
ಮಹಿಳೆ ಅನಿತಾ ಪೂಜಾರಿ (40) ಮಾನಸಿಕ ಆಘಾತಕ್ಕೆ ಗುರಿಯಾಗಿ ಸ್ಥಳೀಯರಿಗೆ ದಾಂದಲೆ ನಡೆಸಿದ್ದರು. ಈ ಬಗ್ಗೆ ಸ್ಥಳೀಯರು ವಿಶು ಶೆಟ್ಟಿಗೆ ರಕ್ಷಿಸುವಂತೆ ವಿನಂತಿಸಿದ್ದು, ಉದ್ಯಾವರ ಜಯಶ್ರೀಯವರ ಸಹಾಯದಿಂದ ವಿಶು ಶೆಟ್ಟಿ ರಕ್ಷಿಸಿ ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ್ದರು. ಮಹಿಳೆಯ ತಂದೆ ತಾಯಿ ತೀರಿಕೊಂಡಿದ್ದು ಪುನಃ ಪಿತ್ರೋಡಿಯ ಮನೆಗೆ ಬಿಟ್ಟರೆ ಮಹಿಳೆ ಔಷದಿ ತೆಗೆದುಕೊಳ್ಳದೆ ಪುನಃ ವ್ಯಾಧಿಗೆ ತುತ್ತಾಗಿ ಮೊದಲಿನ ಪರಿಸ್ಥಿತಿಗೆ ಬರುವುದನ್ನು ತಪ್ಪಿಸಲು ಪುನರ್ವಸತಿ ಕಲ್ಪಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದರು. ಈ ಬಗ್ಗೆ ಮಹಿಳಾ ನಿಲಯದ
ಅಧಿಕಾರಿಯವರಿಗೆ ವಿಶು ಶೆಟ್ಟಿ ಮಾಹಿತಿ ನೀಡಿ ಅನುಮತಿ ಪಡೆದು ದಾಖಲಿಸಿದ್ದಾರೆ.
ಬಹಳ ಸಮಯದಿಂದ ಮಹಿಳೆಯ ರಂಪಾಟದಿಂದ ಸ್ಥಳೀಯರು ಭಯ ಭೀತರಾಗಿದ್ದು ಇದೀಗ ನಿಟ್ಟುಸಿರು ಬಿಟ್ಟಿದ್ದಾರೆ. . ಸ್ಪಂದಿಸಿದ ವಿಶು ಶೆಟ್ಟಿ ಹಾಗೂ ಜಯಶ್ರೀ ಉದ್ಯಾವರ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಚಿಕಿತ್ಸಾ ವೆಚ್ಚ ರೂ.46000/- ಪಿತ್ರೋಡಿಯ ಉದ್ಯಮಿಗಳು ಭರಿಸಿ ಸಹಕರಿಸಿದ್ದಾರೆ.
ಸಾರಥ್ಯದಲ್ಲಿ ; ಜನಾರ್ದನ ಮರವಂತೆ