ಉಡುಪಿ ಮಾ.23: ಆದಿಉಡುಪಿ ರಿಕ್ಷಾ ನಿಲ್ದಾಣದ ಬಳಿ ಮಹಿಳೆ ಯೊಬ್ಬರಿಗೆ ವ್ಯಕ್ತಿಯೋರ್ವ ಹಲ್ಲೆ ನಡೆಸಿದ್ದು ಮುಖ ಮೂಗಿನಲ್ಲಿ ರಕ್ತ ಸೋರುತ್ತಿದ್ದು, ವಿಶು ಶೆಟ್ಟಿ ಅಂಬಲಪಾಡಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆಮಹಿಳೆ ತನ್ನ ಹೆಸರು ಮಹಿರ್ ನಿಶಾ(28) ತಂದೆ ಅಬ್ಬಾಸ್ ಶಿಕಾರಿಪುರ ಮೂಲದವಳಾಗಿದ್ದೇನೆ ಎಂದು ಮಾಹಿತಿ ನೀಡಿದ್ದಾಳೆ. ಹಲ್ಲೆ ನಡೆಸಿದ ವ್ಯಕ್ತಿ ಹಾಗೂ ಮಹಿಳೆಗೆ ಏನು ಸಂಬಂಧ ಎಂದು ತಿಳಿದು ಬಂದಿಲ್ಲ. ರಿಕ್ಷಾ ಚಾಲಕರು ಸಹಕರಿಸಿದ್ದಾರೆ.