

ರೋಗಿಯನ್ನು ಶಿರ್ವ ಮಟ್ಟಾರ್ ನಿವಾಸಿ ಗಂಗಾಧರ ಪೂಜಾರಿ (೫೪) ಎಂದು ಗುರುತಿಸಲಾಗಿದ್ದು, ಹೈಡ್ರಾಸಿಲ್ ಸಮಸ್ಯೆಯಿಂದ ಬಳಲುತ್ತಿದ್ದು,ತುರ್ತು ಶಸ್ತçಚಿಕಿತ್ಸೆಯ ಆವಶ್ಯಕತೆಯಿದೆ.
ರಕ್ಷಣೆಯ ಸಂದರ್ಭದಲ್ಲಿ ಅಣ್ಣಾ.. ಅಣ್ಣಾ ಎಂದು ಕರೆಯುತ್ತಾ ತೀರಾ ಅನಾರೋಗ್ಯದಲ್ಲಿರುವ ನನ್ನನ್ನು ವಿಶು ಶೆಟ್ಟಿ ಅವರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ನನಗೆ ನಿಮ್ಮ ನೆರವಿನ ಆವಶ್ಯಕತೆಯಿದೆ. ಕೂಡಲೇ ಜಿಲ್ಲಾಸ್ಪತ್ರೆಗೆ ಬನ್ನಿ. ನನ್ನನ್ನು ಬದುಕಿಸಿ ಎಂದು ಅವರು ತನ್ನ ಕುಟುಂಬಿಕರ ನೆರವಿಗೆ ಮೊರೆ ಇಡುತ್ತಿರುವುದು ನೋಡುಗರ ಕಣ್ಣೀರು ತರಿಸುವಂತಿದೆ.
ವ್ಯಕ್ತಿಯ ಸಂಬAಧಿಕರು ಅಥವಾ ವಾರೀಸುದಾರರು ತುರ್ತಾಗಿ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸುವAತೆ ವಿಶು ಶೆಟ್ಟಿ ವಿನಂತಿಸಿದ್ದಾರೆ. ವ್ಯಕ್ತಿಯ ರಕ್ಷಣಾ ಕಾರ್ಯಾಚರಣೆಯಲ್ಲಿ ಸ್ಥಳೀಯರಾದ ರಾಜೇಶ್ ಆಚಾರ್ಯ ಹಾಗೂ ಮತ್ತಿತರರು ನೆರವಾದರು.
ಫೋಟೊ ಲಗತ್ತಿಸಿದೆ.