ಪುತ್ತೂರು: ಸುಮುಖ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾದ ‘ತುಡರ್’ ತುಳು ಸಿನೆಮಾ ಕರಾವಳಿಯಾದ್ಯಂತ ನಿನ್ನೆ ಬಿಡುಗಡೆಯಾಗಿದ್ದು, ಇಂದು ಪುತ್ತೂರಿನ ಭಾರತ್ ಸಿನಿಮಾಸ್ ನಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಇನ್ನು ಪುತ್ತೂರಿನಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯ ದೀಪ ಪ್ರಜ್ವಲಿಸಿ ಚಿತ್ರಕ್ಕೆ ಶುಭ ಹಾರೈಸಿದರು. ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮತ್ತು ಸಂಜೀವ ಮಠಂದೂರು, ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು, ಆರ್ಯಾಪು ಗ್ರಾ.ಪಂ ಪಿಡಿಒ ನಾಗೇಶ್, ಅವರು ಚಿತ್ರದ ಯಶಸಸ್ಸಿಗೆ ಶುಭ ಹಾರೈಸಿದರು. ಬಿಜೆಪಿ ಪ್ರಮುಖರಾದ ಯವರಾಜ್ ಪೆರಿಯತ್ತೋಡಿ, ವಿಶ್ವನಾಥ ಕುಲಾಲ್, ಹರಿಪ್ರಸಾದ್ ಯಾದವ್, ಕಾಂಗ್ರೆಸ್ ಪ್ರಮುಖ ಪೂರ್ಣೇಶ್, ಚಿತ್ರದ
ಇನ್ನು ತುಡರ್ ಚಿತ್ರ ಸಸ್ಪೆನ್ಸ್, ಡ್ರಿಲ್ಲರ್ ನಿಂದ ಕೂಡಿದ್ದು, ಇದುವರೆಗೆ ಬಂದ ತುಳು ಸಿನೆಮಾಗೆ ಹೋಲಿಸಿದ್ದಲ್ಲಿ ಕೊಂಚ ಭಿನ್ನವಾಗಿದೆ. ಚಿತ್ರದಲ್ಲಿ ನಾಯಕ ಪಾತ್ರ ನಿರ್ವಹಿಸಿದ ನಟ ಸಿದ್ಧರ್ಥ್ ನಟನೆ ಜನರನ್ನ ಆಕರ್ಷಿಸಿದೆ. ಉಳಿದಂತೆ ನಟಿ ದೀಕ್ಷಾ ಬಿಸೆ ಕೂಡ ಅಭಿನಯದಲ್ಲಿ ಮಿಂಚಿದ್ದಾರೆ. ಉಳಿದಂತೆ ಚಿತ್ರದ ಛಾಯಾಗ್ರಹನ ಸೂಪರ್ ಎಂಬಂತ ಸಿನಿ ರಸಿಕರು ತಮ್ಮ ಅಭಿಪ್ರಯಾ ವ್ಯಕ್ತಪಡಿಸಿದ್ದಾರೆ. ಕಾಮಿಡಿ ನಟನೆಯಲ್ಲಿ ಅರವಿಂದ ಬೋಲಾರ್ ಎಂದಿನಂತೆ ಸಿನಿರಸಿಕರ ಮನವನ್ನ ನಗೆಗಡಲಲ್ಲಿ ತೇಲಿಸಿದ್ದಾರೆ.