ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಬದಿಯಲ್ಲಿರುವ ಅನಧಿಕೃತ ಪ್ಲಾಸ್ಟಿಕ್ ಬ್ಯಾನರ್ ಗಳ ವಿರುದ್ಧ ಕ್ರಮ ಕೈಗೊಳ್ಳುವುದೇ ಜಿಲ್ಲಾಡಳಿತ
ಬ್ರಹ್ಮಾವರದಿಂದ ಉಡುಪಿ ರಾಷ್ಟ್ರೀಯ ಹೆದ್ದಾರಿ 66ರ ಹಾಗೂ ರಾಜ್ಯ ಹೆದ್ದಾರಿ ಮುಖ್ಯರಸ್ತೆಯಲ್ಲಿ ವಿದ್ಯುತ್ ಕಂಬದಲ್ಲಿ ಗಬ್ಬರ್ ಸಿಂಗ್ ಎನ್ನುವ ತುಳು ಚಿತ್ರದ ಪ್ಲಾಸ್ಟಿಕ್ ಪ್ಲೆಕ್ಸ್ ಬ್ಯಾನರ್ ಎಲ್ಲೆಂದರಲ್ಲಿ ಎಲ್ಲರ ಕೈ ಕಾಲು ಹಿಡಿದು ನೀವು ಒಂದು ಬ್ಯಾನರ್ ಹಾಕಿ ಎಂದು ಚಿತ್ರದ ನಿರ್ಮಾಪಕ ಒಂದೇ ಕಣ್ಣಲ್ಲಿ ನೀರು ಹಾಕಿ ಪ್ರಚಾರದ ತೆವಲಿಗೆ ಬ್ಯಾನರ್ ಹಾಕಿಸಿ ಕೊಂಡಿದ್ದು ಎಂದು ಹಾಕಿದ್ದವರೇ ಹೇಳಿ ಕೊಂಡಿರುತ್ತಾರೆ.ಸ್ಥಳೀಯ ಗ್ರಾಮ ಪಂಚಾಯತ್ ಹಾಗೂ ಮೆಸ್ಕಾಂ ಇಲಾಖೆ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದೆ ವಿದ್ಯುತ್ ಕಂಬದಲ್ಲಿ 15*20 ಆಡಿ ಬ್ಯಾನರ್ ಅಳವಡಿಸಿರುವುದು ವಿಪರ್ಯಾಸವೇ ಸರಿ. ಅಲ್ಲದೇ ನೀತಿ ಸಂಹಿತೆ ಜಾರಿಯಲ್ಲಿ ಇರುವಾಗಲೇ ಯಾವುದೇ ಅನುಮತಿ ಇಲ್ಲದೇ ಬ್ಯಾನರ್ ಅಳವಡಿಸಿದಲ್ಲದೆ, ಬಿಜೆಪಿ ಮುಖಂಡೆ ಒಬ್ಬರು ಈ ಚಿತ್ರದ ಬ್ಯಾನರ್ ಅಲ್ಲಿ ಗುರುತಿಸಿ ಕೊಂಡಿದ್ದುಕಾನೂನು ಬಾಹಿರ ಅಲ್ಲವೇ? ಕಾನೂನು ಎಲ್ಲರಿಗೂ ಒಂದೇ ಜಿಲ್ಲಾಡಳಿತ ಕಾನೂನು ಉಲ್ಲಂಘನೆ ಮಾಡಿದವರ ವಿರುದ್ಧ ಸುಮೊಟು ಕೇಸ್ ದಾಖಲಿಸಬೇಕೆಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.ಇನ್ನು ಹಾಸ್ಯಾಸ್ಪದ ಎಂದರೆ ಚಿತ್ರ ನಿರ್ಮಾಪಕ ತಾನೊಬ್ಬ ದೊಡ್ಡ ಹೋರಾಟಗಾರ ಎಂದು ಬಿಲ್ಡ್ ಅಪ್ ಕೊಡುವುದು ಬೇರೆ ಕೆಲವು ಸಂಘಟನೆ ಸ್ಥಾಪಕ ಅಧ್ಯಕ್ಷ ಎನ್ನುವ ಈತ ಜಿಲ್ಲೆಯಾದ್ಯಂತ ಸಿಕ್ಕಿದವರಿಗೆಲ್ಲ ಕಾನೂನಿನ ಪಾಠ ಹೇಳಿ ಮಾಹಿತಿ ಹಕ್ಕಿನಲ್ಲಿ ಅರ್ಜಿ ಹಾಕಿ ನಂತರ ಬೇಡದ ಘನದಾರಿ ಕೆಲಸ ಮಾಡುವ ಈತನಿಗೆ ಹೆದ್ದಾರಿಗಳಲ್ಲಿ • ಬ್ಯಾನರ್ ಹಾಕುವುದು ಕಾನೂನು ಬಾಹಿರ ಎನ್ನುವುದು ಗೊತ್ತಿಲ್ಲವೇ. ಅದು ಅಲ್ಲದೇ ಲಾ ಓದಿದ್ದೇನೆ ಎನ್ನುವ ಈತನಿಗೆ ತನ್ನ ತಪ್ಪಿನ ಅರಿವು ಆಗಲಿಲ್ಲವೇ? ಇದು ಹೇಗೆ ಆಯ್ತಾ ಎಂದರೆ ಊರಿಗೆ ಬುದ್ದಿ ಹೇಳಿ ಒಲೆಗೆ……. ಏನೋ ಮಾಡಿದರಂತೆ ಅಂತ ಕಥೆ ಆಯ್ತಾ.
ಸರಕಾರ ಈಗಾಗಲೇ ಪ್ಲಾಸ್ಟಿಕ್ ಬ್ಯಾನರ್ ನಿಷೇಧ ಮಾಡಿದ್ರು ಕ್ಯಾರೆ ಎನ್ನದೆ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಯಲ್ಲಿ ಗಬ್ಬರ್ ಸಿಂಗ್ ಚಿತ್ರದ ಅನಧಿಕೃತ ಪ್ಲೆಕ್ಸ್ ಹೆಗ್ಗಿಲ್ಲದೆ ಸಿಕ್ಕಸಿಕ್ಕಲ್ಲಿ ಕಾಣಿಸುತ್ತಿದೆ, ಸಂಬಂಧಪಟ್ಟ ಅಧಿಕಾರಿಗಳನ್ನು ಮಾಧ್ಯಮದವರು ಪ್ರಶ್ನೆ ಮಾಡಿದರೆ ಸತ್ಯವನ್ನು ಮರೆಮಾಚುವ ಪ್ರಯತ್ನ ಅಧಿಕಾರಿಗಳು ಮಾಡುತ್ತಿದ್ದಾರೆ.
ಇನ್ನಾದರೂ ಸ್ಥಳೀಯ ಆಡಳಿತ ಅಧಿಕಾರಿಗಳು ಅನಧಿಕೃತ ಬ್ಯಾನರ್ ಹಾಕಿ ಶುಭ ಕೋರಿ ನೀತಿ ಸಂಹಿತೆ ಮತ್ತು ಕಾನೂನಿನ ಉಲ್ಲಂಘನೆ
ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಅವರ ಮೇಲೆ ದಂಡ ವಿಧಿಸಿ, ಒಂದು ತಿಂಗಳ ಜಾಹೀರಾತು ಶುಲ್ಕವನ್ನು ಅವರಿಂದ ಪಡೆದು ಸರಕಾರದ ಬೊಕ್ಕಸಕ್ಕೆ ಆದ ನಷ್ಟವನ್ನು ಬರಿಸಿ ಇವರ ಸಾರ್ವಜನಿಕರು ಹೇಳುತ್ತಿದ್ದಾರೆ. ಜಿಲ್ಲಾಡಳಿತ ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದೇ ಕಾದು ನೋಡೋಣ.