October 23, 2025
img_20250629_1005193016672694678166959.jpg
ಬೈಂದೂರು; ಉಪ್ಪುಂದ ರಾಣಿ ಬಲೆ ಮೀನು ಮಾರಾಟ ಪ್ರಾಥಮಿಕ ಸಹಕಾರ ಸಂಘ  (ನಿ.)  ಉಪ್ಪುಂದ ಸಂಘದ ವಾರ್ಷಿಕ ಮಹಾಸಭೆ ಕರ್ನಾಟಕ ಖಾರ್ವಿ ಯಾನೇ ಹರಿಕಾಂತ ಮಹಾಜನಸಂಘದಲ್ಲಿ ನಡೆಯಿತು .
ಸಂಘದ ಅಧ್ಯಕ್ಷ ರಾದ ವೆಂಕಟರಮಣ ಖಾರ್ವಿ ಸಂಘದ ಅಧ್ಯಕ್ಷತೆ ವಹಿಸಿ ಮಾತನ್ನಾಡಿ ಸಂಘದ ಸರ್ವತೋಮುಖ ಬೆಳವಣಿಗೆಗೆ ಸದಸ್ಯರ ಪಾಲ್ಗೊಳ್ಳುವಿಕೆ ಅತ್ಯಗತ್ಯ
ಸಂಘದ ನಿರ್ದೇಶಕ  ನಾಗೇಶ್ ಖಾರ್ವಿಯವರು ವಾರ್ಷಿಕ ಮಹಾಸಭೆಯ ಕಾರ್ಯ ಸೂಚಿಗಳನ್ನು ಒದಿ ತಿಳಿಸಿದರು, ಸಂಘದ ನಿರ್ದೇಶಕರಾದ ಶರತ್ ಖಾರ್ವಿ 24-25ನೇ ವಾರ್ಷಿಕ ವರದಿ ಮಂಡನೆ ಮಾಡಿದರು,  ಸಂಘದ ನಿರ್ದೇಶಕರಾದ ರಾಜೇಂದ್ರ ಖಾರ್ವಿ ಯವರು  24-25ನೇ ಸಾಲಿನ ಅಂದಾಜು ವ್ಯಯವನ್ನು ವಾಚಿಸಿದರು, 24-25ನೇ ಸಂಘದ  ಉಪ ನಿಬಂಧನೆ ತಿದ್ದುಪಡಿಯನ್ನು  ಉಪಾಧ್ಯಕ್ಷರಾದ ತಿಮ್ಮಪ್ಪ ಖಾರ್ವಿ ವಾಚಿಸಿದರು,ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕಿಶೋರ್ ರವರು 24-25ನೆ ಸಾಲಿನ ಆಯವ್ಯಯವನ್ನು ಮಂಡಿಸಿದರು,ಸಂಘದ ನಿರ್ದೇಶಕ ರಾದ ಶ್ರೀನಿವಾಸ ರವರು24-25ಸಾಲಿನ ಬಜೆಟ್‌ ಗಿಂತ ಜಾಸ್ತಿ ಯಾದ ಖರ್ಚು ಗಳನ್ನು  ಓದಿ ತಿಳಿಸಿದರು, ನವೀನ್ ರವರು ಲಾಭಾಂಶ  ವಿಂಗಡನೆ ವಾಚಿಸಿದರು,  ಅಧ್ಯಕ್ಷರಾದ ವೆಂಕಟರಮಣ ಖಾರ್ವಿ ಲೆಕ್ಕಪರಿಶೋಧಕರ  ಆಯ್ಕೆ ಮಾಡುವುದು, 24-25ರ ಸಾಲಿನ ಸದಸ್ಯರ ಸೇರ್ಪಡೆ ಹಾಗೂ ಬಿಟ್ಟು  ಹೊದ ಸದಸ್ಯರ ಪರೀಸಿಲಿನೇ  ಮಾಡಿ ಮತ್ತು ಸಂಘದ ಸದಸ್ಯರಿಗೆ ಶೇ 10ರಷ್ಟು ಡಿವಿಡೆಂಡ್  ಘೊಷಣೆ ಮಾಡಿದರು,

ಮರಣ ಹೊಂದಿದ ಸಂಘದ ಸದಸ್ಯರ ಮನೆಯವರಿಗೆ ಸಂಸ್ಥೆ ವತಿಯಿಂದ  ನಾಲ್ಕು ಜನರಿಗೆ ತಲಾ 5000/ರೂ ಮರಣೋತ್ತರ ಚೆಕ್ ವಿತರಣೆ ಮಾಡಿದರು

ಬಾಗವಹಿಸಿದ ಎಲ್ಲಾ  ಸದಸ್ಯರಿಗೆ ಲಕ್ಕಿ ಕೂಪನ್ ಡ್ರಾ ಮೂಲಕ ಹತ್ತು ಜನ ಅದೃಷ್ಟ ಶಾಲಿಗಳನ್ನು ಆಯ್ಕೆ ಮಾಡಿ ಬಹುಮಾನ ವಿತರಣೆ ಮಾಡಲಾಯಿತು.
ಅಧ್ಯಕ್ಷರಾದ ವೆಂಕಟರಮಣ ಖಾರ್ವಿ,ಉಪಾಧ್ಯಕ್ಷರಾದ ತಿಮ್ಮಪ್ಪ ಖಾರ್ವಿ,  ನಿರ್ದೇಶಕರಾದ ಸುರೇಶ್ ಖಾರ್ವಿ,  ಬಿ ನಾಗೇಶ್ ಖಾರ್ವಿ,   ಸೊಮಶೇಖರ ಖಾರ್ವಿ,  ಎ ಶ್ರೀನಿವಾಸ ಖಾರ್ವಿ,ಎಸ್ ಕೃಷ್ಣ ಖಾರ್ವಿ, ರಾಜೇಂದ್ರ ಖಾರ್ವಿ.,ಶಂಕರ್ ಖಾರ್ವಿ, ನವೀನ್ ಖಾರ್ವಿ,ಶರತ್ ಖಾರ್ವಿ,  ಮತ್ತು ಸಂಘದ  ಸದಸ್ಯರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು

ರವೀಂದ್ರ ಖಾರ್ವಿ ಮತ್ತು ಕಿರಣ್ ರವರು ಪ್ರಾರ್ಥನೆ ಗೈದರು , ಸುಬ್ರಹ್ಮಣ್ಯ  ಎಂ ನಿರೂಪಣೆಯನ್ನು ಗೈದರು

About The Author

Leave a Reply

Your email address will not be published. Required fields are marked *