ಬೈಂದೂರು ತಾಲೂಕು ಮರವಂತೆ ಪ್ರೌಢಶಾಲೆಯ ವಿಜ್ಞಾನ ಪ್ರಯೋಗಾಲಯದ ಪರಿಕರಗಳ ಮತ್ತು ಸುಸಜ್ಜಿತ ಪ್ರಯೋಗಾಲಯದ ಡೆಸ್ಕ್ ನ ಹಸ್ತಾಂತರ ಕಾರ್ಯಕ್ರಮ.

ಬೈಂದೂರು ತಾಲೂಕು ಮರವಂತೆ ಪ್ರೌಢಶಾಲೆಯ  ಪ್ರಥಮ ಬ್ಯಾಚ್ ವಿದ್ಯಾರ್ಥಿಗಳು ಶಾಲೆಗೆ  ಡೆಸ್ಕ್ ಮತ್ತು ಇತರ ಪರಿಕರಗಳ  ಕೊಡುಗೆಯನ್ನು ನೀಡಿದರು. ಎಸ್ ಡಿಎಂಸಿ ಅಧ್ಯಕ್ಷ ರಾಗಿರುವ ಶ್ರೀ ರವಿ ಮಡಿವಾಳ ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಶಿಕ್ಷಣ ತಜ್ಞ ಸಂಪನ್ಮೂಲ ವ್ಯಕ್ತಿ ಹಿರಿಯ ಪತ್ರಕರ್ತರಾಗಿರುವ ಎಸ್ ಜನಾರ್ಧನ ಮರವಂತೆ ಅವರು ಮಾತನಾಡಿ ಪ್ರಯೋಗಾಲಯ ವಿದ್ಯಾರ್ಥಿಗಳಲ್ಲಿ ವಿಜ್ಞಾನ ಕಲಿಕೆಯನ್ನು ಗಟ್ಟಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಎಂದು ತಿಳಿಸುತ್ತಾ ವಿದ್ಯಾರ್ಥಿಗಳ ಕೊಡುಗೆಯನ್ನು ಶ್ಲಾಘಿಸಿದರು. ಶಾಲಾ ರಜತ ಮಹೋತ್ಸವ ಸಮಿತಿಯ ಅಧ್ಯಕ್ಷರಾಗಿರುವ ಶ್ರೀ ದಯಾನಂದ ಬಳೆಗಾರ, ಉದ್ಯಮಿಗಳಾದ ಶ್ರೀ ಸತೀಶ್ ಪೂಜಾರಿ, ಬೈಂದೂರು ಜೆಸಿಐ ಅಧ್ಯಕ್ಷರಾದ ಶ್ರೀಮತಿ ಅನಿತಾ ಆರ್ ಕೆ, ಶಿಕ್ಷಕರುಗಳಾದ ಶ್ರೀ ರಮಾನಂದ, ಡಾ. ಕಿಶೋರ್ ಕುಮಾರ್ ಶೆಟ್ಟಿ, ಶ್ರೀಮತಿ ಜಯಶೀಲ ನಾಯಕ್, ಶ್ರೀ ಕೃಷ್ಣ ನೇರಳೆ ಕಟ್ಟೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ನಾಗರಾಜ ಪಟಗಾರ್, ಹಳೆ ವಿದ್ಯಾರ್ಥಿಗಳಾದ ಶ್ರೀ ರೋಷನ್ ಲುವಿಸ್ ಮತ್ತು ಶ್ರೀ ಸಂತೋಷ್ ಕುಮಾರ್ ಹಿರಿಯ ಶಿಕ್ಷಕರಾದ ಶ್ರೀ  ಸರ್ವೋತ್ತಮ ಭಟ್ ಉಪಸ್ಥಿತರಿದ್ದರು.

ವರದಿ; ಜನಾರ್ದನ ಮರವಂತೆ

About Janardhana K M

Check Also

ಕ್ಷೇತ್ರ ಮಹಾತ್ಮಗಳ ಕೃತಿ ಬ್ರಹ್ಮ ಬಿರುದು ; ಡಾ ಬಸವರಾಜ್ ಶೆಟ್ಟಿಗಾರ್

ಶ್ರೀಯುತ ಡಾ… ಬಸವರಾಜ್‌ ಶೆಟ್ಟಿಗಾ‌ರ್ ಇವರಿಗೆ. ಕ್ಷೇತ್ರ ಮಹಾತ್ಮಗಳ ಕೃತಿ ಬ್ರಹ್ಮ ಬಿರುದು ನೀಡಲಾಯಿತು … ಶ್ರೀಯುತರು ಈಗಾಗಲೇ. 68 …

Leave a Reply

Your email address will not be published. Required fields are marked *