Sagara News

ಜನಾರ್ದನ ಕೆ ಎಂ ಮರವಂತೆ ಸಾರಥ್ಯದಲ್ಲಿ….!

ಶ್ರೀರಾಮ ಸೌಹಾರ್ಧ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನೂತನ ಮರವಂತೆ ಶಾಖೆ ಉದ್ಘಾಟನೆ,ಗ್ರಾಹಕರ ವಿಶ್ವಾಸ, ಗುಣಮಟ್ಟದ ಸೇವೆಯಿಂದ ಸಂಸ್ಥೆ ಅಬಿವೃದ್ಧಿ: ಬಿ.ಎಮ್.ಸುಕುಮಾರ ಶೆಟ್ಟಿ

ಬೈಂದೂರು,ಡಿ.14: ಶ್ರೀ ರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್‌ ಸೊಸೈಟಿ ನಿ. ಬೈಂದೂರು  ಇದರ 6ನೇ ನೂತನ ಶಾಖೆ ಮರವಂತೆ ಸಮೃದ್ದಿ ಕಾಂಪ್ಲೇಕ್ಸ್‌ನಲ್ಲಿ ರವಿವಾರ ಉದ್ಘಾಟನೆಗೊಂಡಿತು.
ಮಾಜಿ ಶಾಸಕ ಬಿ.ಎಮ್.ಸುಕುಮಾರ ಶೆಟ್ಟಿ ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ ಸಹಕಾರಿ ಕ್ಷೇತ್ರದಲ್ಲಿ ಎಸ್.ರಾಜು ಪೂಜಾರಿ ಯವರು ಹಿರಿಯ ಮುಂದಾಳುಗಳಾಗಿದ್ದು. ಅವರ ಅಧ್ಯಕ್ಷತೆಯ ಶ್ರೀರಾಮ ಸೌಹಾರ್ಧ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅತ್ಯುತ್ತಮ ಸಹಕಾರಿ ಸಂಸ್ಥೆಯಾಗಿ ಮೂಡಿಬಂದಿದೆ.ಮರವಂತೆಯಲ್ಲಿ 6ನೇ ನೂತನ ಶಾಖೆಯನ್ನು ಆರಂಭಿಸುವ ಮೂಲಕ ಗ್ರಾಮೀಣ ಭಾಗಕ್ಕೆ ಇನ್ನಷ್ಟು ಆರ್ಥಿಕ ಸಹಕಾರ ದೊರೆಯುವಂತಾಗಿದೆ.ಸಂಸ್ಥೆ ಗುಣಮಟ್ಟದ ಸೇವೆ ಮೂಲಕ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.
ಶ್ರೀರಾಮ ಸೌಹಾರ್ಧ ಕ್ರೆಡಿಟ್ ಕೋ ಆಪರೇಟಿವ್‌ ಸೊಸೈಟಿ ಅಧ್ಯಕ್ಷ ಎಸ್‌.ರಾಜು ಪೂಜಾರಿ ಮಾತನಾಡಿ ಶ್ರೀರಾಮ ಸೌಹಾರ್ಧ ಕ್ರೆಡಿಟ್ ಸೊಸೈಟಿ ಗ್ರಾಹಕರ ವಿಶ್ವಾಸ ಮತ್ತು ಗುಣಮಟ್ಟದ ಸೇವೆ ಮೂಲಕ ಪ್ರಗತಿ ಕಂಡಿದ್ದು.ಗ್ರಾಹಕರ ವಿಶ್ವಾಸದ ಜೊತೆಗೆ ಸಂಸ್ಥೆ ಇನ್ನಷ್ಟು ಹೊಸತನದೊಂದಿಗೆ ಉತ್ಕೃಷ್ಟ ಸೇವೆ ನೀಡಲು ಸದಾ ಆಧ್ಯತೆ ನೀಡಲಾಗುವುದು, ಒಂದು ಸಂಸ್ಥೆ ಬೆಳೆಯಲು ಗ್ರಾಹಕರು ಅಗತ್ಯ ಎಂದರು.

About The Author

Leave a Reply

Your email address will not be published. Required fields are marked *