October 21, 2025
img-20250325-wa00337352306971757393300.jpg
ರಾಣಿಬಲೆ ಮೀನುಗಾರರ ಒಕ್ಕೂಟ ರಿ.ಉಪ್ಪುಂದ ಇವರ ಆಶ್ರಯದಲ್ಲಿ ದಶಮಾನೋತ್ಸವದ ಪ್ರಯುಕ್ತ ದಿನಾಂಕ 23.03.2025 80 24.03.2025ರ  ಸಂಘದ ಸದಸ್ಯರಿ ಗಾಗಿ ಏರ್ಪಡಿಸಿದ ಕ್ರಿಕೆಟ್ ಪಂದ್ಯಾಟ ರಾಣಿಬಲೆ ಟ್ರೋಫಿ-2025 ನ್ನು ಸಂಘದ ಅಧ್ಯಕ್ಷರಾದ ಶ್ರೀಯುತ ವೆಂಕಟರಮಣ ಖಾರ್ವಿ ಇವರು ಉದ್ಘಾಟಿಸುವುದರೊಂದಿಗೆ ಕ್ರಿಕೆಟ್‌ ಪಂದ್ಯಾಟಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯ ರಾಣಿಬಲೆ ಘಟಕದ ತಂಡಗಳು ಉಪಸ್ಥಿತರಿದ್ದರು.
ದಿನಾಂಕ 24.03.2025ರಂದು ಕ್ರಿಕೆಟ್‌ ಪಂದ್ಯಾಟದ ಸಮಾರೋಪ ಸಮಾರಂಭವನ್ನು ಸಂಘದ ಅಧ್ಯಕ್ಷರಾದ ಶ್ರೀಯುತ ವೆಂಕಟರಮಣ ಖಾರ್ವಿ ಇವರ ಅಧ್ಯಕ್ಷತೆಯಲ್ಲಿ ಜರುಗಿತು, ಈ ಸಂದರ್ಭ ಭಾಗವಹಿಸಿದ ಎಲ್ಲಾ ತಂಡದವರಿಗೂ ಅಭಿನಂದನೆ ಸಲ್ಲಿಸಿದರು. ಈ
ಈ ಸಂದರ್ಭ ಸಂಘದ ಗೌರವ ಸಲಹೆಗಾರರಾದ ಎಸ್. ಮದನ್ ಕುಮಾರ್, ಸಂಘದ ಉಪಾಧ್ಯಕ್ಷರಾದ ತಿಮ್ಮಪ್ಪ ಖಾರ್ವಿ, ಪ್ರಧಾನ ಕಾರ್ಯದರ್ಶಿಯಾದ ಸುರೇಶ್ ಖಾರ್ವಿ, ಕೋಶಾಧಿಕಾರಿಯಾದ ಬಿ.ನಾಗೇಶ್ ಖಾರ್ವಿ, ಜೊತೆ ಕಾರ್ಯದರ್ಶಿಯಾದ ಸೋಮಶೇಖ‌ರ್ ಖಾರ್ವಿ, ಕಾರ್ಯ ಕಾರ್ಯಕಾರಿ ಸದಸ್ಯರಾದ ಎ.ಶ್ರೀನಿವಾಸ್ ಖಾರ್ವಿ, ಎಸ್. ಕೃಷ್ಣ ಖಾರ್ವಿ, ರಾಜೇಂದ್ರ ಖಾರ್ವಿ, ಶಂಕ‌ರ್ ಖಾರ್ವಿ, ನವೀನ್ ಖಾರ್ವಿ, ಶರತ್ ಖಾರ್ವಿ, ಸಂಘದ ಎಲ್ಲಾ ರಾಣಿಬಲೆ ಮೀನುಗಾರರ ಸದಸ್ಯರು ಉಪಸ್ಥಿತರಿದ್ದರು. ಪಂದ್ಯಾಟದ ಪ್ರಥಮ ಬಹುಮಾನವನ್ನು ಶ್ರೀ ಕಿರುಹೊಳೆ ಮಹಾಸತಿ ರಾಣಿಬಲೆ ಜೋಡಿ ತಾರಾಪತಿ, ದ್ವಿತೀಯ ಬಹುಮಾನವನ್ನು ಸಾಗರ ಸಮೃದ್ಧಿ ರಾಣಿಬಲೆ ಜೋಡಿ ಅಳಿವೆಕೋಡಿ, ತೃತೀಯ ಬಹುಮಾನವನ್ನು ಜಟ್ಟಿಗ ಕೃಪಾ ರಾಣಿಬಲೆ

ಜೋಡಿ ಮಡಿಕಲ್ ಇವರು ಪಡೆದುಕೊಂಡರು. ಪಂದ್ಯಾಟದ ನಿರ್ಣಾಯಕರಾಗಿ ಪಾಂಡುರಂಗ ಖಾರ್ವಿ ಮತ್ತು ಮುಷರಫ್ ಕಾರ್ಯ ನಿರ್ವಹಿಸಿದರು, ವೀಕ್ಷಕ ವಿವರಣೆಕಾರರಾಗಿ ವಿನಯ್ ಅಳಿವೆಕೋಡಿ, ವಿಶ್ವನಾಥ ಗಂಗೊಳ್ಳಿ ಕಾರ್ಯ ನಿರ್ವಹಿಸಿದರು. ಸುಬ್ರಹ್ಮಣ್ಯ. ಎಮ್. ಇವರು ನಿರೂಪಿಸಿದರು.

About The Author

Leave a Reply

Your email address will not be published. Required fields are marked *