

ಹಲ್ಲೆಗೆ ಮುಂದಾದ ಪ್ರಕರಣದ ವಿಚಾರದಲ್ಲಿ ವೈದ್ಯರು ಪ್ರತಿಭಟನೆ ನಡೆಸಿದ್ದರು. ಸೂಕ್ತ ಕಾನೂನು ಭರವಸೆ ಬಳಿಕ ವೈದ್ಯರ ಪ್ರತಿಭಟನೆ ಅಂತ್ಯವಾಗಿದೆಯಾದ್ರೂ ಶನಿವಾರ(ಎ.26) ಸಂಜೆ ತನಕ ಗಡುವು ನೀಡಲಾಗಿದೆ. ಆದ್ರೆ, ಈ ನಡುವೆ ಪುತ್ತೂರಿನಲ್ಲಿ ನಕಲಿ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬ ಆತಂಕಕಾರಿ ವಿಚಾರ ಕೂಡ ಬಯಲಿಗೆ ಬಂದಿದೆ.
ಪುತ್ತೂರಿನಲ್ಲಿರುವ ನಕಲಿ ವೈದ್ಯರ ವಿರುದ್ಧ ಕ್ರಮಕ್ಕೆ ತಾಲೂಕು ಆರೋಗ್ಯ ಅಧಿಕಾರಿಗೆ ದೂರು ನೀಡಲಾಗಿದೆ, ಸ್ವತಃ ಭಾರತೀಯ ವೈದ್ಯಕೀಯ ಸಂಘದ ಕಾರ್ಯದರ್ಶಿ ಹೇಳಿದ್ದಾರೆ. ಈ ವಿಚಾರವಾಗಿ ದೂರು ನೀಡಿ ಎರಡು ವರ್ಷವಾಗಿದ್ರೂ ಕ್ರಮ ಕೈಗೊಂಡಿಲ್ಲ ಎಂಬ ವಿಚಾರವನ್ನೂ ಅವರೇ ಸ್ಪಷ್ಟಪಡಿಸಿದ್ದಾರೆ.
ನಕಲಿ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವುದು ಅತ್ಯಂತ ಅಗತ್ಯದ ವಿಚಾರವಾಗಿದ್ದು, ಇದರ ವಿಚಾರವಾಗಿ ವೈದ್ಯಕೀಯ ಸಂಘ ನೀಡಿದ ದೂರಿಗೆ ಕ್ರಮ ಆಗದೇ ಇದ್ರೂ ಮೌನವಾಗಿರುವುದೇ ಅಚ್ಚರಿಯ ಸಂಗತಿ. ಈ ಬಗ್ಗೆ ಆರೋಗ್ಯ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವರು ತಕ್ಷಣ ಸೂಕ್ತ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.