October 23, 2025
img-20251001-wa00465981351512958745697.jpg

ಉಡುಪಿ :ದೇವಸ್ಥಾನದಲ್ಲಿ ನವರಾತ್ರಿಯ ಸಡಗರದಲ್ಲಿ ಜನನಿಬಿಡದಲ್ಲಿ ಮಹಿಳೆಯರಿರ್ವರು ವೃದ್ಧ ಮಹಿಳೆಯೋರ್ವರ ಚಿನ್ನದ ಸರವನ್ನು ಚಾಣಾಕ್ಷತನದಿಂದ ಎಗರಿಸಿದ್ದು, ಸಂಶಯಗೊಂಡ ವೃದ್ದ ಮಹಿಳೆಯು ಮಹಿಳೆಯರಿಬ್ಬರ ಮೇಲೆ ಸಂಶಯ ಇದೆ ಎಂದು ಹೇಳಿರುತ್ತಾರೆ. ತದನಂತರ ಮಹಿಳೆಯರನ್ನು ಪರಿಶಿಲಿಸುದಾಗ ಸರವು ಸಿಕ್ಕಿರುತ್ತದೆ. ಈ ಬಗ್ಗೆಕೋಪಗೊಂಡ ಸಾರ್ವಜನಿಕ

ಮಹಿಳೆಯರು ಆಪಾದಿತ ಮಹಿಳೆಯರಿಗೆ ಹಲ್ಲೆ ನಡೆಸಲು ಮುಂದಾಗಿದ್ದು, ವಿಶುಶೆಟ್ಟಿಯವರು ಮಹಿಳೆಯರನ್ನು ರಕ್ಷಿಸಿರುತ್ತಾರೆ. ಪೆಟ್ಟು ತಿಂದ ಮಹಿಳೆಯರು ಪೋಲಿಸರಿಗೆ ಒಪ್ಪಿಸುವ ಸಂದರ್ಭದಲ್ಲಿ ಅನಾರೋಗ್ಯದ ಮಾತು ಆಡಿದ್ದಾರೆ. ತದನಂತರ ವಿಶುಶೆಟ್ಟಿಯವರು ಆಪಾದಿತ ಮಹಿಳೆಯರನ್ನು ತನ್ನ ವಾಹನದಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಪೋಲಿಸರಿಗೆ ಒಪ್ಪಿಸಿರುತ್ತಾರೆ. ಆಪಾದಿತ ಮಹಿಳೆಯರು ತಮಿಳುನಾಡು ಮೂಲದವರೆಂಬ ಮಾಹಿತಿ ಇದೆ.

About The Author

Leave a Reply

Your email address will not be published. Required fields are marked *