ಜನಧ್ವನಿಯ ನೂತನ ಜಿಲ್ಲಾ ಕಛೇರಿ ಉದ್ಘಾಟನಾ ಸಮಾರಂಭ

ಸಾರಥ್ಯದಲ್ಲಿ ಜನಾರ್ದನ ಕೆ ಎಂ ಮರವಂತೆ

ಬೈಂದೂರು ;ಶಿರಸಿಯ ಪತ್ರಿಕಾಭವನದಲ್ಲಿ ಶುಕ್ರವಾರ ಕರವೇ ಜನಧ್ವನಿಯ ನೂತನ ಜಿಲ್ಲಾ ಕಛೇರಿ ಉದ್ಘಾಟನಾ ಸಮಾರಂಭವು ಅರ್ಥಪೂರ್ಣವಾಗಿ ನೆರವೇರಿತು. ಮುಖ್ಯ ಅತಿಥಿಗಳು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟನೆಗೊಂಡಿತು. ಮುಖ್ಯ ಅತಿಥಿಗಳಲ್ಲೊಬ್ಬರಾದ ನಿವೃತ್ತ ಪ್ರಾಚಾರ್ಯ ಕೆ ಎನ್ ಹೊಸನಿಯವರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ ಭಾಷೆ ಕೇವಲ ಭಾಷೆಯಾಗಿರದೆ ಅದು ನಮ್ಮೆಲ್ಲರ ಉಸಿರು. ಇಂಥ ಭಾಷೆ ನೆಲ ಜಲದ ರಕ್ಷಣೆಯ ಹೊಣೆ ಹೊತ್ತು ರೂಮಗೊಂಡ ಕರವೇ ಜನಧ್ವನಿ ಸಂಘಟನೆ ಮತ್ತಷ್ಟು ಬಲಗೊಂಡು ಸಮಾಜಕ್ಕೆ ಹೊಸ ರೂಪ ನೀಡಬೇಕು ಎಂದರು. ನೂತನ ಜಿಲ್ಲಾ ಕಚೇರಿಯನ್ನು ಶಾಸಕ ಭೀಮಣ್ಣ ಟಿ ನಾಯ್ಕ ಉದ್ಘಾಟಿಸಿದರು.
ಜಿಲ್ಲಾ ಕಚೇರಿಯನ್ನು ಶಾಸಕ ಭೀಮಣ್ಣ ಟಿ ನಾಯ್ಕ ಉದ್ಘಾಟಿಸಿದರು. ತದನಂತರ ಸಾಧಕರನ್ನು ಸನ್ಮಾನಿಸಿ ಮಾತನಾಡುತ್ತ ಜನಧ್ವನಿಯ ಕಾರ್ಯ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಹಿರಿಯರ ಮಾತುಗಳು ನಮಗೆ ಸದಾ ಮಾರ್ಗದರ್ಶಿ, ನಿಸ್ವಾರ್ಥ ಭಾವದ ಸಮಾಜ ಸೇವಕರನ್ನು ಸಸ್ಥಾನಿಸುವುದು ತುಂಬಾ ಮುಖ್ಯವಾದುದು. ಇಂಥ ಕಾರ್ಯ ನನಗೆ ಹೆಮ್ಮೆಯ ಸಂಗತಿ. ಈ ರೀತಿಯ ಕಾರ್ಯಕ್ರಮಗಳು ನಡೆದಾಗಲೇ ಕನ್ನಡದ ಉಳಿವು ಸಾಧ್ಯ. ಈ ನಿಟ್ಟಿನಲ್ಲಿ ನಾನೂ ನಿಮ್ಮ ಜೊತೆ ಸದಸ್ಯನಾಗಿ ಸಹಕಾರ ನೀಡುವೆ ಎಂದರು. ಇದೆ ಸಂದರ್ಭದಲ್ಲಿ ಅವರು ಕರವೇ ಜನಧ್ವನಿಯ ಒಳಗದ ವತಿಯಿಂದ ನೀಡಿದ ಒಂದು ಲಕ್ಷ ರೂ ಮೊತ್ತದ ಚೆಕ್ಕನ್ನು ಸಂಸ್ಥಾಪಕರು ಹಾಗೂ ಜಿಲ್ಲಾಧ್ಯಕ್ಷರಾಗಿದ್ದ ವಿವಂಗತ ಉಮೇಶ ಹರಿಕಾಂತ್ ಅವರ ಕುಟುಂಬಕ್ಕೆ ಹಸ್ತಾಂತರಿಸಿದರು. ಈ ಹಣವನ್ನು ಕೊಳಗಿಬೀಸಿನಲ್ಲಿ ನಡೆದ ಡಿ ಉಮೇಶ ಹರಿಕಾಂತ ಸ್ಮರಣಾರ್ಥ ಕರವೇ ಜನಧ್ವನಿ ಕೊಳಗಿಬೀಸ್ ಘಟಕ ಆಯೋಜಿಸಿದ್ದ
ಪಂದ್ಯಾವಳಿ ಹಾಗೂ ದಾನಿಗಳಿಂದ ಸಂಗ್ರಹಿಸಲಾಗಿತ್ತು. ನಂತರ ಸಾಮಾಜಿಕ ಹೋರಾಟಗಾರ ಅನಂತ ಮೂರ್ತಿ ಹಗಡೆಯವರು ಜನಧ್ವನಿಯ ಬಗ್ಗೆ ಹೆಮ್ಮೆಯ ಮಾತುಗಳನ್ನಾಡುತ್ತ ಹೋರಾಟಗಾರರಿದ್ದರೆ ಮಾತ್ರ ನಮ್ಮ ನೆಲ ಜಲ ಭಾಷೆಯ ಉಳಿವು ಸಾಧ್ಯ ಎಂದರು. ಸಿದ್ದಾಮರದಿಂದ ಆಗಮಿಸಿದ್ದ ತಿಮ್ಮಪ್ಪ ಮಡಿವಾಳ ಹಿತ್ತಲಕೊಪ್ಪರವರು ರಾಜಕೀಯೇತರ ಕಾರ್ಯಕ್ರಮವಾಗಿ ನನಗೆ ಬಹಳ ಹರುಷವಿತ್ತಿತು ಎಂಬ ಮಾತುಗಳನ್ನಾಡಿ ಕನ್ನಡ ನಾಡು ನುಡಿಗಾಗಿ ತಾನು ಸದಾ ನಿಮ್ಮಜತೆಗೆ ಇರುತ್ತೇನೆ ಎಂದರು. ಪ್ರವೀಣ್ ಗೌಡರ್ ವೇದಿಕೆಯ ಜತೆಗಿದ್ದು ಬಲ ತುಂಬುವೆ ಎಂದು ತಿಳಿಸಿದರು. ಸಸ್ಥಾನ ಸ್ವೀಕರಿಸಿದ ಡಿ ಎಸ್ ನಾಯ್ಕ ರವರು ಈ ವೇದಿಕೆಯಲ್ಲಿ ಸನ್ಮಾನ ಪಡೆದದ್ದು ನನ್ನ ಜೀವನದ ಅತೀ ಮಧುರ ಕ್ಷಣ ಎನಿಸಿದ್ದು ಯುವ ಶಕ್ತಿ ಹೀಗೆ ಮುಂದೆ ಬರಬೇಕು.ಆಗ ಸಮಾಜ ಸದೃಢವಾಗುತ್ತದೆ ಎಂದರು. ಅಧ್ಯಕ್ಷೀಯ ಮಾತಿನಲ್ಲಿ ಉಮಾಕಾಂತ ಹೊಸಕಟ್ಟಾರವರು ವೇದಿಕೆಯ ಪ್ರತೀ ಕಾರ್ಯಕರ್ತನ ಪರಿತ್ರಮಕ್ಕೂ ಧನ್ಯವಾದ ತಿಳಿಸುತ್ತ ಎಲ್ಲ ಶ್ರೇಯಸ್ಸಿನ
ಫಲವನ್ನು ಕಾರ್ಯಕರ್ತರಿಗೆ ಅರ್ಪಿಸಿದರು.
ತಾಲೂಕು ಬಿಜೆಪಿ ಅಧ್ಯಕ್ಷ ತಿದ್ದುಪ್ಪ ಮಡಿವಾಳ ಹಿತ್ತಲಕೊಪ್ಪ ಕರವೇ ಜನಧ್ವನಿಯ ಜಿಲ್ಲಾ ಗೌರವಾಧ್ಯಕ್ಷ ಶ್ರೀಧರ ಮಡಿವಾಳ, ಶಿರಸಿ ನಗರಸಭೆ ಅಧ್ಯಕ್ಷೆ ಶರ್ಮಿಳ ಮಾದನಗೇರಿ, ಹುತ್ತಗಾರ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶೋಭಾ ನಾಯ್ಕ, ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷ ಅಣ್ಣಪ್ಪ ಕೆ ನಾಯ್ಕ, ಜನಧ್ವನಿ ಶಿರಸಿ ತಾಲೂಕಿನ ಗೌರವಾಧ್ಯಕ್ಷ ಕೃಷ್ಣಪ್ಪ ಭೋವಿ, ಮುಕ್ತಕ ಕವಿ ಕೃಷ್ಣ ಪದಕಿ, ಸದಸ್ಯ ಹರೀಶ ಉಮೇಶ್ ಹರಿಕಾಂತ ವೇದಿಕೆಯಲ್ಲಿದ್ದರು.
, ದಿನೇಶ್ ಮಡಿದಾಳ ಅಮ್ಮಿನಳ್ಳಿ, ಶ್ರೀಮತಿ ಗೌರಿ ನಾಯ್ಕ, ರಮೇಶ ನಾಯ್ಕ ಇವರುಗಳು ಸನ್ಮಾನ ಸ್ವೀಕರಿಸಿದರು. ಇದೆ ಸಂದರ್ಭದಲ್ಲಿ ಜನಧ್ವನಿಯ ವಿವಿಧ ಹುದ್ದೆಗಳಿಗೆ ಆಯ್ಕೆಯಾದ ಪದಾಕಾರಿಗಳಿಗೂ ಭೀಮಣ್ಣ ಟಿ ನಾಯ್ಕ ನೇಮಕಾತಿ ಪತ್ರ ವಿತರಿಸಿದರು. ಕರವೇ ಜನಧ್ವನಿಯ ಶಿರಸಿ ತಾಲೂಕಾಧ್ಯಕ್ಷರಾದ ಅಶ್ವಥ್ ನಾಯ್ಕ ಸ್ವಾಗತಿಸಿ ವಂದಿಸಿದರು.

About Janardhana K M

Check Also

ಗುರುಪೂರ್ಣಿಮೆಯ ಪ್ರಯುಕ್ತ ಬೈಂದೂರು ಕ್ಷೇತ್ರದ ಸಿದ್ದ ಸಮಾಧಿ ಯೋಗ ಸಾಧಕರ ವತಿಯಿಂದ ನಾಗೂರು ಶ್ರೀ ಲಲಿತ ಕೃಷ್ಣ ಸಭಾಭವನದಲ್ಲಿ ಗುರುಪೂರ್ಣಿಮಾ ಸಂಬ್ರಮ .

ಬೈಂದೂರು ; ಗುರುಪೂರ್ಣಿಮೆಯ ಪ್ರಯುಕ್ತ ಬೈಂದೂರು ಕ್ಷೇತ್ರದ ಸಿದ್ದ ಸಮಾಧಿ ಯೋಗ ಸಾಧಕರ ವತಿಯಿಂದ ನಾಗೂರು ಶ್ರೀ ಲಲಿತ ಕೃಷ್ಣ …

Leave a Reply

Your email address will not be published. Required fields are marked *