
ಹೌದು ಕೊರಗ ಸಮುದಾಯದ ಮನೆ ಗಳು ಇರುವ ಜಾಗದಲ್ಲಿ ಸರಕಾರದ ಸಾರ್ವಜನಿಕ ಬಾವಿಯ ಇದ್ದು ಇತ್ತೀಚಿನ ದಿನದಲ್ಲಿ ಗುತ್ತಿಗೆದಾರರು ಕಾಟಚಾರ ಎಂಬಂತೆ ಕಾಮಗಾರಿ ಪ್ರಾರಂಭಿಸಿ ಬಾವಿಯ ದುರಸ್ತಿ ಕಾರ್ಯವನ್ನು ಅರ್ಧದಲ್ಲೇ ಸ್ಥಗಿತಗೊಳಿಸಿರುವುದು ಈ ಎಲ್ಲಾ ಅವಾಂತರಗಳಿಗೆ ಕಾರಣವಾಗಿದೆ ಎಂದು ಕಾಲೋನಿಯ ನಿವಾಸಿಗಳಲ್ಲಿ ಒಬ್ಬರಾದ ಸುಪ್ರೀತಾ ಎಂಬುವರು ತಮ್ಮ ನೋವನ್ನು ಮಾಧ್ಯಮಗಳ ಜೊತೆ ಹಂಚಿಕೊಂಡಿರುವುದು ಹೇಗೆ
ಬೈಟ್: ಸುಪ್ರೀತಾ ಮರವಂತೆ
ಮನೆಯಲ್ಲಿ ಹೆಂಗಸರು ಮತ್ತುಸಣ್ಣ ಸಣ್ಣ ಮಕ್ಕಳಿದ್ದು ದೈನಂದಿನ ಕಾರ್ಯಗಳಿಗೆ ಹಾಗೂ ಕುಡಿಯಲು ನೀರಿಲ್ಲದೆ ಕುಟುಂಬದವರು ಪರದಾಡುವಂತಾಗಿದೆ.
ಈ ವಿಚಾರವಾಗಿ ಕೊರಗ ಕುಟುಂಬದವರು ಮರವಂತೆ ಗ್ರಾಮ ಪಂಚಾಯತ್‌ಗೆ ಹತ್ತಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ನಿವಾಸಿಗಳ ಅಳಲು. “ನಾವು ಎಷ್ಟೇ ಮನವಿ ಮಾಡಿದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ.ಅತ್ಯಗತ್ಯ ಸೇವೆಯನ್ನು ಒದಗಿಸದೆ ನಮ್ಮ ಕುಟುಂಬವನ್ನು ಸಂಕಷ್ಟಕ್ಕೆ ತಳ್ಳಿದ್ದಾರೆ,”ಎಂದು ಗ್ರಾಮ ಪಂಚಾಯತಿ ವಿರುದ್ಧ ಆಕ್ರೋಶವರಾಗಿದ್ದಾರೆ
ಬೈಟ್: ಸುನಿತಾ
ನೊಂದ ಕುಟುಂಬಸ್ಥರು
ಪಂಚಾಯತ್ ಆಡಳಿತವು ತಕ್ಷಣವೇ ಎಚ್ಚೆತ್ತುಕೊಂಡು ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಹಾಗೂ ಸ್ಥಗಿತಗೊಂಡಿರುವ ಬಾವಿ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸಬೇಕು ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಗ್ರಾಮ ಪಂಚಾಯತ್ ಕಚೇರಿಯ ಮುಂದೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಕೊರಗ ಸಮುದಾಯದ ಮನೆಯವರು ಮತ್ತು ಸ್ಥಳೀಯ ನಿವಾಸಿಗಳು ಒಕ್ಕೊರಲಿನಿಂದ ಎಚ್ಚರಿಸಿದ್ದಾರೆ
