ಅನಾರೋಗ್ಯ ಪೀಡಿತ ವ್ಯಕ್ತಿಗೆ ರಕ್ತದಾನ ಮಾಡಿ ಮಾನವತೆ ಮೇರದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ

ಬೈಂದೂರು:ಅನಾರೋಗ್ಯ ಪೀಡಿತರಾಗಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದ ಶಂಕರನಾರಾಯಣ ಗ್ರಾಮದ ಉದಯ ಆಚಾರ್ಯ ಎನ್ನುವ ವ್ಯಕ್ತಿಗೆ ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್‌ ಗಂಟಿಹೊಳೆ ಅವರು ಖುದ್ದಾಗಿ ರಕ್ತದಾನವನ್ನು ಮಾಡುವುದರ ಮುಖೇನ ಮಾನವತೆ ಮೆರೆದಿದ್ದಾರೆ.
ಕುಂದಾಪುರ ತಾಲೂಕಿನ ಶಂಕರನಾರಾಯಣ ಭಾಗದ ಉದಯ್ ಆಚಾರ್ಯ ಎಂಬವರು ಅನಾರೋಗ್ಯ ನಿಮಿತ್ತ ಕುಂದಾಪ್ರದ ಆಸ್ಪತ್ರೆಗೆ ದಾಖಲಾಗಿದ್ದರು.ಅವರಿಗೆ ತುರ್ತಾಗಿ ರಕ್ತದ ಅವಶ್ಯಕತೆವಿದ್ದು.ಬ್ಲಡ್ ಬ್ಯಾಂಕ್‌ಗಳಲ್ಲಿ ವಿಚಾರಿಸಿದಾಗ ರಕ್ತದ ಇಲ್ಲದೆ ಇರುವುದರಿಂದ ಸೂಕ್ತ ಸಮಯದಲ್ಲಿ ರೋಗಿಗೆ ರಕ್ತ ಸಿಗಲಿಲ್ಲ.ರೋಗಿಗೆ ತುರ್ತು ಸಂದರ್ಭದಲ್ಲಿ ರಕ್ತ ನೀಡಲೆ ಬೇಕಾಗಿದ್ದರಿಂದ ಕುಟುಂಬ ಸಂಕಷ್ಟಕ್ಕೆ ಸಿಲುಕಿತ್ತು.ಯಾವುದೇ ರೀತಿಯ ಪ್ರಯತ್ನಪಟ್ಟುರು  ರಕ್ತ ಸಿಗದ ಕಾರಣ  ಈ ಮಾಹಿತಿ  ಶಾಸಕ ರಿಗೆ ಮಾಹಿತಿ ತಿಳಿದಾಗ ಕೂಡಲೇ ಧಾವಿಸಿ,
ಅವರು ಖುದ್ದಾಗಿ ರಾತ್ರಿಗೆ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಆಗಮಿಸಿ ರಕ್ತದಾನ ಮಾಡಿದ್ದಾರೆ.ಶಾಸಕರ ಕಾರ್ಯಕ್ಕೆ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ರಕ್ತದ ಅವಶ್ಯಕತೆ ಬಹಳಷ್ಟು ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ರಕ್ತದಾನ ಮಾಡಲು ಮುಂದೆ ಬರಬೇಕೆಂದು ಶಾಸಕರು ವಿನಂತಿಸಿ ಕೊಂಡಿದ್ದಾರೆ.

About Janardhana K M

Check Also

ರಕ್ತದಾನಿ ಬಳಗ ಮರವಂತೆ ಮತ್ತು ಅಭಯ ಹಸ್ತ ಚಾರಿಟೇಬಲ್‌ ಟ್ರಸ್ಟ್ ವತಿಯಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮರವಂತೆ ಮೀನುಗಾರ ಸಹಕಾರಿ ಸಂಘ,ಸತ್ತಿಶ್ ಪೂಜಾರಿ ಉದ್ಯಮಿ ಮಂಜುನಾಥ ಪೂಜಾರಿ ಸೇನಾಪುರ ಸಹಭಾಗಿತ್ವದಲ್ಲಿ 86ಯುನಿಟ್ ರಕ್ತ ಸಂಗ್ರಹ

86 ರಕ್ತ ಯುನಿಟ್ ಸಂಗ್ರಹ ಬೈಂದೂರು ;ಮರವಂತೆ ರಕ್ತದಾನ ಬಳಗ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್, ಕುಂದಾಪುರ ರೆಡ್ ಕ್ರಾಸ್ ಸಂಸ್ಥೆ, …

Leave a Reply

Your email address will not be published. Required fields are marked *