March 4, 2026
ಬೈಂದೂರು: ಬೈಂದೂರು ರಾಜಕೀಯ ವಲಯದಲ್ಲಿ ಬಾರಿ ಸಂಚಲನದ ಸುದ್ದಿ ಹೊರಬಿದ್ದಿದೆ. ಕಳೆದ 13 ವರ್ಷಗಳಿಂದ ಬೈಂದೂರಿನಲ್ಲಿ ಬಿಜೆಪಿ ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಬೈಂದೂರು ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ಹಾಗೂ ರೈತ ಪರ ಹೋರಾಟಗಾರ ದೀಪಕ್ ಕುಮಾರ್ ಶೆಟ್ಟಿ ಯವರನ್ನು ಪಕ್ಷದಿಂದ 6 ವರ್ಷದ ಅವಧಿಗೆ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.ಈ ನಿಲುವು ಬಿಜೆಪಿ ಕಾರ್ಯಕರ್ತ ವಲಯದಲ್ಲಿ ಬಾರಿ ಸಂಚಲನ ಉಂಟು ಮಾಡಿದ್ದು ದೀಪಕ್ ಕುಮಾರ್ ಶೆಟ್ಟಿ ಅಭಿಮಾನಿಗಳಿಗೆ ಬಾರಿ ಅಸಾಮಾಧಾನ ಉಂಟಾಗಿದೆ.

ರೈತರ ಪರ ನಿಂತಿದ್ದೆ ಮುಳುವಾಯಿತೆ?; ದೀಪಕ್ ಕುಮಾ‌ರ್ ಶೆಟ್ಟಿ ಉಚ್ಚಾಟನೆಗೆ ಪ್ರಮುಖ ಕಾರಣ ಬೈಂದೂರು ಶಾಸಕರು ಮತ್ತು ಇವರ ನಡುವಿನ ಆಂತರಿಕ ಸಮರವಾಗಿದೆ ಎನ್ನುವ ಅಭಿಪ್ರಾಯ ಕೇಳಿ ಬಂದಿದೆ. ಪಕ್ಷದ ಅಧೀಕೃತ ವೇದಿಕೆಯನ್ನು ಬಿಟ್ಟು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗುವ ಮೂಲಕ ಪಕ್ಷದ ಘನತೆ, ಶಿಸ್ತು, ಎಕತೆ ಹಾನಿಯಾಗಿರುವ ಕಾರಣ ನೀಡಿ ಉಚ್ಚಾಟನೆ ಮಾಡಲಾಗಿದೆ.ಇದಕ್ಕೆ ಬಹುಮುಖ್ಯ ಕಾರಣ ದೀಪಕ್ ಕುಮಾರ್ ಶೆಟ್ಟಿಯವರು ಗ್ರಾಮೀಣ ಭಾಗದ ರೈತರಿಗೆ ನ್ಯಾಯ ಓದಗಿಸಲು ಹೋರಾಟ ಆರಂಭಿಸಿ ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿರುವುದು ಶಾಸಕರಿಗೆ ನುಂಗಲಾರದ ಬಿಸಿ ತುಪ್ಪವಾಗಿತ್ತು. ಮಾತ್ರವಲ್ಲದೆ ಕಳೆದ ಒಂದು ವರ್ಷದಿಂದ ಶಾಸಕರು ಮತ್ತು ದೀಪಕ್ ಕುಮಾರ್ ಶೆಟ್ಟಿ ಯವರ ನಡುವಿನ ತೆರೆಮರೆಯ ಸೆಣಸಾಟ ಗುಟ್ಟಾಗಿ

ಉಳಿದಿರಲಿಲ್ಲ.ಮರಳು ದಂಧೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವಿನ ಬಳಿ ಒಪ್ಪಂದದ ಹೊಂದಾಣಿಕೆ ಕುರಿತು ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು.ಹೀಗಾಗಿ ರೈತ ಹೋರಾಟಕ್ಕೆ ಹಿನ್ನೆಡೆ ಮಾಡಬೇಕೆನ್ನುವ ಮೂಲ ಉದ್ದೇಶದಿಂದ ಇಷ್ಟೆಲ್ಲಾ ಪ್ರಯತ್ನ ನಡೆದಿದೆ ಎನ್ನುವುದು ದೀಪಕ್ ಕುಮಾರ್ ಶೆಟ್ಟಿ ಯವರ ಬೆಂಬಲಿಗರ ಅಭಿಪ್ರಾಯವಾಗಿದೆ.

About The Author

Leave a Reply

Your email address will not be published. Required fields are marked *