ಉಡುಪಿ ;ಕಲ್ಯಾಣ್ ಪುರ ಸೇತುವೆ ಬಳಿ ಮಹಾ ದುರಂತದಿಂದ ಪಾರಾದ ಪ್ರಯಾಣಿಕರು
ಕಲ್ಯಾಣ್ ಪುರ ಸೇತುವೆ ಬಳಿ ಬಸ್ಸೊಂದು ಸೇತುವೆಯ ಗರ್ಡರ್ ಬಡಿದು ದೊಡ್ಡ ದುರಂತದಿಂದ ಪಾರಾದ ಘಟನೆ ಮೇ 27 ಬೆಳಗಿನ 11:00 ನಡೆದಿದೆ.
ಬಸ್ಸುಂದು ನದಿಗೆ ಬೀಳುವ ಮಹಾ ದುರಂತದಿಂದ ಪಾರಾಗಿದೆ.
ಉಡುಪಿಯಿಂದ ಬ್ರಹ್ಮಾವರದ ಕಡೆಗೆ ಚಲಿಸುವ ಬಸ್ಸೂಂದು ಸ್ವರ್ಣ ನದಿಯ ಕಲ್ಯಾಣ್ ಪುರ ಸೇತುವೆಯ ಗರ್ಡರಗೆ ರಬಸದಿಂದ ಬಡಿದ ಕಾರಣ ಕೆಲವು ಮೀಟರು ತನಕ ಸೇತುವೆ ಬದಿಯ ಸುರಕ್ಷ ಗರ್ಡರ್ ಮುರಿದು ಕೊಂಡು ಚಲಿಸುವ ಬಸ್ಸು ಪ್ರಯಾಣಿಕರು ನದಿಗೆ ಬಿದ್ದು ಮುಳುಗಡೆ ಆಗುವ ಸನ್ನಿವೇಶದ ಅಪಾಯದಿಂದ ಪಾರಗಿದ್ದಾರೆ.
ಅದೆ ಸಮಯ ಸೇತುವೆ ಕೆಳಗಡೆ ದೋಣಿಯಲ್ಲಿ ಮೀನುಗಾರಿಕೆ ಮಾಡುತಿದ್ದ ಶಂಕರ ಇವರ ಮೇಲೆ ಸಿಮೆಂಟು ಕಂಬದ ತುಂಡು ಮುರಿದು ಬಿದ್ದು ಕೈಗೆ ಹೊಡೆತ ಬಿದ್ದು ಆಪಾಯದಿಂದ ಪಾರಗಿದ್ದಾರೆ. ರಾ ರ 66 ರ ಕಲ್ಯಾಣಪುರ ಸೇತುವೆ 1963 ರಲ್ಲಿ ನಿರ್ಮಾಣವಾಗಿದ್ದು 6 ದಶಕಗಳಷ್ಟು ಹಳೆಯದಾಗಿದ್ದು ಇದರ ಮೇಲೆ ಬಹಳಷ್ಟು ಅಪಘಾತಗಳು ಆಗಾಗ್ಗೆ ಸಂಭವಿಸುತ್ತಲಿರುತ್ತದೆ.
ಸೇತುವೆಯ ಅಡಿಯಲ್ಲಿ ಅಲ್ಲಲ್ಲಿ ಕಾಂಕ್ರೇಟ್ಗಳು ಬಿರುಕು ಬಿಟ್ಟಿದೆ ಸೇತುವೆಯ ಅಡಿಭಾಗದಲ್ಲಿ ದುರುಸ್ಥಿ ಕಾರ್ಯ ಮಾಡಬೇಕಾಗಿದೆ ಎಂದು ಸ್ಥಳಿಯರು ಅಭಿಪ್ರಾಯ ವ್ಯಕ್ತಪಡಿಸುತಿದ್ದಾರೆ .