ಭಯದ ರಂಪಾಟ ನಡೆಸಿದ ಮಾನಸಿಕ ಅಸ್ವಸ್ಥ ; ವಿಶುಶೆಟ್ಟಿಯಿಂದ ರಕ್ಷಣೆ
ಉಡುಪಿ ಡಿ.11 ಉಡುಪಿಯ ಕಲ್ಪನಾ ಟಾಕೀಸ್ ನ ಮುಖ್ಯ ರಸ್ತೆಯಲ್ಲಿ ಮುಂಭಾಗದಲ್ಲಿ ಯುವಕನೊಬ್ಬ ಭೀಕರ ಮಾನಸಿಕ ಅಸ್ವಸ್ಥತೆಗೆ ಒಳಗಾಗಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು ರಾತ್ರಿಯ ಹೊತ್ತು ಭಯದ ವಾತಾವರಣ ಸೃಷ್ಟಿಸಿದ್ದ. ಮಾತನಾಡಿಸುವ ಸಂದರ್ಭದಲ್ಲಿ ಹಲ್ಲೆ ನಡೆಸಿ ತಪ್ಪಿಸಿ ಓಡಿ ಹೋಗಲು ಪ್ರಯತ್ನಿಸುತ್ತಿದ್ದ. ದುರಂತ ಅರಿತ ಸಾರ್ವಜನಿಕರು ಈ ಬಗ್ಗೆ ಪೊಲೀಸ್ ಇಲಾಖೆಗೆ ದೂರು ನೀಡಿದ್ದು, ಪೊಲೀಸರ ವಿನಂತಿಯ ಮೇರೆಗೆ ವಿಶು ಶೆಟ್ಟಿಯವರು ಬಂದು ಸಾರ್ವಜನಿಕರ ಸಹಾಯದಿಂದ ರಕ್ಷಿಸಿ ಬಾಳಿಗ ಆಸ್ಪತ್ರೆಗೆ ದಾಖಲಿಸುವ ಮುಖಾಂತರ ದುರಂತ ತಪ್ಪಿಸಿದ್ದಾರೆ.