ರಾಣಿಬಲೆ ಮೀನುಗಾರರ ಒಕ್ಕೂಟ ರಿ.ಉಪ್ಪುಂದ ಇವರ ಆಶ್ರಯದಲ್ಲಿ ದಶಮಾನೋತ್ಸವದ ಪ್ರಯುಕ್ತ ದಿನಾಂಕ 23.03.2025 80 24.03.2025ರ ಸಂಘದ ಸದಸ್ಯರಿ ಗಾಗಿ ಏರ್ಪಡಿಸಿದ ಕ್ರಿಕೆಟ್ ಪಂದ್ಯಾಟ ರಾಣಿಬಲೆ ಟ್ರೋಫಿ-2025 ನ್ನು ಸಂಘದ ಅಧ್ಯಕ್ಷರಾದ ಶ್ರೀಯುತ ವೆಂಕಟರಮಣ ಖಾರ್ವಿ ಇವರು ಉದ್ಘಾಟಿಸುವುದರೊಂದಿಗೆ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ನೀಡಲಾಯಿತು.ಈ ಸಂದರ್ಭ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯ ರಾಣಿಬಲೆ ಘಟಕದ ತಂಡಗಳು ಉಪಸ್ಥಿತರಿದ್ದರು. ದಿನಾಂಕ 24.03.2025ರಂದು ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭವನ್ನು ಸಂಘದ ಅಧ್ಯಕ್ಷರಾದ ಶ್ರೀಯುತ ವೆಂಕಟರಮಣ ಖಾರ್ವಿ ಇವರ ಅಧ್ಯಕ್ಷತೆಯಲ್ಲಿ ಜರುಗಿತು, ಈ ಸಂದರ್ಭ ಭಾಗವಹಿಸಿದ ಎಲ್ಲಾ ತಂಡದವರಿಗೂ …
Read More »ಸಾಗರ ನ್ಯೂಸ್ ವಿಶೇಷ
ಮಹಿಳೆಯ ಮೇಲೆ ಹಲ್ಲೆ! ಚಿಕಿತ್ಸೆಗೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲು; ವಿಶು ಶೆಟ್ಟಿ
ಉಡುಪಿ ಮಾ.23: ಆದಿಉಡುಪಿ ರಿಕ್ಷಾ ನಿಲ್ದಾಣದ ಬಳಿ ಮಹಿಳೆ ಯೊಬ್ಬರಿಗೆ ವ್ಯಕ್ತಿಯೋರ್ವ ಹಲ್ಲೆ ನಡೆಸಿದ್ದು ಮುಖ ಮೂಗಿನಲ್ಲಿ ರಕ್ತ ಸೋರುತ್ತಿದ್ದು, ವಿಶು ಶೆಟ್ಟಿ ಅಂಬಲಪಾಡಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ ಮಹಿಳೆ ತನ್ನ ಹೆಸರು ಮಹಿರ್ ನಿಶಾ(28) ತಂದೆ ಅಬ್ಬಾಸ್ ಶಿಕಾರಿಪುರ ಮೂಲದವಳಾಗಿದ್ದೇನೆ ಎಂದು ಮಾಹಿತಿ ನೀಡಿದ್ದಾಳೆ. ಹಲ್ಲೆ ನಡೆಸಿದ ವ್ಯಕ್ತಿ ಹಾಗೂ ಮಹಿಳೆಗೆ ಏನು ಸಂಬಂಧ ಎಂದು ತಿಳಿದು ಬಂದಿಲ್ಲ. ರಿಕ್ಷಾ ಚಾಲಕರು ಸಹಕರಿಸಿದ್ದಾರೆ.
Read More »ಉಡುಪಿ ಅಂಬಾಗಿಲು ಬಳಿ ಲಾರಿ ಪಲ್ಟಿ : ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ ;ವಿಶು ಶೆಟ್ಟಿ
ಉಡುಪಿ : ಉಡುಪಿ ಅಂಬಾಗಿಲು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಜರಿ ಸಾಮಾನುಗಳನ್ನು ಕೊಂಡೊಯ್ಯುತ್ತಿದ್ದ ಲಾರಿ ಒಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಅದರಲ್ಲಿದ್ದ ಕಾರ್ಮಿಕರು ಸೇರಿ ಒಟ್ಟು ಆರು ಮಂದಿ ಗಾಯಗೊಂಡ ಘಟನೆ ಭಾನುವಾರ ನಡೆದಿದೆ.ದುರ್ಘಟನೆ ಮಾಹಿತಿ ಪಡೆದ ಸಮಾಜ ಸೇವಕ ವಿಶು ಶೆಟ್ಟಿ ಅವರು ತಕ್ಷಣ ಸ್ಥಳಕ್ಕೆ ಧಾವಿಸಿ ಗಾಯಗೊಂಡ ಲಾರಿ ಚಾಲಕ, ನಾಲ್ಕು ಮಂದಿ ಕಾರ್ಮಿಕರು ಹಾಗೂ ಬೈಕ್ ಸವಾರನನ್ನು ತಮ್ಮ ವಾಹನದಲ್ಲಿಯೇ ಕರೆದೊಯ್ದು ಅಂಬಲಪಾಡಿ ಜಂಕ್ಷನ್ ಬಳಿಯ ಹೈಟೆಕ್ ಆಸ್ಪತ್ರೆಗೆ ದಾಖಲಿಸಿ, ಮಾನವೀಯತೆ ಮೆರೆದಿದ್ದಾರೆ. ಈ ದುರ್ಘಟನೆ ಸಂಭವಿಸುವ ಮುಂಚೆ …
Read More »ಸಮಾಜ ಸೇವಕರಿರ್ವರ ಜಂಟಿ ಕಾರ್ಯಚರಣೆ ; ಬೀಕರ ಮನೋರೋಗಿಯ ಸ್ನೇಹಾಲಯಕ್ಕೆ ದಾಖಲು
ಉಡುಪಿ.ಮಾ.22 :- ಹಿರಿಯಡ್ಕ ಠಾಣಾ ವ್ಯಾಪ್ತಿಯಲ್ಲಿ ಕಟ್ಟಡಗಳ ಪೈಪ್, ಮೋಟಾರ್ ಹಾಗೂ ಸೊಸ್ತುಗಳನ್ನು ಹಾನಿಗೊಳಿಸುತ್ತ, ಜೊತೆಗೆ ಕಲ್ಲುಗಳನ್ನು ಎಸೆಯುತ್ತ ಮಹಿಳೆಯರಿಗೆ ಭಯದ ವಾತವರಣ ಸೃಷ್ಟಿಸಿದ ಬೀಕರ ಮನೋರೋಗಿಯನ್ನು ಸಮಾಜ ಸೇವಕರಾದ ವಿಶುಶೆಟ್ಟಿ ಅಂಬಲಪಾಡಿ ಹಾಗೂ ಈಶ್ವರ ಮಲ್ಪೆಯವರು ಜಂಟಿ ಕಾರ್ಯಚರಣೆ ನಡೆಸಿ ವಶಕ್ಕೆ ಪಡೆದು ಕೇರಳದ ಮಂಜೇಶ್ವರದ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರ ಸ್ನೇಹಾಲಯಕ್ಕೆ ದಾಖಲಿಸಿದ್ದಾರೆ. ಯುವಕ ಗಿರಿ (25 ವರ್ಷ) ತಮಿಳುನಾಡು ಮೂಲದವನಾಗಿದ್ದು, ಕಳೆದ ಕೆಲವು ದಿನಗಳಿಂದ ಹಿರಿಯಡ್ಕ ಪರಿಸರದಲ್ಲಿ ತಿರುಗಾಡುತ್ತಿದ್ದ. ಕಳೆದ ಮೂರು ದಿನಗಳಿಂದ ಯುವಕ ಬೀಕರ ಉಗ್ರ ರೂಪದಲ್ಲಿ ವರ್ತಿಸುತ್ತಿದ್ದು, …
Read More »ಸ್ಪಂದಿಸದ ಸಂಬಂಧಿಕರು!!! ಆಶ್ರಯ ನೀಡಿದ ಹೊಸಬೆಳಕು.
ಉಡುಪಿ ಮಾ.20: ನಿಟ್ಟೂರಿನಲ್ಲಿ ತಿಂಗಳ ಹಿಂದೆ ಮಲಮೂತ್ರಾದಿ ನಡುವೆಯೇ ಅನಾಗರಿಕವಾಗಿ ಬದುಕು ಸಾಗಿಸುತ್ತಿದ್ದ ವೃದ್ಧ ತಾಯಿ ಕಮಲ ಶೆಟ್ಟಿ ಹಾಗೂ ಮಾನಸಿಕ ಅಸ್ವಸ್ಥ ಮಗ ಅನಿಲ್ ಶೆಟ್ಟಿ ಯವರನ್ನು ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಇದೀಗ ವೃದ್ಧ ತಾಯಿಯನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿದ್ದು ಸಂಬಂಧಿಕರು ಯಾರೂ ಸ್ಪಂದಿಸದೇ ಇರುವುದರಿಂದ ವಿಶು ಶೆಟ್ಟಿಯವರ ವಿನಂತಿಗೆ ಬೈಲೂರಿನ ಹೊಸಬೆಳಕು ಆಶ್ರಮದ ಮುಖ್ಯಸ್ಥರಾದ ಶ್ರೀಮತಿ ತನುಲಾರವರು ಆಶ್ರಯ ನೀಡಲು ಸಮ್ಮತಿಸಿದ್ದು ವಿಶು ಶೆಟ್ಟಿ ಆಂಬುಲೆನ್ಸ್ ಮುಖಾಂತರ ವೃದ್ದೆಯನ್ನು ಕಾರ್ಕಳದ ಬೈಲೂರಿನ ಹೊಸಬೆಳಕು ಆಶ್ರಮಕ್ಕೆ ದಾಖಲಿಸಿದ್ದಾರೆ. ಮಗ …
Read More »ಸಮಾಜದ ನೆರವಿಗಾಗಿ ಹಾತೊರೆಯುತ್ತಿರುವ ಅಸಹಾಯಕ ಸಹೋದರಿಯರು: ತುರ್ತು ಸ್ಪಂದನೆಗೆ ಮನವಿ.
ಪುತ್ತೂರು ; ಪುತ್ತೂರು ಮಡಾವು ಊರಿನ ಬಂಟ ಮನೆತನದ ಪ್ರತಿಷ್ಠಿತ ಕುಟುಂಬವೊಂದು ತೀರಾ ಅಸಹಾಯಕ ಪರಿಸ್ಥಿತಿಯಲ್ಲಿದ್ದು, ಸಮಾಜದ ದಾನಿಗಳ ನೆರವನ್ನು ಯಾಚಿಸುತ್ತಿದೆ. ತಂದೆಯ ನಿರ್ಲಕ್ಷ್ಯ, ಮಾನಸಿಕ ಅಸ್ವಸ್ಥೆಯಾಗಿರುವ ತಾಯಿ ಹಾಗೂ ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ತಂಗಿ ಒಂದೆಡೆಯಾದರೆ, ಇವರೀರ್ವರ ಸೇವೆಗೆ ಕೆಲಸ ಬಿಟ್ಟು ನಿಂತಿರುವ ಅಕ್ಕ ಯಾವುದೇ ಆದಾಯವಿಲ್ಲದೆ ಅಕ್ಷರಶ: ಕಂಗಾಲಾಗಿದ್ದಾಳೆ. ದ.ಕ. ಜಿಲ್ಲೆಯ ಪುತ್ತೂರಿನ ಮಡಾವು ಊರಿನ ನೊಂದ ಕುಟುಂಬದ ದುರಂತ ಕಥೆಯಿದು. ಈ ಕುಟುಂಬಕ್ಕೆ ಸ್ಪಂದಿಸಿದ ಸಮಾಜ ಸೇವಕ ವಿಶು ಶೆಟ್ಟಿ ಅವರು ಕಳೆದ ಎರಡು ವರ್ಷಗಳ ಹಿಂದೆ ಕುಟುಂಬದ ನೋವಿಗೆ …
Read More »ಮನೆ ತೆರಿಗೆ ವಸೂಲಾತಿಯಲ್ಲಿ ಪ್ರಥಮಸ್ಥಾನ ಗಿಟ್ಟಿಸಿಕೊಂಡ ಮರವಂತೆ ಗ್ರಾಮ ಪಂಚಾಯತ್
Saturday ಬೈಂದೂರು ತಾಲೂಕು ಮರವಂತೆ ಗ್ರಾಮ ಪಂಚಾಯತ್ ವರ್ಷದ ಅಂತಿಮ ವರ್ಷದಲ್ಲಿ ಮನೆ ತೆರಿಗೆ ವಸೂಲಾತಿಯಲ್ಲಿ ತೊಡಗಿದ್ದು ಡಿಸೆಂಬರ್ ತಿಂಗಳಲ್ಲಿ ಸುಮಾರು 876634.59 ತೆರಿಗೆಯನ್ನು ವಸೂಲು ಮಾಡಿ ಬೈಂದೂರು ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದು ಕೊಂಡಿದೆ, ಎರಡನೇ ಸ್ಥಾನ ಹಳ್ಳಿ ಹೊಳೆ ಪಡೆದುಕೊಂಡಿರುತ್ತದೆ, ತೆರಿಗೆ ವಸೂಲಾತಿಯನ್ನು ಸರ್ಕಾರಕ್ಕೆಕ್ಲಪ್ತ ಸಮಯಕ್ಕೆ ಸರಿಯಾಗಿ ನೂರಕ್ಕೆ ನೂರು ಪಾವತಿಮಾಡಿದ ಮರವಂತೆ ಗ್ರಾಮ ಪಂಚಾಯತ್ ಹೆಗ್ಗಳಿಕೆ ಒಂದಾದರೇ,,, ಮರವಂತೆ ಗ್ರಾಮ ಪಂಚಾಯತ್ ನ ಈ ಕಾರ್ಯಕ್ಕೆ ಗ್ರಾಮದ ಜನತೆಯ ಸಹಕಾರರಿಂದ ಈ ಕಾರ್ಯ ಸಫಲವಾಗಿರುತದೆ, ಹಾಗೆಯೇ ಗ್ರಾಮದ ಎಲ್ಲಾ ಜನತೆಗೆ …
Read More »ಅಸಹಾಯಕ ಮಹಿಳೆ ರಕ್ಷಣೆ
ಜಿಲ್ಲಾ ಆಸ್ಪತ್ರೆಗೆ ದಾಖಲು ;ವಿಶು ಶೆಟ್ಟಿ ಉಡುಪಿ ಮಾ.12, ಹಿರಿಯಡ್ಕ ಠಾಣಾ ವ್ಯಾಪ್ತಿಯ ಆತ್ರಾಡಿಯ ಮನೆಯೊಂದರಲ್ಲಿ ಕಳೆದ ಆರು ತಿಂಗಳಿಂದ ಎದ್ದೇಳಲಾಗದೆ ಮಲಗಿದ್ದಲ್ಲೇ ಇದ್ದ ಮಹಿಳೆಯೊಬ್ಬರನ್ನು ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿ ಶುಚಿಗೊಳಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.ಮಹಿಳೆ ವಸಂತಿ ಪೂಜಾರಿ (65) ಎದ್ದೇಳಲಾಗದೆ ಮಲಗಿದ್ದಲ್ಲಿಯೇ ಕಳೆದ ಆರು ತಿಂಗಳಿನಿಂದ ಹಾಸಿಗೆ ಹಿಡಿದಿದ್ದು ಶೌಚಾದಿ ಕೂಡ ಮಲಗಿದ್ದಲ್ಲಿ ಆಗುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ವಿಶು ಶೆಟ್ಟಿ, ಸ್ಥಳೀಯ ಪಂಚಾಯಿತಿ ಸದಸ್ಯ ರತ್ನಾಕರ್ ಶೆಟ್ಟಿ ಸಹಾಯದಿಂದ ರಕ್ಷಿಸಿ ಜಿಲ್ಲಾಸ್ಪತ್ರೆ ದಾಖಲಿಸಿದ್ದಾರೆ. ಮಹಿಳೆಯ ಮಗ ತೀರಿಕೊಂಡಿದ್ದು ಸಹೋದರಿಯೊಬ್ಬರು ತೀವ್ರ …
Read More »ವೃದ್ಧರ ಮನವಿಗೆ ಜಿಲ್ಲಾಸ್ಪತ್ರೆಗೆ ದಾಖಲು
ಉಡುಪಿ ಮಾ.8: ಹಿರಿಯಡ್ಕ ಠಾಣಾ ವ್ಯಾಪ್ತಿಯಲ್ಲಿ ಒಂಟಿಯಾಗಿ ಬದುಕುತ್ತಿದ್ದ ವೃದ್ಧರೋರ್ವರು ತೀರಾ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಿಸುವಂತೆ ವಿಶು ಶೆಟ್ಟಿ ಅಂಬಲಪಾಡಿಯವರಿಗೆ ದೂರವಾಣಿ ಮುಖಾಂತರ ವಿನಂತಿಸಿದ್ದು, ಕೂಡಲೇ ಸ್ಪಂದಿಸಿದ ವಿಶು ಶೆಟ್ಟಿ ಅಂಬ್ಯುಲೆನ್ಸ್ ಮುಖಾಂತರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.ವೃದ್ಧರು ಮಂಜುನಾಥ (80) ಪತ್ನಿ ತೀರಿ ಹೋಗಿದ್ದು ಒಂಟಿಯಾಗಿ ಬದುಕುತ್ತಿದ್ದರು. ಈ ಹಿಂದೆ ಇದೇ ರೀತಿ ಅಸಹಾಯಕರಾದಾಗ ವೃದ್ಧರ ವಿನಂತಿಗೆ “ಸ್ವರ್ಗ” ಆಶ್ರಮಕ್ಕೆ ದಾಖಲಿಸಲಾಗಿತ್ತು. ವೃದ್ಧರ ಸ್ವಯಿಚ್ಛೆಯಂತೆ ಗುಣಮುಖರಾದ ಮೇಲೆ ಮನೆಗೆ ಬಿಡಲಾಯಿತು. ಈಗ ಪುನಃ ತೀರಾ ಅನಾರೋಗ್ಯಕ್ಕೆ ಈಡಾಗಿದ್ದು ನಡೆದಾಡಲು ಬಲ ಇಲ್ಲದೆ ಬಿದ್ದು ಗಾಯಗಳಾಗಿದ್ದು. …
Read More »ಮನೋರೋಗಿ ವ್ಯಕ್ತಿಯ ರಕ್ಷಣೆ. ಸೂಚನೆ
ಉಡುಪಿ ಮಾ.18: ಶಿರ್ವ ಠಾಣಾ ವ್ಯಾಪ್ತಿಯ ಮುದರಂಗಡಿ ಬಳಿ ಮಾರ್ಗದ ಬದಿಯಲ್ಲಿ ಸರಿಯಾದ ಆಹಾರವಿಲ್ಲದೆ ದೈಹಿಕವಾಗಿ ಬಳಲಿದ ಮನೋರೋಗಿ ವ್ಯಕ್ತಿಯನ್ನು ವಿಶು ಶೆಟ್ಟಿ ಅಂಬಲಪಾಡಿ ಸ್ಥಳೀಯರ ನೆರವಿನಿಂದ ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.ವ್ಯಕ್ತಿ ಶಾಂತರಾಮ್ ಶೆಟ್ಟಿ (60) ಎಂಬ ಮಾಹಿತಿ ಲಭಿಸಿದ್ದು, ಶಿರ್ವ ಠಾಣೆಗೆ ಮಾಹಿತಿ ನೀಡಲಾಗಿದೆ. ಸಂಬಂಧಿಕರು ಜಿಲ್ಲಾಸ್ಪತ್ರೆ ಸಂಪರ್ಕಿಸುವಂತೆ ವಿಶು ಶೆಟ್ಟಿ ವಿನಂತಿಸಿದ್ದಾರೆ.
Read More »