October 23, 2025
ಗುಡ್ಡ ಜರಿತದಿಂದ ಹೆದ್ದಾರಿಯ ಎರಡೂ ಬದಿಯಲ್ಲೂ ಕಿಲೋಮೀಟರ್ ಗಟ್ಟಲೆ ವಾಹನಗಳು ನಿಂತಿದ್ದು ಸವಾರರು ಪರದಾಡುವಂತಾಗಿದೆ.
ಸುರಿಯುತ್ತಿರುವ ಭಾರಿ ಮಳೆ ಹಿನ್ನೆಲೆಯಲ್ಲಿ ಶಿರಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿ 75 ದೊಡ್ಡತಪ್ಪಲು ಸಮೀಪ ಭೂಕುಸಿತ ಉಂಟಾಗಿ ಎರಡು ಕಾರು, ಒಂದು ಟಿಪ್ಪರ್ ಹಾಗೂ ಒಂದು ಟ್ಯಾಂಕರ್ ಕೆಸರಿನಲ್ಲಿ ಸಿಲುಕಿದ್ದು ಅದೃಷ್ಟವಷಾತ್ ಯಾವುದೆ ಜೀವಹಾನಿ ಸಂಭವಿಸಿಲ್ಲ.
ಭಾರಿ ಭೂಕುಸಿತವಾಗುತ್ತಿರುವ ಹಿನ್ನೆಲೆಯಲ್ಲಿ ಶಿರಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿ 75ನ್ನು ಬಂದ್‌ ಮಾಡಲಾಗಿದ್ದು ಇದರಿಂದಾಗಿ ವಾಹನಗಳು ಹಲವು ಕಿ.ಮೀ ದೂರ ನಿಂತಲ್ಲೆ ನಿಲ್ಲುವಂತಾಗಿದೆ. ಊಟ ತಿಂಡಿ ಇಲ್ಲದೆ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಉಂಟಾಗಿದೆ.

About The Author

Leave a Reply

Your email address will not be published. Required fields are marked *