ಕುಂದಾಪುರ : ಸ್ಕೂಟರ್ ಸ್ಕಿಡ್ ಆಗಿ ಸವಾರ ಸಾವು

ಕುಂದಾಪುರ : ಸ್ಕೂಟರ್ ಸ್ಕಿಡ್ ಆಗಿ ಸವಾರರೊಬ್ಬರು
ದಾರುಣವಾಗಿ ಸಾವನ್ನಪ್ಪಿದ ಘಟನೆ ಎ.23ರಂದು ಬೆಳಗ್ಗೆ ಕೋಟೇಶ್ವರ ನಾಗಬನ ಕಟ್ಟೆ ಸಮೀಪ ಶ್ರೀಕಾಳಿಕಾಂಬಾ ಜುವೇಲ್ಲರಿ ಮುಂಬಾಗದಲ್ಲಿ ನಡೆದಿದೆ.

ಅರುಣ್‌(34) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಸಹಚಾರ ಸುಧಾಕರ (29) ಎಂಬವರು ಗಾಯ ಗೊಂಡಿದ್ದಾರೆ.

ಅರುಣ್ ಹಾಗೂ ಸುದಾಕರ ಎಂಬುವವರು ಬೈಕಿನಲ್ಲಿ ಬೀಜಾಡಿ  ಜಂಕ್ಷನ್ ಕಡೆಯಿಂದ ಕೋಟೇಶ್ವರ ಪೇಟೆ ಕಡೆಗೆ ಬರುತ್ತಿರುವಾಗ ಸ್ಕಿಡ್ ಆಗಿ ರಸ್ತೆಗೆ ಬಿದ್ದಿದ್ದರು. ಇದರಿಂದ ಗಂಭೀರವಾಗಿ ಗಾಯಗೊಂಡ ಅರುಣ್, ಕೋಟೇಶ್ವರ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದು

ಈ ಕುರಿತು ಸ್ಥಳೀಯ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About Janardhana K M

Check Also

ರಕ್ಷಿಸಣೆಗೆ ಒಳಗಾದ ಯುವತಿಯನ್ನು ತಂದೆಯ ವಶ; ವಿಶು ಶೆಟ್ಟಿ

ಉಡುಪಿ ಎ.12 :- ಕಳೆದ ಮೂರು ದಿನಗಳ ಹಿಂದೆ ಕರಾವಳಿ ಬೈಪಾಸ್ ಬಳಿ ರೋದಿಸುತ್ತಿದ್ದ ಯುವತಿಯನ್ನು ವಿಶುಶೆಟ್ಟಿ ರಕ್ಷಿಸಿ ಬಾಳಿಗಾ …

Leave a Reply

Your email address will not be published. Required fields are marked *