
ಉಡುಪಿ ಬ್ರಹ್ಮಗಿರಿ ಪರಿಸರದಲ್ಲಿ ಮಾನಸಿಕ ಅಘಾತಕ್ಕೆ ಒಳಗಾದ ಮಹಿಳೆಯ ಬಗ್ಗೆ, ಮಾಹಿತಿ ಪಡೆದ ವಿಶು ಶೆಟ್ಟಿ ಅಂಬಲಪಾಡಿಯವರು ರಕ್ಷಿಸಿ ದೊಡ್ಡನಗುಡ್ಡೆಯ ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಹಿಳೆಯು ಮೂಲತಃ ಕುಂದಾಪುರ ಗಂಗೊಳ್ಳಿಯವರಾಗಿದ್ದು, ತನ್ನ ಹೆಸರು ಜಯಂತಿ(45), ಗಂಡನಿಂದ ದೂರವಾಗಿದ್ದು ಇಬ್ಬರು ಹೆಣ್ಣುಮಕ್ಕಳು ಮತ್ತೊಬ್ಬ ಮಗ ಇದ್ದಾನೆ ಎಂಬ ಮಾಹಿತಿ ನೀಡಿದ್ದಾರೆ. ಮಹಿಳೆಯ ದಾಖಲಾತಿಗೆ ಸಖಿ ಕೇಂದ್ರದ ಸಿಬ್ಬಂದಿಗಳು ನೆರವಾಗಿರುತ್ತಾರೆ. ಸಂಬಂಧಪಟ್ಟವರು ಬಾಳಿಗಾ ಆಸ್ಪತ್ರೆ/ ಮಹಿಳಾ ಪೊಲೀಸ್ ಠಾಣೆ/ಸಖಿ ಸೆಂಟರನ್ನು ಸಂಪರ್ಕಿಸಲು ವಿನಂತಿಸಿದ್ದಾರೆ