ಬೈಂದೂರು: ನಿರುದ್ಯೋಗಿಗಳಿಗೆ ಮತ್ತು ಮಹಿಳೆಯರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಶೆಫ್‌ಟಾಕ್ ನ್ಯೂಟ್ರಿಫುಡ್ಸ್ ಪೈ.ಲಿ.ನ ಖಾದ್ಯಗಳ ಉತ್ಪಾದನ ಘಟಕ ಉದ್ಘಾಟನೆ,

ಉದ್ಯೋಗವಕಾಶ ನೀಡಬೇಕೆನ್ನುವ ಉದ್ದೇಶದಿಂದ ಇಂತಹ ಸಂಸ್ಥೆಯನ್ನು ಸ್ಥಾಪಿಸಿ ಸಾವಿರಾರು ಜನರಿಗೆ ಉದ್ಯೋಗ ನೀಡುವ ಜೊತೆಗೆ ಚಿಂತನೆ ಆರಂಭಿಸಿದ್ದು ಶ್ಲಾಘನೀಯವಾಗಿದೆ.ಕಷ್ಟ ಅನುಭಿಸಿದವರಿಗೆ ಮಾತ್ರ ನೋವಿನ ಅರ್ಥ ಗೊತ್ತಾಗುತ್ತದೆ ತಾನು ಪಟ್ಟ ಕಷ್ಟ ಇತರರು ಅನುಭವಿಸಬಾರದು ಎನ್ನುವ ಉದ್ದೇಶದಿಂದ ನೂರಾರು ಸಮಾಜಮುಖಿ ಸೇವೆ ನಡೆಸುತ್ತಿರುವ ಗೋವಿಂದ ಬಾಬು ಪೂಜಾರಿಯವರ ಪ್ರಯತ್ನ ಶ್ಲಾಘನಿಯವಾಗಿದೆ.ಸರಕಾರದಿಂದ ದೊರೆಯುವ ಅವಕಾಶಕ್ಕೆ ಮುಕ್ತ ಸಹಕಾರ ನೀಡುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಹೇಳಿದರು ಅವರು ಶನಿವಾರ ಹೇರಂಜಾಲಿನಲ್ಲಿ ನಡೆದ ಉದ್ಯಮಿ ಡಾ, ಗೋವಿಂದ ಬಾಬು ಪೂಜಾರಿಯವರ ಶೆಫ್ ಟಾಕ್ ನ್ಯೂಟ್ರಿಫುಡ್ಸ್ ಸಂಸ್ಥೆಯಲ್ಲಿ ಹೇಳಿದರು.






ಸದಸ್ಯ ಕೋಟ ಶ್ರೀನಿವಾಸ ಪೂಜಾರಿ,
ಮರವಂತೆ ಬಡಾಕೆರೆ ವ್ಯ.ಸೇ. ಸಹಕಾರಿ ಸಂಘದ ನಾವುಂದ ಅಧ್ಯಕ್ಷ ಎಸ್. ರಾಜು ಪೂಜಾರಿ, ತಾ.ಪಂ. ಮಾಜಿ ಸದಸ್ಯ ಎಚ್. ವಿಜಯ ಶೆಟ್ಟಿ,ಬೇಕರಿ ಉತ್ಪನ್ನಗಳ ಉಡುಪಿ ಜಿಲ್ಲಾ ಅಧ್ಯಕ್ಷ ವಿಶ್ವನಾಥ ಕುಲಾಲ್,ಜಿ.ಪಂ ಮಾಜಿ ಸದಸ್ಯೆ ಗೌರಿ ದೇವಾಡಿಗ, ಕಂಬದಕೊಣೆ ಗ್ರಾಮ ಪಂಚಾಯತ್ ಅಧ್ಯಕ್ಷೆ ನಾಗಮ್ಮ ದೇವಾಡಿಗ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್,ಸಂಸದ ಕೋಟ ಶ್ರೀನಿವಾಸ ಪೂಜಾರಿ ಯವರನ್ನು ಸಮ್ಮಾನಿಸಲಾಯಿತು,ಸಂಸ್ಥೆಯ ವತಿಯಿಂದ ಆಸಕ್ತರಿಗೆ ಸಹಾಯಧನ ಹಾಗೂ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು.
ಶಿಕ್ಷಕ ಸುಬ್ರಹ್ಮಣ್ಯ ಜಿ. ಸ್ವಾಗತಿ ಕಾರ್ಯಕ್ರಮ ನಿರ್ವಹಿಸಿದರು, ಪೂರ್ಣಿಮಾ ಆಚಾರ್ಯ ವಂದಿಸಿದರು, ಸಂಸ್ಥೆಯ ನಾಗರಾಜ್ ಪಿ ಯಡ್ತರೆ ಸಹಕರಿಸಿದರು
ವರದಿ; ಜನಾರ್ದನ ಮರವಂತೆ.