ಕುಟುಂಬ ಸೇರಿದ ಬಿಹಾರ ಮೂಲದ ಮಹಿಳೆ : ಮುಗಿಲು ಮುಟ್ಟಿದ ಕುಟುಂಬಸ್ಥರ ಸಂತೋಷದ ಆಕ್ರಂದನ ;ವಿಶು ಶೆಟ್ಟಿ

ಸಾರಥ್ಯದಲ್ಲಿ ; ಜನಾರ್ದನ ಮರವಂತೆ

ಉಡುಪಿ ಜ.22: ಕಳೆದ 2 ವರ್ಷಗಳ ಹಿಂದೆ ಮಾನಸಿಕ ಅಸ್ವಸ್ಥ ಬಿಹಾರದ ಮಹಿಳೆ ತನ್ನ ಕುಟುಂಬ ತೊರೆದಿದ್ದು ಬೀದಿಪಾಲಾಗಿ ಇದೀಗ ಮರಳಿ ಕುಟುಂಬಕ್ಕೆ ಸೇರಿದಾಗ ಕುಟುಂಬದ ಸಂತೋಷದ ಆಕ್ರಂದನ ಮುಗಿಲು ಮುಟ್ಟಿತ್ತು.
ಕಳೆದ ವರ್ಷ ಉಡುಪಿ ನಗರದ ಬೀದಿಯಲ್ಲಿ ಮಾನಸಿಕ ಅಸ್ವಸ್ಥ ಮಹಿಳೆಯನ್ನು ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿ ಮಂಜೇಶ್ವರದ ಶ್ರೀ ಸಾಯಿ ಸೇವಾಶ್ರಮಕ್ಕೆ ದಾಖಲಿಸಿದ್ದು ಚಿಕಿತ್ಸೆಗೆ ಸ್ಪಂದಿಸಿ ತನ್ನ ಊರಾದ ಬಿಹಾರದ ಮಾಹಿತಿ ನೀಡಿ ಕುಟುಂಬ ಸೇರುವಲ್ಲಿ ಯಶಸ್ವಿಯಾಗಿದ್ದಾರೆ
ಮಹಿಳೆ ರಮಾದೇವಿ ಆಶ್ರಮದ ಚಿಕಿತ್ಸೆಯ ಜೊತೆಗೆ ದೈನಂದಿನ ಚಟುವಟಿಕೆಗಳಾದ ಯೋಗ ಧ್ಯಾನ ಕೃಷಿ ಚಟುವಟಿಕೆ, ಸಾಂಸ್ಕೃತಿಕ ಚಟುವಟಿಕೆ, ಆಪ್ತ ಸಮಾಲೋಚನೆಗೆ ಸ್ಪಂದಿಸಿ ಸಹಜ ಸ್ಥಿತಿಗೆ ಬಂದು ತನ್ನ ಕುಟುಂಬದ ವಿಳಾಸ ಹಿನ್ನೆಲೆಯ ವಿವರಗಳನ್ನು ನೀಡಿದ್ದರು. ಈ ಮಾಹಿತಿಯ ಮೇರೆಗೆ ಮುಂಬೈನ ಶ್ರದ್ಧಾ ಪುನರ್ವಸತಿ ಕೇಂದ್ರ ಕುಟುಂಬಕ್ಕೆ ಹಸ್ತಾಂತರಿಸುವಲ್ಲಿ ಯಶಸ್ವಿಯಾದರು. ರಮಾದೇವಿಯನ್ನು ಕುಟುಂಬ ಸೇರಿಸುವ ಸಮಯ ಮಕ್ಕಳು ಹಾಗೂ ಕುಟುಂಬಸ್ಥರು ಭಾವೊದ್ವೇಗದಿಂದ ವಿಸ್ಮಿತರಾಗಿ ಸಂತೋಷದಿಂದ ಕೂಗಿ ಪ್ರೀತಿಯಿಂದ ಆಲಂಗಿಸಿದ ದೃಶ್ಯ ನಿಜವಾಗಿಯೂ ಬಹಳ ಭಾವುಕತೆಯಿಂದ ಕೂಡಿತ್ತು. ಆರೈಕೆ ಹಾಗೂ ಸಲಹಿದ ಆಶ್ರಮದ ಮುಖ್ಯಸ್ಥರಾದ ಡಾ. ಉದಯ್ ಕುಮಾರ್ ದಂಪತಿಗಳು ಹಾಗೂ ಆಶ್ರಮದ ಸಿಬ್ಬಂದಿಗಳಿಗೆ ವಿಶು ಶೆಟ್ಟಿ ಕೃತಜ್ಞತೆ ಸಲ್ಲಿಸಿದ್ದಾರೆ.

About Janardhana K M

Check Also

ಮರವಂತೆ ಮೀನುಗಾರ ಸಹಕಾರಿ ಸಂಘದ 83ನೇ  ವರ್ಷದ ವಾರ್ಷಿಕ ಮಹಾಸಭೆ

ಬೈಂದೂರು ಮರವಂತೆ ಮೀನುಗಾರ ಸಹಕಾರಿ ಸಂಘ ರಿ ವಾರ್ಷಿಕ ಮಹಾಸಭೆ ಇಂದು ಸಹಕಾರಿ ಸಂಘದಲ್ಲಿ ನಡೆಯಿತು ಸಂಘ ಆರಂಭದಲ್ಲಿ ದೀಪ …

Leave a Reply

Your email address will not be published. Required fields are marked *