October 23, 2025
img-20241117-wa00613029965650527900184.jpg
ಉಡುಪಿ ನ.17 :- ಸಾರ್ವಜನಿಕರಿಗೆ ಕಿರುಕುಳ ಹಾಗೂ ಭಯದ ವಾತವರಣ ಸೃಷ್ಟಿಸುತ್ತಿದ್ದ ಮಾನಸಿಕ ಅಸ್ವಸ್ಥ ಯುವಕನನ್ನು ವಿಶುಶೆಟ್ಟಿಯವರು ಮಹಿಳಾ ಪೋಲಿಸ್ ಠಾಣಾ ಸಿಬ್ಬಂದಿಯವರ ಸಹಾಯದಿಂದ ವಶಕ್ಕೆ ಪಡೆದು ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಯುವಕ ಅಪ್ಪು ಆಚಾರ್ಯ (28) ಸಾರ್ವಜನಿಕರಿಗೆ ಹಾಗೂ ಮಹಿಳೆಯರಿಗೆ ಅಸಭ್ಯವಾಗಿ ವರ್ತಿಸುತ್ತಿದ್ದು, ಈ ಬಗ್ಗೆ ಮಹಿಳೆಯರಿಂದ ಮಹಿಳಾ ಠಾಣೆಗೆ ದೂರು ದಾಖಲಾಗಿತ್ತು. ಅಸ್ವಸ್ಥನ ತಾಯಿ ಅಸಹಾಯಕಳಾಗಿ ತನ್ನ ಮಗ ಮಾನಸಿಕ ಅಸ್ವಸ್ಥ, ಚಿಕಿತ್ಸೆಗೆ ದಾಖಲಿಸಲು ತನ್ನಿಂದ ಸಾಧ್ಯವಿಲ್ಲ, ತಾನು ದಿನ ಕಳೆಯುವುದೇ ಕಷ್ಟದಲ್ಲಿ ತನಗೆ ಸಹಕರಿಸಿ ಎಂದು ವಿಶುಶೆಟ್ಟಿಯವರಲ್ಲಿ • ವಿನಂತಿಸಿದ್ದರು.

ತಾಯಿಯ ವಿನಂತಿಗೆ ಸ್ಪಂಧಿಸಿದ ವಿಶುಶೆಟ್ಟಿಯವರು ತಾನೇ ಜವಬ್ದಾರಿ ಹೊತ್ತು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿ ನೆರವಾದರು.

ಮಾನಸಿಕ ಅಸ್ವಸ್ಥನ ಕೀಟಲೆಗೆ ಸಾರ್ವಜನಿಕರು ಯುವಕನಿಗೆ ಯದ್ವಾತದ್ವಾ ಥಳಿಸಿದ್ದರು. ಥಳಿಸುವ ಸಾರ್ವಜನಿಕರು ಅಪಾಯಕ್ಕೆ ಸಿಲುಕುವ ಸಾದ್ಯತೆಯೂ ಇದೆ. ಸಾರ್ವಜನಿಕರ ಹೊಡೆತಕ್ಕೆ ಉದರ ಅಥವಾ ಎದೆಯ ಒಳ ಭಾಗದ ಅಂಗಗಳಿಗೆ ಪೆಟ್ಟಾಗಿ ತದನಂತರ ಅಸ್ವಸ್ಥನ ಅನಾರೋಗ್ಯ ತೀವ್ರ ಹದಗೆಡುವ ಅಥವಾ ಮೃತಪಡುವ ಸಂದರ್ಭ ಬರಬಹುದು. ಈ ಬಗ್ಗೆ ಜಾಗೃತರಾಗಬೇಕು

About The Author

Leave a Reply

Your email address will not be published. Required fields are marked *