March 2, 2026
img-20260222-wa00282270311891541565484.jpg

Sagaranewsdotcom

ಉಪ್ಪುಂದದ ಅಮ್ಮನವರ ತೊಪ್ಪಿನ ಶ್ರೀರಾಮ ಭಜನಾ ಮಂದಿರ ಹಾಗೂ ಶ್ರೀ ರಾಮ ಭಜನಾ ಮಂಡಳಿ (ರಿ.) ವತಿಯಿಂದ ನೂತನ ಶಿಲಾಮಯ ಶ್ರೀರಾಮ ಭಜನಾ ಮಂದಿರದ ಲೋಕಾರ್ಪಣೆ, ಶ್ರೀರಾಮ ಪ್ರತಿಷ್ಠೆ-ಬ್ರಹ್ಮಕಲಶಾಭೀಷೇಕ, ನಾಗ ಪ್ರತಿಷ್ಠೆ ಹಾಗೂ ಆಶ್ಲೇಷ ಬಲಿ ಕಾರ್ಯಕ್ರಮಗಳು ಭಕ್ತಿಭಾವ ಮತ್ತು ಧಾರ್ಮಿಕ ವೈಭವದೊಂದಿಗೆ ನೆರವೇರಿದವು.

ನಿನ್ನೆ ಸಂಜೆ 5 ಗಂಟೆಯಿಂದ ದೇವತಾ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ಈ ವೇಳೆ ಶ್ರೀ ನಾಗದೇವರಿಗೆ ಪಂಚವಿಂಶತಿ (25) ಕಲಶ ಸ್ಥಾಪನೆ, ನವಗ್ರಹಾರಾಧನೆ ಹಾಗೂ ಸಪರಿವಾರ ಶ್ರೀ ರಾಮಚಂದ್ರ ದೇವರಿಗೆ ಅಷ್ಟೋತ್ತರ ಶತ (108) ಪರಿಕಲಶ ಸಹಿತ ಬ್ರಹ್ಮಕಲಶ  ನೆರವೇರಿತು.

ಇಂದು ಬೆಳಿಗ್ಗೆ 6 ಗಂಟೆಗೆ ಧಾರ್ಮಿಕ ವಿಧಿವಿಧಾನಗಳು ಪ್ರಾರಂಭಗೊಂಡು ನಾಗಶಿಲಾ ಪ್ರತಿಷ್ಠೆ ಜರುಗಿತು. ಬೆಳಿಗ್ಗೆ 7:35ಕ್ಕೆ ಸಪರಿವಾರ ಶ್ರೀರಾಮಚಂದ್ರ ದೇವರ ಪ್ರತಿಷ್ಠೆ ಶಿಖರ ಪ್ರತಿಷ್ಠೆ ಗಣಹೋಮ, ಬ್ರಹ್ಮ ಕುಂಭಾಭೀಷೇಕ, ಮಹಾಪೂಜೆ ಹಾಗೂ ಮಹಾ ಅನ್ನಸಂತರ್ಪಣೆ ನೆರವೇರಿತು.

ಬೆಳಿಗ್ಗೆ 10:30ಕ್ಕೆ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಆಶೀರ್ವಚನ ನೀಡಿ ಭಕ್ತರನ್ನು ಆಶೀರ್ವದಿಸಿದರು.ಇಂದು ಸಂಜೆ 6 ಗಂಟೆಯಿಂದ ಶ್ರೀ ನಾಗದೇವರಿಗೆ ಆಶ್ಲೇಷಾಬಲಿ ಹಾಗೂ ಅನ್ನಸಂತರ್ಪಣೆ ನಡೆಯಿತು.

ನಾಳೆ ಬೆಳಿಗ್ಗೆ 7:45ಕ್ಕೆ ಪ್ರತೀ ಏಳು ವರ್ಷಗಳಿಗೊಮ್ಮೆ ನಡೆಯುವ 10ನೇ ಅಖಂಡ ಭಜನಾ ಸಪ್ತಾಹ ಕಾರ್ಯಕ್ರಮ ಆರಂಭವಾಗಲಿದೆ.

ಇನ್ನು ಫೆಬ್ರವರಿ 24ರಂದು ದುರ್ಗಾಹೋಮ ಹಾಗೂ ಫೆಬ್ರವರಿ 28ರಂದು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಂಡಳಿಯ ಅಧ್ಯಕ್ಷರಾದ ಈಶ್ವರ್ ಖಾರ್ವಿ ಮತ್ತು ಸರ್ವ ಸದಸ್ಯರು ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *