
ಉಡುಪಿ : 6 ಎಕರೆ ಜಮೀನು ಇದ್ದರೂ, ಆಸ್ತಿ ವಿಷಯದಲ್ಲಿ ತನ್ನದೇ ಹೆಣ್ಣುಮಕ್ಕಳ ಕಾಟ ತಾಳಲಾರದೆ ಮನೆ ಬಿಟ್ಟು ಬಂದು ಉಡುಪಿಯ ಸರಕಾರಿ ಬಸ್ ನಿಲ್ದಾಣದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಶಿವಮೊಗ್ಗ ಜಿಲ್ಲೆಯ ನಗರದ ನಿವಾಸಿ ಜಯಮ್ಮ (80) ಹಾಗೂ ಆಕೆಯ ಮಗ ಮಂಜುನಾಥ ಎಂಬವರನ್ನು ಸಮಾಜ ಸೇವಕ ವಿಶು ಶೆಟ್ಟಿ ಅವರು ಸೋಮವಾರ ರಕ್ಷಿಸಿದ್ದಾರೆ.
ವೃದ್ಧೆ ಜಯಮ್ಮ ಅವರನ್ನು ಕೊಳಲಗಿರಿಯ ಸ್ವರ್ಗ ಆಶ್ರಮಕ್ಕೆ ದಾಖಲಿಸಲಾಗಿದ್ದು, ಅನಾರೋಗ್ಯ ಪೀಡಿತ ಮಂಜುನಾಥನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಹೆಣ್ಮಕ್ಕಳ ಇಚ್ಚೆಯಂತೆ ಆಸ್ತಿಯನ್ನು ಕೊಡಲು ನನಗೆ ಸಾಧ್ಯವಿಲ್ಲ. ಹೀಗಾಗಿ ನನ್ನೆಲ್ಲಾ ಆಸ್ತಿಪಾಸ್ತಿಯ ದಾಖಲೆಗಳೊಂದಿಗೆ ಮನೆ ಬಿಟ್ಟು ಬಂದಿದ್ದೇನೆ. ನನ್ನನ್ನು ಯಾವುದಾದರೂ ಆಶ್ರಮಕ್ಕೆ ಸೇರಿಸಿ, ಹಿಂಸೆಯಿಂದ ಪಾರುಮಾಡಿ ಎಂದು ಆಕೆ ಅಂಗಲಾಚಿದ್ದಾರೆ.
ಪ್ರಕರಣದ ಬಗ್ಗೆ ಹಿರಿಯ ನಾಗರಿಕರ ಸಹಾಯವಾಣಿಗೆ ವಿಶು ಶೆಟ್ಟಿ ಮಾಹಿತಿ ನೀಡಿದ್ದಾರೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ಕೃತಿಕ್ ಕೊಕ್ಕರ್ಣೆ ಸಹಕರಿಸಿದರು
ಸತ್ಯ ಅಸತ್ಯತೆಯ ಬಗ್ಗೆ ಏನನ್ನು ಹೇಳಲಾಗುವುದಿಲ್ಲ. ವೃದ್ಧಾಪ್ಯದ ಸಮಯದಲ್ಲಿ ಈ ರೀತಿ ಬೀದಿಪಾಲಾಗುವುದು ಸರಿಯಲ್ಲ. ವೃದ್ದೆಗೆ ಸಂಬಂಧಪಟ್ಟವರು ಸರಿಯಾದ ನ್ಯಾಯವನ್ನು ಒದಗಿಸಿಕೊಡಬೇಕೆಂದು ಸಮಾಜ ಸೇವಕ ವಿಶು ಶೆಟ್ಟಿಯವರು ಮನವಿ ಮಾಡಿಕೊಂಡಿದ್ದಾರೆ