

ಮಂಗಳೂರು: ಅಂತಾರಾಷ್ಟ್ರೀಯ ಮಟ್ಟದ ಭಾರ ಎತ್ತುವ ಸ್ಪರ್ಧೆಯಲ್ಲಿ ಕಟೀಲಿನ ಯುವಕನೋರ್ವ ಭಾರತ ದೇಶವನ್ನು ಪ್ರತಿನಿಧಿಸಿ ಬಂಗಾರದ ಪದಕ ಪಡೆದುಕೊಂಡು ಅಮೋಘವಾದ ಸಾಧನೆ ಮಾಡಿದ್ದಾರೆ.
ಕಟೀಲು ಕೊಂಡೇಲ ನಿವಾಸಿ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಸಿಬ್ಬಂದಿ ಚಂದ್ರಹಾಸ್ ಕುಂದರ್ ಮತ್ತು ನಿರ್ಮಲಾ ದಂಪತಿಯ ಸುಪುತ್ರ ಕೀರ್ತನ್ ಕುಂದರ್ ಕಟೀಲ್ ಇವರು ಅಮೆರಿಕ ದೇಶದಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಮಟ್ಟದ ಭಾರ ಎತ್ತುವ ಸ್ಪರ್ಧೆಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿದ್ದು ಬಂಗಾರದ ಪದಕವನ್ನು ತನ್ನ ಕೊರಳಿಗೇರಿಸಿಕೊಂಡಿದ್ದಾರೆ.