
ಉಡುಪಿ ಸೆ.10: ಅತಂತ್ರ ಸ್ಥಿತಿಯಲ್ಲಿ ಅಸಹಾಯಕಳಾಗಿ ಸಮಸ್ಯೆಯಲ್ಲಿ ಬಿದ್ದ ಯುವತಿಯನ್ನು ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿ ಧೈರ್ಯ ತುಂಬಿ ಸಾಂತ್ವನ ಕೇಂದ್ರದ ಮೂಲಕ ಸಮಾಲೋಚನೆ ನಡೆಸಿ ತಾತ್ಕಾಲಿಕ ನೆಲೆ ಕಲ್ಪಿಸಿದ ಘಟನೆ ನಡೆದಿದೆ.

ಯುವತಿಯ ಸಮಸ್ಯೆ ಪರಿಹಾರಕ್ಕೆ ಬೇಕಾಗುವ ಕಾಲಾವಕಾಶಕ್ಕೆ ತಾತ್ಕಾಲಿಕ ನೆಲೆಗಾಗಿ ವಿಶು ಶೆಟ್ಟಿ ವಿನಂತಿಗೆ ಸರಕಾರದ ನೋಂದಣಿ ಸಂಸ್ಥೆಯೊಂದರಲ್ಲಿ ಅನುಮತಿ ದೊರೆತಿದ್ದು, ಸಂಸ್ಥೆಗೆ ವಿಶು ಶೆಟ್ಟಿಯವರು ಸಾಂತ್ವನ ಕೇಂದ್ರದ ಸಿಬ್ಬಂದಿಗಳ ಜೊತೆ ದಾಖಲಿಸಿದ್ದಾರೆ.
ಯುವತಿಗೆ ಸಂಪೂರ್ಣ ನೆರವು ಹಾಗೂ ಎಲ್ಲ ರೀತಿಯ ಸಹಕಾರ ನೀಡುವುದಾಗಿ ವಿಶು ಶೆಟ್ಟಿ ಧೈರ್ಯ ತುಂಬಿ ದಾಖಲಿಸಿದ್ದಾರೆ.