ಬೈಂದೂರು : ಮಾವಿನಕಟ್ಟೆ ಜನತಾ ಕಾಲೋನಿ ರಸ್ತೆ ಚರಂಡಿ ಅವ್ಯವಸ್ಥೆ. ಮನೆ ಬೀಳುವ ಸ್ಥಿತಿ

ಬೈಂದೂರು: ಉಡುಪಿ ಜಿಲ್ಲೆ ಕುಂದಾಪುರ
ತಾಲ್ಲೂಕು ವ್ಯಾಪ್ತಿಯ ಗುಜ್ಜಾಡಿ ಗ್ರಾಮ ಪಂಚಾಯಿತಿನ ಮಾವಿನ ಕಟ್ಟೆ ನಾಯಕವಾಡಿ ಜನತಾ ಕಾಲೋನಿ ಮುಳ್ಳಿಕಟ್ಟೆ ಸಂಪರ್ಕಿಸುವ ಮುಖ್ಯ ರಸ್ತೆ ಇದಾಗಿದ್ದು, ದಿನನಿತ್ಯ ನೂರಾರು ಶಾಲೆಗೆ ಹೋಗುವ ಮಕ್ಕಳು ಹಾಗೂ ಮೀನುಗಾರಿಕೆ ಕೆಲಸಕ್ಕೆ ಹೋಗುವರು, ಮತ್ತು ಜನತಾ ಕಾಲೋನಿಯ ಗಂಡಸರು ಮಹಿಳೆಯರು ಕೆಲಸಕ್ಕೆ ಹೋಗಿ ಬರುವ ರ ಮುಖ್ಯರಸ್ತೆ ಇದಾಗಿದೆ,
ಹೌದು ಗುಜ್ಜಾಡಿ ಗ್ರಾಮ ಪಂಚಾಯತ್ ಸಂಬಂಧಿಸಿದ ಈ ರಸ್ತೆ ಭಾಗದಲ್ಲಿ ದೊಡ್ಡ ದೊಡ್ಡ ಮರಗಳಿಂದ ಕುಡಿದ ಹಾಡಿಗಳಿದ್ದು ಮಳೆಗಾಲದಲ್ಲಿ ಈ ಹಾಡಿಯ ಮೂಲಕವೇ ಮಳೆಗಾಲದಲ್ಲಿ ಜನತಾ ಕಾಲೋನಿ ಯಿಂದ ಹರಿದು ಬಂದ ನೀರು ಹಾಡಿಯ ಮೂಲಕ ಹೋಗಿ ಕೊಡಪಾಡಿ ತೋಡು ಸೇರಿ ನಂತರ ಸಮುದ್ರಕ್ಕೆ ಸೇರುತ್ತಿತ್ತು ಎನ್ನಲಾಗುತ್ತಿದೆ,
ಕಳೆದ ಮೂರು ನಾಲ್ಕು ವರ್ಷಗಳಿಂದ ಮಾವಿನಕಟ್ಟೆ ರಸ್ತೆ ಸಮೀಪ ಇರುವ ಗಂಗಾ ಪೂಜಾರ್ತಿ ಯವರ ಮನೆ ರಸ್ತೆಯ ಚರಂಡಿ ಅವ್ಯವಸ್ಥೆಯಿಂದ ನೀರು ಸಂಪೂರ್ಣ ಬ್ಲಾಕ್ ಆಗಿ ರಸ್ತೆಯ ನೀರು ಮನೆ ಒಳಗೆ ಹರಿದು ಬಂದು ಮನೆ ಸಂಪೂರ್ಣ ಜಲಾವೃತಗೊಂಡಿದೆ ಮನೆ ಬೀಳುವ ಪರಿಸ್ಥಿತಿ ಎದುರಾಗಿದೆ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ದಲಿತ ಮುಖಂಡ ಮಂಜುನಾಥ್ ಮಾವಿನಕಟ್ಟೆ ಗುಜ್ಜಾಡಿ ಗ್ರಾಮ ಪಂಚಾಯತ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ರಸ್ತೆಯಿಂದ ಮನೆ ಕಡೆಗೆ ಹರಿಯುತ್ತಿದ್ದು ಮನೆ ಬೀಳುವ ಪರಿಸ್ಥಿತಿ ಎದುರಾಗಿದೆ ದಿನನಿತ್ಯ ಸಾವು ಬದುಕಿನ ಮಧ್ಯೆ ದಿನ ಕಳೆಯುತ್ತಿದ್ದೇವೆ ನಮ್ಮ ಗೋಳು ಕೇಳುವವರೇ ಇಲ್ಲದಂತಾಗಿದೆ ಅಂತಾರೆ ಗಂಗಾ ಪೂಜಾರ್ತಿ ಯವರ ಮನೆಯವರು

ಕೂಡಲೇ ಶಾಸಕರು ಹಾಗೂ ಸಂಬಂಧಪಟ್ಟ ಪಂಚಾಯತ್ ಅಧಿಕಾರಿಗಳು ಗಮನ ಹರಿಸಿ ತಾತ್ಕಾಲಿಕ ನೆಲೆಯಲ್ಲಿ ರಸ್ತೆಗೆ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ.

About Janardhana K M

Check Also

ಮರವಂತೆ ಮೀನುಗಾರ ಸಹಕಾರಿ ಸಂಘದ 83ನೇ  ವರ್ಷದ ವಾರ್ಷಿಕ ಮಹಾಸಭೆ

ಬೈಂದೂರು ಮರವಂತೆ ಮೀನುಗಾರ ಸಹಕಾರಿ ಸಂಘ ರಿ ವಾರ್ಷಿಕ ಮಹಾಸಭೆ ಇಂದು ಸಹಕಾರಿ ಸಂಘದಲ್ಲಿ ನಡೆಯಿತು ಸಂಘ ಆರಂಭದಲ್ಲಿ ದೀಪ …

Leave a Reply

Your email address will not be published. Required fields are marked *