October 23, 2025
img_20241003_1657322092300973761075010.jpg

ಮರವಂತೆ ಕಡಲ ತಡಿಯಲ್ಲಿ  ಶರನ್ನವರಾತ್ರಿಯ ಮೊದಲ ದಿನದಂದು ಗಣಹೋಮ ಮತ್ತು ಮಹಾ ಚಂಡಿಕಾ ಹೋಮ

ಬೈಂದೂರು ತಾಲೂಕು ಮರವಂತೆ ಮೀನುಗಾರರ ಸೇವಾ ಸಮಿತಿಯಿಂದ  ವರ್ಷಂಪ್ರತಿ ನಡೆಯುವ  ಶರನ್ನವರಾತ್ರಿಯ ಮೊದಲ ದಿನದಂದು ಗಣಹೋಮ ಮತ್ತು ಮಹಾ ಚಂಡಿಕಾ ಹೋಮ ಇಂದು  ಮರವಂತೆಯ ಬ್ರೇಕ್ ವಾಟರ್ ಹತ್ತಿರ ನಡೆಯಿತು
ಋಷಿ ಕೇಶ ಬ್ಯಾಯರ್ರವರ ನೇತ್ರತ್ವದಲ್ಲಿ ನಡೆದ ಶರನ್ನವರಾತ್ರಿಯ ಮೊದಲ ದಿನದಂದು ಗಣಹೋಮ ಮತ್ತು ಚಂಡಿಕಾ ಹೋಮ ನರೆವೆರಿಸಿ ಇಲ್ಲಿ ದುಡಿಯುವ ಎಲ್ಲಾ ಮೀನುಗಾರರಿಗೆ ಮತ್ಸ್ಯ ಸಂಪತ್ತು ದೊರೆಯಲಿ, ಮತ್ತು ಗಂಗಾಮಾತೆಗೆ ಪ್ರಸಾದ್ ನನ್ನು ಬಿಟ್ಟು ಬ್ರಾಹ್ಮಣ ಮಾತೆಯರಿಗೆ ಬಾಗಿನ ನೀಡಿ ಗೌರವಿಸಲಾಯಿತು, ನಂತರ ಎಲ್ಲಾ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು ಈ ಸಂದರ್ಭದಲ್ಲಿ ಬೈಂದೂರು ಶಾಸಕ ರಾದ ಗುರುರಾಜ್ ಗಂಟಿಹೊಳೆ ಮತ್ತು ವರಾಹ ದೇವಸ್ಥಾನದ ಧರ್ಮದರ್ಶಿರಾದ ಸತ್ತಿಶ್ ನಾಯ್ಕ್ ಮತ್ತು ಗಣ್ಯಾತಿಗಣ್ಯರು ಬಾಗವಹಿಸಿ ದರು

Jiಶ್ರೀ ರಾಮ ಮಂದಿರದ ಮೀನುಗಾರ ಸೇವಾ ಸಮಿತಿಯ ಅಧ್ಯಕ್ಷರಾದ ಸುರೇಶ್ ಖಾರ್ವಿ, ಮಾರ್ಕೆಟ್ ಸಮಿತಿಯ ಅಧ್ಯಕ್ಷರಾದ ವೆಂಕಟರಮಣ ಖಾರ್ವಿ ಮಾಜಿ ಅಧ್ಯಕ್ಷರಾದ ವಾಸುದೇವ ಖಾರ್ವಿ, ಮಾರ್ಕೆಟ್ ಸಮಿತಿಯ ಮಾಜಿ ಅಧ್ಯಕ್ಷರಾದ ಶಂಕರ್ ಖಾರ್ವಿ, ಕಾರ್ಯದರ್ಶಿ ಯಾದ ಶೇಖರ್ ಖಾರ್ವಿ, ಉಪಾಧ್ಯಕ್ಷರಾದ ನಾರಾಯಣ ಖಾರ್ವಿ, ಮೋಹನ್ ಖಾರ್ವಿ,ಪಾಳಿ ಚಂದ್ರ ಖಾರ್ವಿ, ಸೋಮಯ್ಯ ಖಾರ್ವಿ ಮತ್ತು ಎಲ್ಲಾ ಸದಸ್ಯರು ಉಪಸ್ಥಿತರಿದ್ದರು

ವರದಿ; ಜನಾರ್ದನ ಮರವಂತೆ

About The Author

Leave a Reply

Your email address will not be published. Required fields are marked *