October 21, 2025
img_20250827_0729181914538959735015925.jpg

ಮಹಿಳಾ ಮೀನುಗಾರರ ವಿವಿಧೋದ್ದೇಶ ಸಹಕಾರಿ ಸಂಘ ನಿ ಮರವಂತೆ ಇದರ 2024-25 ನೇ ಸಾಲಿನ ವಾರ್ಷಿಕ ಮಹಾಸಭೆಯು ದಿನಾಂಕ 23/08/2025 ರಂದು ನಾವುಂದ ಮಹಾಗಣಪತಿ ಮಾಂಗಲ್ಯ ಮಂಟಪದಲ್ಲಿ ಸಂಘದ ಅಧ್ಯಕ್ಷರಾದ ಶ್ರೀಮತಿ ಕಮಲಾಕ್ಷೀ ಖಾರ್ವಿ ಮರವಂತೆ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕು.ಛಾಯ ರವರು ಪ್ರಾರ್ಥನೆಯೊಂದಿಗೆ ಸಭೆಯು ಆರಂಭವಾಯಿತು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಶ್ರೀನಿವಾಸ ಅಡಿಗ ಸಭೆಗೆ ಹಾಜರಾದ ಸದಸ್ಯರನ್ನು ಸ್ವಾಗತಿಸಿ ಪ್ರಾಸ್ಥಾವಿಕ ಮಾತುಗಳಾನ್ನಾಡಿ ಸಂಘದ ತ್ವರಿತಗತಿಯ ಬೆಳವಣಿಗೆ ಬಗ್ಗೆ ಸ-ವಿವರವಾಗಿ ವಿವರಿಸಿದರು, ಕು.ಚೈತ್ರಾ ಹಿಂದಿನ ಮಹಾಸಭೆ ನಡವಳಿಕೆಯನ್ನು ವಾಚಿಸಿದರು, ಸಂಘದ ಲೆಕ್ಕಿಗೆ ಶ್ರೀಮತಿ ರೇಖಾರವರು ನಿವ್ವಳ ಲಾಭದ ವಿಂಗಡಣೆ ಮತ್ತು ಮುಂದಿನ ಸಾಲಿನ ಅಂದಾಜು ಆಯ-ವ್ಯಯ ಪಟ್ಟಿ ಬಜೇಟ್ ಮಂಜುರಾತಿ ಯನ್ನು ಓದಿ ಹೇಳಿದರು.
ಸಂಘದ ಅಧ್ಯಕ್ಷೆ ಶ್ರೀಮತಿ ಕಮಲಾಕ್ಷೀ ಖಾರ್ವಿ ಮರವಂತೆ ಅಧ್ಯಕ್ಷರ ಭಾಷಣ ಮಾಡುತ್ತಾ ಸಂಘವು ಸರ್ವತೋಮುಖ ಬೆಳವಣಿಗೆಗೆ ಸದಸ್ಯರ ಪಾಲ್ಗೊಳ್ಳುವಿಕೆ ಅತ್ಯಗತ್ಯ, ಸಂಘದ ತ್ವರಿತ ಬೆಳವಣಿಗೆ, ಲಾಭಾಂಶ,ಧೀರ್ಘಾವಧಿ ಸಾಲು, ಗೃಹಸಾಲ, ಚಿನ್ನಾಭರಣ ಸಾಲ ಹಾಗೂ ಮುಂದಿನ ಯೋಜನೆಗಳ ಬಗ್ಗೆ ವಿವರಿಸಿದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷೆ ಶ್ರೀಮತಿ ವನಿತಾ ಖಾರ್ವಿ ಮರವಂತೆ ನಿರ್ದೇಶಕರುಗಳಾದ ಶ್ರೀಮತಿ ಪೂರ್ಣಿಮಾ ಮೊಗವೀರ ‘ನಾವುಂದ,ಶ್ರೀಮತಿ ನಾಗರತ್ನ ಖಾರ್ವಿ ಮರವಂತೆ,ಶ್ರೀಮತಿ ಆಶಾ ಪೂಜಾರಿ ನಾವುಂದ ಶ್ರೀಮತಿ ಸುಜಾತ ಪೂಜಾರಿ ನಾವುಂದ, ಶ್ರೀಮತಿ ಸವಿತಾ ಖಾರ್ವಿ

ಮರವಂತೆ,ಶ್ರೀಮತಿ ಶೈಲಾ ಖಾರ್ವಿ ಮರವಂತೆ, ಶ್ರೀಮತಿ ನಬಿಸಾ ನಾವುಂದ ಶ್ರೀಮತಿ ನೇತ್ರಾವತಿ ಪೂಜಾರಿ ನಾವುಂದ, ಶ್ರೀಮತಿ ವಿಜಯ ದಾಸ್ ಉಪಸ್ಥಿತರಿದ್ದರು, ಕೊನೆಯಲ್ಲಿ ಕು.ಹರ್ಷ ರವರಿಂದ ಧನ್ಯವಾದವಿತ್ತರು.

About The Author

Leave a Reply

Your email address will not be published. Required fields are marked *