ಕರಾವಳಿ ಗಂಡು ಕಲೆ ಯಕ್ಷಗಾನದ ಚಂಡೆ ಸಾಧಕ ಸುಶಾಂತ್ ಆಚಾರ್ಯ ಅವರಿಗೆ ‘ಪ್ರತಿಭಾ ಪುರಸ್ಕಾರ’ ಗೌರವ

ಹೊಸಾಡು ಗ್ರಾಮದ ಅರಾಟೆಯ ಶ್ರೀ ಉಮ್ಮಲ್ತಿ ಮನೆ ದೈವಸ್ಥಾನದಲ್ಲಿ ಇತ್ತೀಚೆಗೆ ಜರುಗಿದ ಪುರಾಣ ಪ್ರಸಿದ್ಧ ಶ್ರೀ ಕ್ಷೇತ್ರ ಮಾರಣಕಟ್ಟೆ (ಶ್ರೀ ಬ್ರಹ್ಮಲಿಂಗೇಶ್ವರ ದಶಾವತಾರ ಯಕ್ಷಗಾನ ಮಂಡಳಿ) ಮೇಳದ ಕಾಲಮಿತಿ ಪ್ರದರ್ಶನದ ಸೇವಕರ್ತರಾದ ಶ್ರೀಮತಿ ನಿಶಾ ಜಯಕುಮಾರ್ ರವರ ಹರಕೆ ಬಯಲಾಟದ ರಂಗಸ್ಥಳ ದಲ್ಲಿ ಈ ಕಾರ್ಯಕ್ರಮ ನಡೆಯಿತು.
ಯಕ್ಷಗಾನ ರಂಗದಲ್ಲಿ ಸುಶಾಂತ್ ಆಚಾರ್ಯ ಅವರು ಇದುವರೆಗೂ ನೀಡಿರುವ ಸೃಜನಶೀಲ ಕೊಡುಗೆ ಹಾಗೂ ಅವರ ಕಲಾ ಸಾಧನೆಯನ್ನು ಪರಿಗಣಿಸಿ, ರಿಂಗ್ ಫ್ರೆಂಡ್ಸ್ ಆರಾಟೆ ಹಾಗೂ ಹೊಸಾಡು ಗ್ರಾಮದ ಸಮಸ್ತ ಗ್ರಾಮಸ್ಥರು ಒಗ್ಗೂಡಿ ಅವರಿಗೆ ‘ಪ್ರತಿಭಾ ಪುರಸ್ಕಾರ’ ನೀಡಿ ಗೌರವಿಸಿದರು.
“ಯುವ ಕಲಾವಿದರು ಕಲೆಯ ಬೇರನ್ನು ಗಟ್ಟಿಯಾಗಿ ಹಿಡಿದಾಗ ಮಾತ್ರ ಸಾಂಸ್ಕೃತಿಕ ಪರಂಪರೆ ಉಳಿಯಲು ಸಾಧ್ಯ. ಸುಶಾಂತ್ ಅವರ ಶ್ರಮ ಮತ್ತು ಕಲಾ ಪ್ರೇಮ ಇಂದಿನ ಪೀಳಿಗೆಗೆ ಮಾದರಿ,” ಎಂದು ಸಂಘಟಕರು ಈ ಸಂದರ್ಭದಲ್ಲಿ ಶ್ಲಾಘಿಸಿದರು.
ಈ ಸುಸಂದರ್ಭದಲ್ಲಿ ಸೇವಕರ್ತರಾದ ಹೆರಿಯ ನಾಯ್ಕ ಕುಟುಂಬದವರು ಸೇರಿದಂತೆ ಗ್ರಾಮದ ಪ್ರಮುಖರು, ಕಲಾಭಿಮಾನಿಗಳು ಹಾಗೂ ರಿಂಗ್ ಫ್ರೆಂಡ್ಸ್ ಸದಸ್ಯರು ಉಪಸ್ಥಿತರಿದ್ದು, ಸಾಧಕ ಕಲಾವಿದನಿಗೆ ಶುಭ ಹಾರೈಸಿದರು.
ಸುಶಾಂತ್ ಆಚಾರ್ಯ ರವರ ಕಲಾ ಸಾಧನೆ ಇನ್ನಷ್ಟು ಉತ್ತಂಗಕ್ಕೆ ಏರಲಿ ಎನ್ನುವುದೇ ಯಕ್ಷ ಅಭಿಮಾನಿಗಳ ಅಭಿಪ್ರಾಯವಾಗಿದೆ
7:39
