October 23, 2025
img_20250914_1128233182535373340212276.jpg

ಬೈಂದೂರು ವಲಯ ನಾಡ ದೋಣಿ ಮೀನುಗಾರ ಸಂಘದಿಂದ ಇಂದು ಮರವಂತೆಯ ಮಹಾರಾಜ ವರಾಹ  ಮತ್ತು   ಗಂಗಾಧರೇಶ್ವರ ದೇವಸ್ಥಾನದಲ್ಲಿ ನಾಡದೋಣಿ ಅಧ್ಯಕ್ಷರಾದ ಬಿ ನಾಗೇಶ್ ಖಾರ್ವಿಯವರ ನೇತ್ರತ್ವದಲ್ಲಿ ವರಾಹ ದೇವಸ್ಥಾನದಲ್ಲಿ ಪೂಜೆ  ಮಾಡಿ ಮತ್ತು ಸಮುದ್ರದ ರಾಜನಿಗೆ ಪ್ರಸಾದವನ್ನು ಬಿಡುವ ಕಾರ್ಯಕ್ರಮವನ್ನು ಕೈಗೊಳ್ಳಲಾಯಿತು
ಬೈಂದೂರು ವಲಯ ನಾಡದೋಣಿ ಅಧ್ಯಕ್ಷರಾದ ಬಿ ನಾಗೇಶ್ ಖಾರ್ವಿ ಮಾತನ್ನಾಡಿ ಕಳೆದ ವರ್ಷ ಮತ್ತು ಈ ವರ್ಷ ಮೀನಿನ ಸಂತತಿ ಕಡಿಮೆ ಆಗಿದ್ದು ಮುಂದಿನ ದಿನಗಳಲ್ಲಿ ಮೀನುಗಳು ಇಲ್ಲಿಂದಂತೆ ಆಗುತ್ತದೆ, ಈ ವರ್ಷ ಆರಂಭದಲ್ಲಿ ತೋಂದರೆ ಆಗೀದ್ದು , ಸಮಸ್ತ ಮೀನುಗಾರು ಒಂದಾಗಿದ್ದು ಮರವಂತೆಯ ವರಾಹ ದೇವಸ್ಥಾನದಲ್ಲಿ  ವರಾಹ ದೇವರಿಗೆ ಅಭಾರಿ ಕಾರ್ಯಕ್ರಮ ಹರೆಕೆ  ಹೊತ್ತು  ಸಮುದ್ರ ರಾಜನಿಗೆ  ಪ್ರಸಾದವನ್ನು ಬಿಟ್ಟು   ಶ್ರೀ ದೇವರಲ್ಲಿ ಸಂಕಷ್ಟವನ್ನು ತೊಡಿಕೊಂಡರು.

ಈ ಸಮಯದಲ್ಲಿ ಬೈಂದೂರು ವಲಯ ನಾಡದೋಣಿ ಅಧ್ಯಕ್ಷರಾದ ಸಿ ನಾಗೇಶ್ ಖಾರ್ವಿ, ರಾಣಿ ಬಲೆ ಒಕ್ಕೂಟದ ಅಧ್ಯಕ್ಷರಾದ ವೆಂಕಟರಮಣ ಖಾರ್ವಿ, ಮರವಂತೆ ಮೀನುಗಾರ ಸೇವಾ ಸಮಿತಿಯ ಅಧ್ಯಕ್ಷರಾದ ಸಿ ಸುರೇಶ್ ಖಾರ್ವಿ, ವೆಂಕಟ್ರಮಣ ಖಾರ್ವಿ, ಮಾಜಿ ಅಧ್ಯಕ್ಷರಾದ  ಕೆ ಎಂ ಸೋಮಶೇಖರ್,  ಬಿಎಚ್ ಕೆ ಕುಮಾರ್, ಸಮಸ್ತ ನಾಡದೋಣಿ ಮೀನುಗಾರರು ಉಪಸ್ಥಿತರಿದ್ದರು

About The Author

Leave a Reply

Your email address will not be published. Required fields are marked *