ರಕ್ತದಾನಿಗಳ ಬಳಗ ಮರವಂತೆ, ಅಭಯಹಸ್ತ ಚಾರಿಟೇಬಲ್‌ ಟ್ರಸ್ಟ್‌ (ರಿ) ಉಡುಪಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಮತ್ತು ಮರವಂತೆಯ ಎಲ್ಲಾ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ರಕ್ತದಾನ ಶಿಬಿರ ಕಾರ್ಯಕ್ರಮ

ಬೈಂದೂರು ತಾಲೂಕು ಮರವಂತೆ ರಕ್ತದಾನ ಶಿಬಿರ ಬಳಗದೊಂದಿಗೆ ಆದಿತ್ಯವಾರದಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮರವಂತೆ ಇಲ್ಲಿ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ ಇದರ ಅಧ್ಯಕ್ಷರಾದ ರಕ್ತದ ಆಪತ್ಪಾಂದವ ಸತೀಶ್ ಸಾಲ್ಯಾನ್ ಮಣಿಪಾಲ್‌ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ
ಯನ್ನು ಡಾ:ಗಣೇಶ್ ಭಟ್ ವೈದ್ಯಾಧಿಕಾರಿ ಪ್ರಾಥಮಿಕ ಅರೋಗ್ಯ ಕೇಂದ್ರ ಮರವಂತೆ ಇವರು ವಹಿಸಿದ್ದರು. ಎಸ್ ಜನಾರ್ಧನ್, ನಿವೃತ್ತ ಅಧ್ಯಾಪಕರು ಮರವಂತೆ. ಜಯಕರು ಶೆಟ್ಟಿ,ಚೇರ್ಮನ್ ಭಾರತೀಯ ರೆಡ್ ಕ್ರಾಸ ಸಂಸ್ಥೆ ಕುಂದಾಪುರ,ಶಿವರಾಮ ಶೆಟ್ಟಿ, ಕೋಶಾಧಿಕಾರಿ ಭಾರತೀಯ ರೆಡ್ ಕ್ರಾಸ ಸಂಸ್ಥೆ ಕುಂದಾಪುರ.ಪ್ರವೀಣ್‌
ಖಾರ್ವಿ,ಅಧ್ಯಕ್ಷರು,ಮೀನುಗಾರರ ಸಹಕಾರಿ ಸಂಘ (ರಿ )ಮರವಂತೆ ಹಾಗೂ ಇನ್ನಿತರ ಸದಸ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಳೆದ 17 ವರ್ಷಗಳಿಂದ ರಕ್ತದಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ  ರಕ್ತದ ಆಪದ್ಭಾಂದವ ಸತೀಶ್ ಸಾಲ್ಯಾನ್ ಮಣಿಪಾಲ್‌ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು

ಹಾಗೂ ಮರವಂತೆ ಶ್ರೀರಾಮ ಮಂದಿರದ ಸೇವಾ ಸಮಿತಿಯ ಅಧ್ಯಕ್ಷರಾದ ಬಿ ಸುರೇಶ್ ಖಾರ್ವಿಯವರಿಗೂ ಸನ್ಮಾನಿಸಿಲಾಯಿತು, ಈ ಸಂದರ್ಭದಲ್ಲಿ ರಕ್ತದಾನ ಮಾಡಿದ ಎಲ್ಲಾ ಸದಸ್ಯರಿಗೂ ಮತ್ತು ಪ್ರತ್ಯಕ್ಷವಾಗಿ ಪರೋಕ್ಷವಾಗಿ ನಮ್ಮ ಈ ಕಾರ್ಯಕ್ರಮಕ್ಕೆ ಸಹಕಾರ ನಿಡಿದ ಸಹೃದಯಿ ದಾನಿಗಳಿಗೆ ಹೃದಯ ಸ್ಪರ್ಶಿ ಅಭಿನಂದನೆಗಳು,

ಈ ಸಭೆಯಲ್ಲಿ ಬಾಗವಹಿಸಿದ ವಿಘ್ನೇಶ್ ಖಾರ್ವಿ, ಮರವಂತೆ ಮೀನುಗಾರ ಸಹಕಾರಿ ಸಂಘದ ಅಧ್ಯಕ್ಷ ರಾದ ಪ್ರವೀಣ್, ಬಿ ರತ್ನಾಕರ್, ಬಿ ಸುರೇಶ್, ಮತ್ತು ರಕ್ತದಾನಿ ಬಳಗದ ಸದಸ್ಯರು ಉಪಸ್ಥಿತರಿದ್ದರು

ವರದಿ; ಜನಾರ್ದನ ಕೆ ಎಂ

About Janardhana K M

Check Also

ಕ್ಷೇತ್ರ ಮಹಾತ್ಮಗಳ ಕೃತಿ ಬ್ರಹ್ಮ ಬಿರುದು ; ಡಾ ಬಸವರಾಜ್ ಶೆಟ್ಟಿಗಾರ್

ಶ್ರೀಯುತ ಡಾ… ಬಸವರಾಜ್‌ ಶೆಟ್ಟಿಗಾ‌ರ್ ಇವರಿಗೆ. ಕ್ಷೇತ್ರ ಮಹಾತ್ಮಗಳ ಕೃತಿ ಬ್ರಹ್ಮ ಬಿರುದು ನೀಡಲಾಯಿತು … ಶ್ರೀಯುತರು ಈಗಾಗಲೇ. 68 …

Leave a Reply

Your email address will not be published. Required fields are marked *