ಪುತ್ತೂರು: ಸುಮುಖ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾದ ‘ತುಡರ್’ ತುಳು ಸಿನೆಮಾ ಕರಾವಳಿಯಾದ್ಯಂತ ನಿನ್ನೆ ಬಿಡುಗಡೆಯಾಗಿದ್ದು, ಇಂದು ಪುತ್ತೂರಿನ ಭಾರತ್ ಸಿನಿಮಾಸ್ ನಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕರಾವಳಿಯಾದ್ಯಂತ ತುಡರ್ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಚಿತ್ರಮಂದಿರದತ್ತ ಸಿನಿ ಪ್ರೇಮಿಗಳು ಹೆಜ್ಜೆ ಹಾಕುತ್ತಿದ್ದಾರೆ. ಇನ್ನು ಪುತ್ತೂರಿನಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯ ದೀಪ ಪ್ರಜ್ವಲಿಸಿ ಚಿತ್ರಕ್ಕೆ ಶುಭ ಹಾರೈಸಿದರು. ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮತ್ತು ಸಂಜೀವ ಮಠಂದೂರು, ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು, ಆರ್ಯಾಪು ಗ್ರಾ.ಪಂ ಪಿಡಿಒ ನಾಗೇಶ್, …
Read More »