
ಬೈಂದೂರು ,;ಉಡುಪಿ ,ಅಖಿಲ ಕರ್ನಾಟಕ ಮಹಿಳಾ ಸೌಂದರ್ಯ ತಜ್ಞೆಯರ ಸಂಘ ಉಡುಪಿ ಇದರ ಆಶ್ರಯದಲ್ಲಿ ವಿಶ್ವ ಗೀತಾ ಪರ್ಯಾಯದ ಪ್ರಯುಕ್ತ “ಸಿಂಗಾರ ಸಿರಿ” ಮದುಮಗಳ ಶೃಂಗಾರದಲ್ಲಿ ಸೌಂದರ್ಯ ತಜ್ಞೆಯರ ಕೌಶಲಗಳ ಅನಾವರಣ ಕಾರ್ಯಕ್ರಮವನ್ನು ಆಗಸ್ಟ್ 24ರಂದು ಉಡುಪಿ ಕೃಷ್ಣಮಠದ ರಾಜಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಅಖಿಲ ಕರ್ನಾಟಕ ಮಹಿಳಾ ಸೌಂದರ್ಯ ತಜ್ಞೆಯರ ಸಂಘದ ಉಡುಪಿ ಜಿಲ್ಲಾಧ್ಯಕ್ಷೆ ನಂದಾ ಶೆಟ್ಟಿ ತಿಳಿಸಿದ್ದಾರೆ.

ಬೈಂದೂರು, ಕುಂದಾಪುರ, ಕಾರ್ಕಳ, ಬ್ರಹ್ಮಾವರ, ಉಡುಪಿ, ಕಾಪು ಹಾಗೂ ಕಾರ್ಕಳ ವಲಯದಿಂದ 100ಕ್ಕೂ ಅಧಿಕ ಪಾರ್ಲರ್ ನವರು ಭಾಗವಹಿಸಲಿದ್ದಾರೆ. ಅಲ್ಲದೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.