ್ಟ್ರಮಟ್ಟದ ಪರ್ವತಾರೋಹಣಕ್ಕೆ ಆಯ್ಕೆಗೊಂಡಿದ್ದಾರೆ

2024ನೇ ಮೂಲ ಪರ್ವತಾರೋಹಣ ತರಬೇತಿಯಲ್ಲಿ ಕರ್ನಾಟಕದಿಂದ ಆಯ್ಕೆಯಾದ ಎನ್‌ಸಿಸಿ ಹುಡುಗಿಯರ ವಿಭಾಗದಲ್ಲಿ ಸಮೃದ್ಧಿ ಚೌಟ ಏಕೈಕ ಕೆಡೆಟ್ ಆಗಿದ್ದಾರೆ. ಹಿಮಾಚಲ ಪ್ರದೇಶದ ಮನಾಲಿಯ 15,700 ಅಡಿ ಎತ್ತರದ ‘ಶಿಥಿಧ‌ರ್’ ಶಿಖರವನ್ನು ಏರಲು ಎನ್‌.ಸಿ.ಸಿ ಮಹಾನಿರ್ದೇಶಕರು ನವದೆಹಲಿ ವತಿಯಿಂದ ಮೂಲ ಪರ್ವತಾರೋಹಣ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ದೇಶದ 48 ಮಂದಿ ಎನ್.ಸಿ.ಸಿ. ಕೆಡೆಟ್ ಗಳು ಭಾಗವಹಿಸಿದ್ದರು. ಸಮೃದ್ಧಿ ಚೌಟ ಈ ತರಬೇತಿಯನ್ನು ಯಶಸ್ವಿಯಾಗಿ ಮುಗಿಸಿ ತರಬೇತಿಯ ‘ಬೆಸ್ಟ್‌ ರೋಪ್ ಟೀಮ್’ ಪ್ರಶಸ್ತಿಗೆ ಭಾಜನರಿದ್ದಾರೆ.

ಕಾಲೇಜಿನ ಎನ್‌.ಸಿ.ಸಿ. ಅಧಿಕಾರಿ ಕ್ಯಾ.ಜೋನ್ಸನ್ ಡೇವಿಡ್ ಸಿಕ್ಕೇರಾ ಅವರ ತರಬೇತಿ ಪಳಗಿದ ಸಮೃದ್ಧಿ ಚೌಟ ಅವರ ಸಾಧನೆಗೆ ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ರೆ . ಫಾ ಲಾರೆನ್ಸ್ ಮಸ್ಕರೇನಸ್‌ ಹಾಗೂ ಕಾಲೇಜಿನ ಪ್ರಾಶುಪಾಲರಾದ ರೆ.ಫಾ. ಅಶೋಕ್‌ ರಾಯನ್ ಕ್ರಾಸ್ತಾ ಅವರು ಅಭಿನಂದಿಸಿದ್ದಾರೆ.

About The Author

Leave a Reply

Your email address will not be published. Required fields are marked *