ಚಲಿಸುತ್ತಿದ್ದ ಕಾರಿನಲ್ಲಿ ಹೆಬ್ಬಾವು ಪ್ರತ್ಯಕ್ಷ… ಬೋನೆಟ್‌ನಲ್ಲಿ ಬೆಚ್ಚಗೆ ಮಲಗಿದ್ದ ಹೆಬ್ಬಾವು..!!
ಉಡುಪಿ: ಬೈಂದೂರಿನ ನಾಡ ಗ್ರಾಮದ ಕೋಣಿ ಚಂದ್ರಪ್ರಕಾಶ್ ಶೆಟ್ಟಿ ಅವರ ಕಾರಿನ ಬಾನೆಟ್ ಒಳಗೆ ಬೃಹತ್ ಗಾತ್ರದ ಹೆಬ್ಬಾವು ಪತ್ತೆಯಾಗಿದೆ. ಇವರು ಬಡಾಕೆರೆ ಜೋಯಿಸರ ಬೆಟ್ಟು ನಿವಾಸಿಯಾಗಿದ್ದು, ಕಾರಿನ ಬೋನೆಟ್ ಒಳಗೆ ಭಾರಿ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದೆ.
ಎಂದಿನಂತೆ ಕಾರು ಚಲಾಯಿಸುತ್ತಾ ಬರುತ್ತಿರುವಾಗ ದಾರಿ ಮಧ್ಯದಲ್ಲಿ ಕಾರಿನ ಬೋನೆಟಿನಲ್ಲಿ ವಿಪರೀತ ಶಬ್ದವಾಗಿದೆ. ಇಳಿದು ಗಮನಿಸಿದಾಗ 12 ಫೀಟ್ ಉದ್ದದ ಹೆಬ್ಬಾವು ಇರುವುದು ಕಂಡು ಬಂದಿದೆ. ತಕ್ಷಣ ಕಾರ್ಯಪ್ರವೃತ್ತರಾಗಿ ಅರಣ್ಯ ಅಧಿಕಾರಿಗಳಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ತಕ್ಷಣ ಅಧಿಕಾರಿಗಳು ಆಗಮಿಸಿ ಕಾರಿನ ಬೋನಟ್ ಒಳಗಿರುವ ಹೆಬ್ಬಾವನ್ನು ಸತತ ಕಾರ್ಯಾಚರಣೆಯಿಂದ ಹೊರತೆಗೆದಿದ್ದಾರೆ.