
ಮಾತನಾಡಿ ಈ ಹಿಂದಿನ ಸಿಇಓ ಆಗಿರುವ ಸುಭಾಶ್ಚಂದ್ರ ಮತ್ತು ಮೆನೇಜರ್ ದೀಪಕ್ ಖಾರ್ವಿ ತನ್ನ ಅಧಿಕಾರ ದುರುಪಯೋಗ ಪಡಿಸಿಕೊಂಡು ಮತ್ತು ಅಧಕ್ಷ ಮೋಹನಚಂದ್ರ ಆಡಳಿತ ಮಂಡಳಿಯ ಗಮನಕ್ಕೆ ತಾರದೆ ರೂ.1ಕೋಟಿ 10,ಲಕ್ಷ ಮೊತ್ತವನ್ನು ಠೇವಣಿಯಾಗಿ ಕುಂದಾಪುರ ಸೌಹಾರ್ದ ಸಹಕಾರಿಯಲ್ಲಿ ಇಟ್ಟಿದ್ದು ಆ ಸಹಕಾರಿಯ ನಷ್ಟದಿಂದಾಗಿ ನಮ್ಮ ಠೇವಣಿ ವಾಪಾಸ್ಸು ಬಂದಿಲ್ಲ, ಈ ಕುರಿತು ಸಿಐಡಿ ತನಿಖೆ ನಡೆಯುತ್ತಿದೆ ಇವರು ಸುಮಾರು ರೂ.40ಲಕ್ಷ ಮೊತ್ತವನ್ನು ಸಹಕಾರಿಯಿಂದ ದುರುಪಯೋಗಪಡಿಸಿಕೊಂಡಿರುವುದು ನಮ್ಮ ಪರಿಶೀಲನೆಯಿಂದ ತಿಳಿದುಬಂದಿದ್ದು ಇದರ ವಸೂಲಿಗಾಗಿ ಕಾನೂನು ಕ್ರಮಗಳನ್ನು




ಸಂಸ್ಥೆಯ ಅಧ್ಯಕ್ಷರಾದ ನನ್ನ ಮೇಲೆ ಹಾಗೂ ನಿವ್ರತ್ತ ಸಹಾಯಕ ನಿಬಂಧಕರಾದ ಅರುಣ ಕುಮಾರ್ ಎಸ್.ವಿ ಇವರ ಹೆಸರು ಹಾಳು ಮಾಡಲು ಸುಮ್ಮನೆ ಸಾಮಾಜಿಕ ಜಾಲ ತಾಣಗಳಲ್ಲಿ ಪೋಸ್ಟ್ ಹಾಕಿರುತ್ತಾರೆ. ತನಿಖೆ ನಡೆದ ಬಳಿಕ ಕೇಲವೆ ದಿನಗಳಲ್ಲಿ ಅವರ ಬಣ್ಣ ಬಯಲಾಗುತ್ತದೆ ಎಂದರು.
ನಮ್ಮ ಹಿರಿಯರು ಮೀನುಗಾರರಿಗಾಗಿ ಈ ಸಂಸ್ಥೆಯನ್ನು ಹುಟ್ಟುಹಾಕಿದ್ದು 19 ವರ್ಷಗಳಿಂದ ಮೀನುಗಾರರ ಹಾಗೂ ಜನರ ಸಹಕಾರದಿಂದ ಸಾರ್ವಜನಿಕರ ವಿಶ್ವಾಸಗಳಿಸಿ ವ್ಯವಹಾರ ನಡೆಸುತ್ತಾ ಸದೃಢವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಶಂಕರ ಖಾರ್ವಿ,ನಿರ್ದೇಶಕರಾದ ಮಂಜುನಾಥ ಜಿ.ಖಾರ್ವಿ,ನಾಗೇಶ ಮಡಿಕಲ್,ರಾಜೇಂದ್ರ ಖಾರ್ವಿ,ಮಂಜುನಾಥ,ಮಹೇಶ್ ಕೆ,ಜ್ಯೋತಿ ಖಾರ್ವಿ,ಲಕ್ಷ್ಮೀ, ಸಂಸ್ಥೆಯ ಪ್ರಭಾರ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ ಕೆ. ಹಾಜರಿದ್ದರು.
