

ಯುವತಿ ಮಂಜುಳಾ (27) ಬೆಳಗಾವಿಯ ಕಿತ್ತೂರಿನ ನಿವಾಸಿಯಾಗಿದ್ದು ಕೌಟುಂಬಿಕ ಕಲಹದಿಂದ ಮನೋರೋಗಕ್ಕೆ ತುತ್ತಾಗಿ ಬೀದಿಪಾಲಾಗಿದ್ದು ತಿಳಿದು ಬಂದಿದೆ. ಮೊದಲು ಮಹಿಳೆಯ ಪತಿಯನ್ನು ಸಂಪರ್ಕಿಸಿದಾಗ ಸರಿಯಾದ ಸ್ಪಂದನೆ ಸಿಗಲಿಲ್ಲ. ಈ ಬಗ್ಗೆ ಮಾಹಿತಿ ಪಡೆದ ಉಡುಪಿಯ ಮಹಿಳಾ ಸಾಂತ್ವನ ಕೇಂದ್ರದ ಸಿಬ್ಬಂದಿಯವರು ಯುವತಿಯ ಗಂಡನ ಮನೆ ಹಾಗೂ ತಾಯಿ ಮನೆಯವರನ್ನು ಸಂಪರ್ಕಿಸಿ ಮನವೊಲಿಸಿದ ನಂತರ ಯುವತಿಯ ತಾಯಿ ಉಡುಪಿಗೆ ಬಂದಿದ್ದು, ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕಾರದ ಪೂರ್ಣಿಮ ಹಾಗೂ ಸಮಾಜ ಸೇವಕರಾದ
ಸುಮತಿ ಕಾನೂನು ಪ್ರಕ್ರಿಯೆ ನಡೆಸಿ ತಾಯಿಗೆ ವಿಶು ಶೆಟ್ಟಿ ಸಮಕ್ಷಮ ಹಸ್ತಾಂತರಿಸಿದರು.
ಬಾಳಿಗಾ ಆಸ್ಪತ್ರೆಯಲ್ಲಿ ಯುವತಿಗೆ ಮಾನವೀಯ ನೆಲೆಯಲ್ಲಿ ಚಿಕಿತ್ಸೆ ಹಾಗೂ ಸ್ಪಂದನೆ ನೀಡಿದ್ದು ಕುಟುಂಬ ತೀರಾ ಬಡತನದವರಾಗಿದ್ದು, ದಾರಿ ಖರ್ಚಿಗೆ ವಿಶು ಶೆಟ್ಟಿ ನೆರವು ನೀಡಿದರು