October 23, 2025
img_20250803_1831359029919754187269994.jpg

ಸಾರಥ್ಯದಲ್ಲಿ ,;ಜನಾರ್ದನ ಕೆ ಎಂ ಮರವಂತೆ

ಶ್ರೀಲಕ್ಷ್ಮಿ ಹೆಸರಿನ ಬೋಟು ಶುಕ್ರವಾರ ಮೀನುಗಾರಿಕೆಗೆ ತೆರಳಿತ್ತು. ಸಂಜೆ ಮೀನು ಬೇಟೆ ಮುಗಿಸಿ ಬೈತಖೋಲ್ ಬಂದರಿಗೆ ಬಂದಿತ್ತು. ಈ ವೇಳೆ ಬೋಟಿನ ಕಾರ್ಮಿಕರಿಗಾಗಿ ಬೋಟಿನ ಒಳಗೆ ಅಡುಗೆ ಮಾಡಲಾಗಿದ್ದು, ಶಿಖಾರಿಯಾದ ಮೀನುಗಳನ್ನು ಖಾಲಿ ಮಾಡುವ ವೇಳೆ ಅಡುಗೆ ಅನಿಲ ಸೋರಿಕೆಯಾಯಿತು. ಅಡುಗೆ ಮಾಡುತ್ತಿದ್ದ ಬೆಂಕಿ ಇಡೀ ಬೋಟನ್ನು ಆವರಿಸಿತು.

ಕ್ಷಣ ಮಾತ್ರದಲ್ಲಿ ಬೆಂಕಿಯ ಜ್ವಾಲೆ ದೊಡ್ಡದಾಯಿತು. ಅಲ್ಲಿದ್ದ ಮೀನುಗಾರರು ಹಾಗೂ ಕಾರ್ಮಿಕರು ಇದರಿಂದ ಭಯಗೊಂಡರು. ಕೆಲವರು ಅಲ್ಲಿಂದ ಓಡಲು ಶುರು ಮಾಡಿದರು. ಸಿಲೆಂಡ‌ರ್ ಬಳಿಯಿದ್ದ ಮೀನುಗಾರಿಕಾ ಬಲೆ ಸಹ ಸುಟ್ಟಿತು. ಈ ವೇಳೆ ಅಲ್ಲಿದ್ದ ಕೆಲವರು ಒದ್ದೆ ಗೋಣಿಚೀಲವನ್ನು ಸಿಲೆಂಡ‌ರ್’ಗೆ ಹಾಕಿದರು. ಆದರೂ ಬೆಂಕಿ ಕಡಿಮೆ ಆಗಲಿಲ್ಲ.

ಕೊನೆಗೆ ಬೋಟ್ ಮಾಲಕ ಸಿಲೆಂಡರನ್ನು ಸಮುದ್ರಕ್ಕೆ ಎಸೆದಿದ್ದು, ಬೆಂಕಿ ಕ್ರಮೇಣ ಕಡಿಮೆಯಾಯಿತು. ಮೀನುಗಾರರು ನಿಟ್ಟುಸಿರು ಬಿಟ್ಟರು.

About The Author

Leave a Reply

Your email address will not be published. Required fields are marked *