October 23, 2025
ಬೈಂದೂರು: ಇಂದು ಎಲ್ಲಾ ಕಡೆ ನಾಗರಪಂಚಮಿ ಸಂಭ್ರಮ.ಜಿಲ್ಲೆಯ ಎಲ್ಲ ನಾಗ ದೇವಸ್ಥಾನ ಹಾಗೂ ಮೂಲಸ್ಥಾನಗಳಲ್ಲಿ ನಾಗ ದೇವರಿಗೆ ಹಾಲಿನ ಅಭಿಷೇಕ ಹಾಗೂ ಸೀಯಾಳ ಅಭಿಷೇಕ ಮಾಡಿ ಪೂಜೆ ನಡೆಯಿತು.
ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರಪಂಚಮಿ ಹಬ್ಬಗಳ ಸಾಲು ಆರಂಭವಾಗುವುದಕ್ಕೆ ನಾಂದಿ ಹಾಡುತ್ತದೆ ನಾಗರಪಂಚಮಿಯನ್ನು ಶ್ರಾವಣ ಶುಕ್ಲ ಪಂಚಮಿಯಂದು (2024 ರಲ್ಲಿ ಆಗಸ್ಟ್ 9, ಶುಕ್ರವಾರ) ಆಚರಿಸಲಾಗುತ್ತದೆ. ಈ ದಿನದಂದು ನಾಗ ದೇವರನ್ನು ಪೂಜಿಸಿ, ನಾಗ ದೇವರಿಗೆ ಹಾಲಿನ ನೈವೇದ್ಯವನ್ನು ಅರ್ಪಿಸುತ್ತಾರೆ. ನಾಗಗಳ ಪೂಜೆಯನ್ನು ಮಾಡುವುದರಿಂದ ಸರ್ಪಭಯ ಉಳಿಯುವುದಿಲ್ಲ ಮತ್ತು ವಿಷಬಾಧೆಯಾಗುವ ಸಂಕಟ ತಪ್ಪುತ್ತದೆ ಎಂದು ಭಕ್ತರ ಬಲವಾದ ನಂಬಿಕೆಯಿದೆ.

ವರದಿ ;ಜನಾರ್ದನ ಮರವಂತೆ

About The Author

Leave a Reply

Your email address will not be published. Required fields are marked *