ಉಡುಪಿ ಎ.1:- ಬ್ರಹ್ಮಾವರದ ಅಪ್ಪ ಅಮ್ಮ ಆಶ್ರಮದಲ್ಲಿ ಕಳೆದ ಆರು ವರ್ಷಗಳಿಂದ ಆಶ್ರಮವಾಸಿಯಾಗಿದ್ದ, ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಮಾದ್ಯಮ ಪ್ರಕಟನೆಯನ್ನು ನೀಡಿದರೂ ಸಹ ಸಂಬಂಧಿಕರು ಪತ್ತೆಯಾಗದ ಕಾರಣ ವಿಶುಶೆಟ್ಟಿಯವರ ನೇತೃತ್ವದಲ್ಲಿ ಉಡುಪಿಯ ಬೀಡಿನಗುಡ್ಡೆಯ ರುದ್ರಭೂಮಿಯಲ್ಲಿ ಅಂತ್ಯಕ್ರೀಯೆ ನಡೆಸಲಾಗಿತ್ತು.ಮೃತ ವ್ಯಕ್ತಯ ಹೆಸರು ಲಾಲು ಪ್ರಸಾದ್ ಯಾದವ್ (55ವರ್ಷ) ಆಗಿದ್ದು, ಹೊರ ರಾಜ್ಯದವರಾಗಿದ್ದರು. ವ್ಯಕ್ತಿಯು ಮಾರ್ಚ 25ರಂದು ಮೃತಪಟ್ಟಿದ್ದು ಶವವನ್ನು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ಇರಿಸಿ ಮೃತರ ಸಂಬಂಧಿಕರ ಪತ್ತೆಗಾಗಿ ಮಾದ್ಯಮ ಪ್ರಕಟನೆ ನೀಡಿದರೂ ಸಂಬಂಧಿಕರು ಯಾರು ಪತ್ತೆಯಾಗದ ಕಾರಣ ಬ್ರಹ್ಮಾವರ ಪೋಲಿಸ್ ಠಾಣೆಯಲ್ಲಿ ಆಶ್ರಮದ ಮುಖ್ಯಸ್ಥರಾದ ಪ್ರಶಾಂತ್ ಪೂಜಾರಿಯವರು ಕಾನೂನು ಪಕ್ರಿಯೆ ನಡೆಸಿದರು.
Leave a Reply