ಕೋಟೇಶ್ವರ: ಟಿಪ್ಪರ್ ಡಿಕ್ಕಿ – ಬಿಎಸ್ಸಿ ವಿದ್ಯಾರ್ಥಿ ಮೃತ್ಯು ಕುಂದಾಪುರ: ಕಾಲೇಜ್ ಮುಗಿಸಿ ಸ್ನೇಹಿತರೊಂದಿಗೆಫುಟ್ಬಾತಿನಲ್ಲಿ ನಡೆದು ಕೊಂಡು ಹೋಗುತ್ತಿದ್ದ ವಿದ್ಯಾರ್ಥಿಗೆ ಹಿಂದಿನಿಂದ ಬಂದ ಟಿಪ್ಪರ್ ಡಿಕ್ಕಿ ಹೊಡೆದು ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟ ಘಟನೆ ಕೋಟೇಶ್ವರ ಪ್ರಥಮ ದರ್ಜೆ ಕಾಲೇಜು ಸಮೀಪ ಕೋಟೇಶ್ವರ ಹಾಲಾಡಿ ರಸ್ತೆಯ ಕಕ್ಕೇರಿ ಎಂಬಲ್ಲಿ ಮಂಗಳವಾರ ನಡೆದಿದೆ.ಅಪಘಾತದಲ್ಲಿ ಸಾವನ್ನಪ್ಪಿದ ವಿದ್ಯಾರ್ಥಿಯನ್ನು ನಾಗೂರು ನಿವಾಸಿ ,ಕೋಟೇಶ್ವರದ ಕಾಳಾವರ ವರದರಾಜ ಶೆಟ್ಟಿ ಸರ್ಕಾರೀ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಬಿಎಸ್ಸಿ ವಿದ್ಯಾರ್ಥಿ ಧನುಷ್ ಎಂದು ಗುರುತಿಸಲಾಗಿದೆ.
Read More »ಸಾಗರ ನ್ಯೂಸ್ ವಿಶೇಷ
ಪುತ್ತೂರು: 80 ವರ್ಷಗಳ ಹಿಂದೆ ಪುತ್ತೂರಿನ ಶೈಕ್ಷಣಿಕ ಕ್ಷೇತ್ರಕ್ಕೆ ಹೊಸ ಬದಲಾವಣೆ ತರುವ ಮೂಲಕ ಸಂತ ಫಿಲೋಮಿನಾ ವಿದ್ಯಾಸಂಸ್ಥೆ ತಾಲೂಕಿನ ಶಿಕ್ಷಣ ವ್ಯವಸ್ಥೆಗೆ ಗಟ್ಟಿಯಾದ ಅಡಿಪಾಯ ಹಾಕಿದೆ. ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶಾಲೆಯನ್ನು ಮೊದಲ ಬಾರಿಗೆ ಸ್ಥಾಪಿಸಿದೆ. ಇದು ಅತೀ ವಂ. ಆ್ಯಂಟನಿ ಪತ್ರಾವೊ ಅವರ ಸ್ಮರಣೀಯ ಕೊಡುಗೆಯಾಗಿದೆ. ನಂತರ ಪ್ರಾರಂಭವಾದ ಫಿಲೋಮಿನಾ ಕಾಲೇಜು ಕೂಡಾ ಶಿಕ್ಷಣ ಕ್ಷೇತ್ರಕ್ಕೆ ದೊಡ್ಡಮಟ್ಟದ ಕೊಡುಗೆ ನೀಡಿದೆ ಎಂದು ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕರಾದ ಅತಿ ವಂದನೀಯ ಲಾರೆನ್ಸ್ ಮಸ್ಕರೇನಸ್ ಹೇಳಿದರು. ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಭಾಂಗಣದಲ್ಲಿ …
Read More »ಬೈಂದೂರಿನ ಮಾಜಿ ಶಾಸಕ ಕೆ ಲಕ್ಷ್ಮೀ ನಾರಾಯಣ ವಿಧಿವಶ ಉಡುಪಿ: ಬೈಂದೂರಿನ ಮಾಜಿ ಶಾಸಕ ಕೆ ಲಕ್ಷ್ಮೀ ನಾರಾಯಣ (85 ವ) ಅವರು ಶುಕ್ರವಾರ(ಸೆ.27) ತಮ್ಮ ಬೆಂಗಳೂರಿನ ನಿವಾಸದಲ್ಲಿ ನಿಧನ ಹೊಂದಿದರು. ಕೆಲ ಸಮಯದಿಂದ ಆನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನಲ್ಲಿ ವಾಸವಾಗಿದ್ದರು. 2008 ರಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದರು. ಅಂತಿಮ ದರ್ಶನಕ್ಕಾಗಿ ಬೆಂಗಳೂರಿನ ಡಾಲರ್ ಕಾಲನಿಯಲ್ಲಿರುವ ಮನೆಯಲ್ಲಿ ಬೆಳಿಗ್ಗೆ 10.30 ರಿಂದ ವ್ಯವಸ್ಥೆ ಮಾಡಲಾಗಿದ್ದು, 4.30 ಕ್ಕೆ ಬನಶಂಕರಿಯ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. …
Read More »ಚಲಿಸುತ್ತಿದ್ದ ಕಾರಿನಲ್ಲಿ ಹೆಬ್ಬಾವು ಪ್ರತ್ಯಕ್ಷ… ಬೋನೆಟ್‌ನಲ್ಲಿ ಬೆಚ್ಚಗೆ ಮಲಗಿದ್ದ ಹೆಬ್ಬಾವು..!! ಉಡುಪಿ: ಬೈಂದೂರಿನ ನಾಡ ಗ್ರಾಮದ ಕೋಣಿ ಚಂದ್ರಪ್ರಕಾಶ್ ಶೆಟ್ಟಿ ಅವರ ಕಾರಿನ ಬಾನೆಟ್ ಒಳಗೆ ಬೃಹತ್ ಗಾತ್ರದ ಹೆಬ್ಬಾವು ಪತ್ತೆಯಾಗಿದೆ. ಇವರು ಬಡಾಕೆರೆ ಜೋಯಿಸರ ಬೆಟ್ಟು ನಿವಾಸಿಯಾಗಿದ್ದು, ಕಾರಿನ ಬೋನೆಟ್ ಒಳಗೆ ಭಾರಿ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದೆ. ಎಂದಿನಂತೆ ಕಾರು ಚಲಾಯಿಸುತ್ತಾ ಬರುತ್ತಿರುವಾಗ ದಾರಿ ಮಧ್ಯದಲ್ಲಿ ಕಾರಿನ ಬೋನೆಟಿನಲ್ಲಿ ವಿಪರೀತ ಶಬ್ದವಾಗಿದೆ. ಇಳಿದು ಗಮನಿಸಿದಾಗ 12 ಫೀಟ್ ಉದ್ದದ ಹೆಬ್ಬಾವು ಇರುವುದು ಕಂಡು ಬಂದಿದೆ. ತಕ್ಷಣ ಕಾರ್ಯಪ್ರವೃತ್ತರಾಗಿ ಅರಣ್ಯ ಅಧಿಕಾರಿಗಳಿಗೆ ಕರೆ ಮಾಡಿದ್ದಾರೆ. …
Read More »ಗೌಡ ಸಮುದಾಯದ ಜನರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ದ.ಕ. ಜಿಲ್ಲಾ ವ್ಯಾಪ್ತಿಯಲ್ಲಿ ಒಕ್ಕಲಿಗರ ಮಾತೃ ಸಂಘ ಸ್ಥಾಪನೆ.
ಪುತ್ತೂರು: 10 ಕುಟುಂಬ 18 ಗೋತ್ರದ ಗೌಡ ಸಮುದಾಯದ ಜನರನ್ನು ಒಗ್ಗೂಡಿಸುವ ಸಹಿತ ಹಲವಾರು ಉದ್ದೇಶಗಳನ್ನು ಮುಂದಿಟ್ಟುಕೊಂಡು ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಗೌಡರ ಯಾನೆ ಒಕ್ಕಲಿಗರ ಮಾತೃ ಸಂಘ ಸ್ಥಾಪನೆ ಆಗಿದೆ ಎಂದು ಮಂಗಳೂರಿನಲ್ಲಿ ಗೌಡ ಸಂಘದ ಸ್ಥಾಪಕ ಅಧ್ಯಕ್ಷರ ದ.ಕ.ಜಿಲ್ಲಾ ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘದ ಅಧ್ಯಕ್ಷ ಲೋಕಯ್ಯ ಗೌಡ ಕೆ ಮಂಗಳೂರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 5 ಲಕ್ಷಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ಗೌಡ- ಒಕ್ಕಲಿಗ ಬಾಂಧವರಿದ್ದಾರೆ. ಅಂದಾಜು 2.5 ಲಕ್ಷಕ್ಕಿಂತಲೂ ಅಧಿಕ ವಯಸ್ಕ …
Read More »ಬ್ರಹ್ಮ ಶ್ರೀ ನಾರಾಯಣ ಗುರುಗಳಿಗೆ ಅವಮಾನ ಮಾಡಿದ C.A. ಅಶ್ವಜಿತ್ ವಿರುದ್ಧ ಸೆ.17ರಂದು ಜಿಲ್ಲಾಧಿಕಾರಿ ಆಫೀಸ್ ಎದುರಿಗೆ ಪ್ರತಿಭಟನೆ
ಉಡುಪಿ: ಸಮಾನತೆಯನ್ನು ಬೋಧಿಸಿ ಒಂದೇ ಜಾತಿ ಒಂದೇ ಮತ ಒಬ್ಬನೇ ದೇವರು ಎಂದು ಜಗತ್ತಿಗೆ ಸಾರಿದ ಮಹಾನ್ ದಾರ್ಶನಿಕ ಬ್ರಹ್ಮಶ್ರೀ ನಾರಾಯಣಗುರುಗಳನ್ನು ನಂಬುವ ಕುಲದವರಿಂದಲೇ ನಾರಾಯಣಗುರುಗಳಿಗೆ ಮತ್ತು ಮಹಿಳೆಯೋರ್ವರಿಗೆ ಅವಮಾನವಾದ ಘಟನೆ ಹೆಜಮಾಡಿ ಬಿಲ್ಲವ ಸಂಘದ ಮುಂಬೈ ಕಮಿಟಿಯಲ್ಲಿ ನಡೆದಿದ್ದು ಈಗಾಗಲೇ ಮಾಧ್ಯಮಗಳಲ್ಲಿ ಪ್ರಕಟಗೊಂಡಿದೆ. ಹೆಜಮಾಡಿ ಬಿಲ್ಲವ ಸಂಘದ ಮುಂಬೈ ಕಮಿಟಿ ಮೀಟಿಂಗ್ನಲ್ಲಿ ಅಶ್ವಜಿತ್ ಎನ್ನುವ ವ್ಯಕ್ತಿ, ಬಿಲ್ಲವ ಸಮಾಜದ ಮಹಿಳೆಯ ಘನತೆಗೆ ಧಕ್ಕೆ ತಂದ ವಿಷಯಕ್ಕೆ ಸಂಬಂಧಿಸಿ ಹಿಂದಿನ ಅಧ್ಯಕ್ಷರ ಕ್ಷಮೆಯಾಚನೆಗೆ ಲೋಕೇಶ್ ಪೂಜಾರಿಯವರು ಮುಂದಾದಲ್ಲಿ ಆಗಸ್ಟ್ 20 ರಂದು ನಡೆಯುವ ನಾರಾಯಣ …
Read More »ನೂತನ ಬೆಳ್ಳಿ ರಥ ಸಮರ್ಪಣೆ
ಬೈಂದೂರು ತಾಲೂಕು ಮರವಂತೆ ಶ್ರೀ ಮಹಾರಾಜ ವರಾಹ ದೇವಸ್ಥಾನದಲ್ಲಿ ಇಂದು ಶ್ರೀ ದೇವರಿಗೆ ಬೆಳ್ಳಿರಥ ಸಮರ್ಪಣೆ ಆಗಿದ್ದು, ಶ್ರೀರಾಮ ಮಂದಿರದಿಂದ ಮೆರವಣಿಗೆಯೊಂದಿಗೆ ಶ್ರೀ ದೇವರ ಸನ್ನಿದಾನದಲ್ಲಿ ಪೂಜಾ ಪುರಸ್ಕಾರ ದೊಂದಿಗೆ ಆರಂಭ ಗೊಂಡಿದ್ದು,ಇಂದು ವರಾಹ ದೇವಸ್ಥಾನದಲ್ಲಿ ಬೆಳ್ಳಿ ರಥ ಲೋಕಾರ್ಪಣೆ ಗೊಂಡಿದೆ, ಸಭಾ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದ ಧರ್ಮದರ್ಶಿಗಳಾದ ಸತಿಶ್ ನಾಯ್ಕ ಮಾತನಾಡಿ ಈ ಬೆಳ್ಳಿರಥ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಿದ್ದು ಈ ಹಿಂದೆ ಇಲ್ಲಿ ರಥ ಇದ್ದು ಅದು ಸಮುದ್ರಪಾಲಾಗಿದ್ದು ಈಗ ಬೆಳ್ಳಿ ರಥ ಮಾಡುವ ಅವಕಾಶ ಕೂಡಿ ಬಂದಿದೆ ,ಈ …
Read More »ಶ್ರೀ ದುರ್ಗಾ ಹಾರ್ಡ್ ವೇರ್ ತಲ್ಲೂರಿನಲ್ಲಿ ಶುಭಾರಂಭ ಕುಂದಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ತಲ್ಲೂರು ಬಳಿ ಬ್ಯಾಂಕ್ ಆಫ್ ಬರೋಡ ಎದುರುಗಡೆ ಶ್ರೀ ಬ್ರಾಹ್ಮ ದುರ್ಗಾ ಕಾಂಪ್ಲೆಕ್ಸ್ ನಲ್ಲಿ ಮನೆಗೆ ಬೇಕಾಗುವ ಎಲ್ಲಾ ವಸ್ತುಗಳು ಒಂದೇ ಸೂರಿನಡಿಯಲ್ಲಿ ದೊರೆಯುತ್ತದೆ. ಮನೆ ನಿರ್ಮಾಣಕ್ಕೆ, ಹಾಗೂ ಕಮರ್ಷಿಯಲ್ ಕಟ್ಟಡಕ್ಕೆ ಬೇಕಾಗುವ ಎಲ್ಲಾ ವಸ್ತುಗಳು ಕ್ಲಪ್ತ ಸಮಯದಲ್ಲಿ ಜನರಿಗೆ ಸಿಗಬೇಕೆಂಬ ಉದ್ದೇಶದಿಂದ ಶ್ರೀ ದುರ್ಗಾ ಹಾರ್ಡ್ ವೇರ್ ನಿಮ್ಮ ಸೇವೆಗೆ. ತಲ್ಲೂರು, ಹಟ್ಟಿ ಅಂಗಡಿ, ಉಪ್ಪಿನ ಕುದ್ರು, ಹೆಮ್ಮಾಡಿ, ಜಾಲಾಡಿ, ಭಾಗದವರಿಗೆ ಮನೆ, ಹಾಗೂ ಕಮರ್ಷಿಯಲ್ ಕಟ್ಟಡ …
Read More »ಆ್ಯಸಿಡ್ ತುಂಬಿದ ಟ್ಯಾಂಕರ್ ಪಲ್ಟಿ.
ಅಂಕೋಲಾ : ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63 ಕಂಚಿನಬಾಗಿಲು ಬಳಿ ಆ್ಯಸಿಡ್(ACID) ತುಂಬಿದ ಟ್ಯಾಂಕರ್ ಪಲ್ಟಿಯಾದ ಘಟನೆ ಶುಕ್ರವಾರ ನಡೆದಿದೆ.ಘಟನೆಯಲ್ಲಿ ಚಾಲಕನಿಗೆ ಸಣ್ಣ ಪ್ರಮಾಣದ ಗಾಯವಾಗಿದೆ. ಆಂಧ್ರಪ್ರದೇಶದಿಂದ ಗೋವಾ ದ ಕಡೆಗೆ ಬರುವಟ್ಯಾಂಕರ್ ಕಂಚಿನಬಾಗಿಲು ಬಳಿ ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ಪಲ್ಟಿಯಾಗಿ ಚರಂಡಿಗೆ ಬಿದ್ದಿದೆ.ಟ್ಯಾಂಕರ್ ನಲ್ಲಿ ಸುಮಾರು 34 ಟನ್ ಸಲ್ಪುರಿಕ್ (SULPHURIC ACID) ಒಯ್ಯಲಾಗುತಿತ್ತು. ಘಟನೆಯಿಂದ ಚರಂಡಿಯಲ್ಲಿ ಸಂಪೂರ್ಣವಾಗಿ ಆ್ಯಸಿಡ್ ಸೋರಿಕೆಯಾಗಿ ಖಾಲಿಯಾಗಿದೆ. ಸ್ಥಳಕ್ಕೆ ಅಂಕೋಲಾ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿಗಳು ಧಾವಿಸಿ ನಿಗಾ ವಹಿಸಿದ್ದಾರೆ. ಅಂಕೋಲಾ ಪೊಲೀಸ್ ಠಾಣಾ …
Read More »ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿಗಳ ಸಂಘ, ಉಡುಪಿ ಘಟಕದ ವತಿಯಿಂದ ಶ್ರೀ ಜಿ ವಿ ಅಶೋಕ್ ರವರಿಗೆ ಸನ್ಮಾನ
ಆಗಸ್ಟ್ 28 ರಂದು ಕೆನರಾ ಬ್ಯಾಂಕ್ ನಿವೃತ್ತಅಧಿಕಾರಿಗಳ ಸಂಘ, ಉಡುಪಿ ಘಟಕದಮಾಸಿಕಸಭೆಯು ಶ್ರೀ ಪ್ರದೀಪ ಭಕ್ತ ರವರ ಅಧ್ಯಕ್ಷತೆಯಲ್ಲಿ ಉಡುಪಿಯ ಸಿಂಡಿಕೇಟ್ ಟವರ್ಸ್ ನಲ್ಲಿ ಜರಗಿತು. ಶ್ರೀ ಯೋಗೇಶ್ ಭಟ್ ಹಾಗು ಶ್ರೀ ಮೋಹದಾಸ ನಾಯಕ್ ಮತ್ತು ಸದಸ್ಯರು, ಸಹಸದಸ್ಯರು ಉಪಸ್ಥಿತರಿದ್ದರು. ಜುಲೈ ತಿಂಗಳಲ್ಲಿ ಇಂದೋರ್ ನಲ್ಲಿ ಜರಗಿದ ನ್ಯಾಷನಲ್ ಪವರ್ ಲಿಫ್ಟಿಂಗ್ ಚಾಂಪಿಯನ್ಶಿಪ್ M3, 2024 ನಲ್ಲಿ 5 ಚಿನ್ನ,1 ಬೆಳ್ಳಿ ಹಾಗು 1 ಕಂಚಿನ ಪದಕಗಳನ್ನು ಗೆದ್ದು ಬೆಸ್ಟ್ ಲಿಸ್ಟರ್ ಆಫ್ ಇಂಡಿಯಾ M3-2024 ಎಂಬ ಕೀರ್ತಿಗೆ ಭಾಜನರಾದ ಸದಸ್ಯ ಶ್ರೀ …
Read More »