ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

ಪುತ್ತೂರಿನ ಬನ್ನೂರು ಸಮೀಪದ ಜೈನರಗುರಿಯಲ್ಲಿ ಘಟನೆ
ನಸುಕಿನ ಜಾವ ನಿದ್ದೆಯಲ್ಲಿದ್ದ ಸಂದರ್ಭ ಮನೆ ಮೇಲೆ ಧರೆ ಕುಸಿತ


ಪುತ್ತೂರು:ಪುತ್ತೂರು ತಾಲೂಕಿನ ಬನ್ನೂರಿನ ಜೈನರಗುರಿ ಸಮೀಪ ಮಜೀದ್ ಎಂಬರ ಮನೆ ಮೇಲೆ ಧರೆ ಕುಸಿದ ಪರಿಣಾಮ ಮನೆ ಹಾನಿಗೊಂಡ ಮತ್ತು ನಿದ್ದೆಯಲ್ಲಿದ್ದ ಮಕ್ಕಳು ಮಣ್ಣಿನಡಿಯಲ್ಲಿ ಸಿಲುಕಿದ ಘಟನೆ ಜೂ.27 ರ ನಸುಕಿನ ಜಾವ ನಡೆದಿದ್ದು ಘಟನಾ ಸ್ಥಳಕ್ಕೆ ನಗರಸಭಾ ಸದಸ್ಯರಾದ ಪಾತಿಮಾತ್ ಜೋರಾ, ಪಿ ಜಿ ಜಗನ್ನಿವಾಸ ರಾವ್, ಪೌರಾಯುಕ್ತ ಮಧು ಎಸ್ ಮನೋಹರ್, ಕಂದಾಯ ನಿರೀಕ್ಷರು ಭೇಟಿ ನೀಡಿದರು.
ಈ ಸಂದರ್ಭ ಸ್ಥಳಿಯ ನಿವಾಸಿ ಗಣೇಶ್ ಆಚಾರ್ಯ ಸಹಿತ ಹಲವಾರು ಮಂದಿ ಮಣ್ಣು ತೆರವು ಕಾರ್ಯದಲ್ಲಿ ಸಹಕರಿಸಿದರು.
