*ಚಿಕಿತ್ಸೆಗೆ ಸ್ಪಂದಿಸಿದ ಮೂವರು ಮಹಿಳೆಯರು ರಾಜ್ಯ ಮಹಿಳಾ ನಿಲಯಕ್ಕೆ ದಾಖಲು*
ಉಡುಪಿ ಎ. 3: ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ಮೂರು ಬೇರೆ ಬೇರೆ ಸ್ಥಳಗಳಲ್ಲಿ ವಿಶು ಶೆಟ್ಟಿ ಅಂಬಲಪಾಡಿಯವರಿಂದ ರಕ್ಷಿಸಲ್ಪಟ್ಟ ಮೂವರು ಮಾನಸಿಕ ಅಸ್ವಸ್ಥ ಮಹಿಳೆಯರು ಚಿಕಿತ್ಸೆಗೆ ಸ್ಪಂದಿಸಿ ಸಹಜ ಸ್ಥಿತಿಗೆ ಬಂದಿದ್ದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು ಸಂಬಂಧಿಕರ ಸ್ಪಂದನೆ ಹಾಗೂ ಪತ್ತೆಯಾಗದ ಕಾರಣ ವಿಶು ಶೆಟ್ಟಿ ಮೂವರೂ ಮಹಿಳೆಯರನ್ನು ನಿಟ್ಟೂರಿನ ರಾಜ್ಯ ಮಹಿಳಾ ನಿಲಯಕ್ಕೆ ದಾಖಲಿಸಿದ ಘಟನೆ ನಡೆದಿದೆ. ಕಾಪು ಠಾಣಾ ವ್ಯಾಪ್ತಿಯಲ್ಲಿ ಉತ್ತರ ಪ್ರದೇಶದ ಮಹಿಳೆ ಖುಷಿಯಾ(30) ಹಾಗೂ ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಮಹಾರಾಷ್ಟ್ರದ ಅನಿತಾ (35) ಹಾಗೂ ಹಿರಿಯಡ್ಕ ಠಾಣಾ ವ್ಯಾಪ್ತಿಯ ಆತ್ರಾಡಿಯ ಜಯಂತಿ ಪೂಜಾರಿ (45) ವಿಶು ಶೆಟ್ಟಿಯವರಿಂದ ರಕ್ಷಿಸಲ್ಪಟ್ಟ ಮಾನಸಿಕ ಅಸ್ವಸ್ಥ ಮಹಿಳೆಯರು.ವೈದ್ಯರಾದ ಡಾ. ವಾಸುದೇವ, ಡಾ. ಸುನಿಲ್, ಸಿಬ್ಬಂದಿ ಹಾಗೂ ಇ ಸಿ ಆರ್ ಸಿ ಸುರೇಶರವರ ಚಿಕಿತ್ಸೆ ಹಾಗೂ ಸ್ಪಂದನೆಗೆ ಮಹಿಳೆಯರು ಸಹಜ ಸ್ಥಿತಿಗೆ ಬಹು ಬೇಗ ಬಂದಿದ್ದಾರೆ. ಪೊಲೀಸ್ ಕಾನೂನು ಪ್ರಕ್ರಿಯೆ ವಿಶು ಶೆಟ್ಟಿ ನಡೆಸಿದರು. ಸಂಬಂಧಿಕರು ರಾಜ್ಯ ಮಹಿಳಾ ನಿಲಯ ಸಂಪರ್ಕಿಸಲು ವಿನಂತಿಸಿದ್ದಾರೆ
Leave a Reply