ಪುತ್ತೂರು: 10 ಕುಟುಂಬ 18 ಗೋತ್ರದ ಗೌಡ
ಸಮುದಾಯದ ಜನರನ್ನು ಒಗ್ಗೂಡಿಸುವ ಸಹಿತ ಹಲವಾರು ಉದ್ದೇಶಗಳನ್ನು ಮುಂದಿಟ್ಟುಕೊಂಡು ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಗೌಡರ ಯಾನೆ ಒಕ್ಕಲಿಗರ ಮಾತೃ ಸಂಘ ಸ್ಥಾಪನೆ ಆಗಿದೆ ಎಂದು ಮಂಗಳೂರಿನಲ್ಲಿ ಗೌಡ ಸಂಘದ ಸ್ಥಾಪಕ ಅಧ್ಯಕ್ಷರ ದ.ಕ.ಜಿಲ್ಲಾ ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘದ ಅಧ್ಯಕ್ಷ ಲೋಕಯ್ಯ ಗೌಡ ಕೆ ಮಂಗಳೂರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 5 ಲಕ್ಷಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ಗೌಡ- ಒಕ್ಕಲಿಗ ಬಾಂಧವರಿದ್ದಾರೆ. ಅಂದಾಜು 2.5 ಲಕ್ಷಕ್ಕಿಂತಲೂ ಅಧಿಕ ವಯಸ್ಕ ಮತದಾರರಿದ್ದಾರೆ. ರಾಜಕೀಯವಾಗಿ ಗುರುತಿಸಿಕೊಂಡ ಅನೇಕ ಮುಂಚೂಣಿ ನಾಯಕರೂ ಇದ್ದಾರೆ. ಹಲವು ಕ್ಷೇತ್ರಗಳಲ್ಲಿ ಗುರುತಿಸಿರುವುದು ನಮಗೆ ಹೆಮ್ಮೆ. ನಮ್ಮ
ಸಂಘದಲ್ಲಿ ವಿದ್ಯಾವಂತರು ಇದ್ದಾರೆ. ಬೇರೆ ಬೇರೆ ಉದ್ಯೋಗದಲ್ಲಿ ಇದ್ದವರೂ ಇದ್ದಾರೆ. ಉದ್ಯೋಗ ಇಲ್ಲದವರೂ ಇದ್ದಾರೆ. ವಿದೇಶದಲ್ಲೂ ಇದ್ದಾರೆ. ಆದರೆ ಒಟ್ಟು ನಿಖವಾರದ ಅಂಕಿಸಂಖ್ಯೆ ಇಲ್ಲ. ಈ ನಿಟ್ಟಿನಲ್ಲಿ ಅವರನ್ನೆಲ್ಲ ಸಂಪರ್ಕ ಮಾಡಿಕೊಂಡು ನಮ್ಮ ಸಮುದಾಯದ ಅಂಕಿ ಅಂಶಗಳನ್ನು ಸಂಗ್ರಹಿಸುವ ಮೂಲಕ ಸಮೀಕ್ಷೆಯನ್ನು ನಾವು ಮಾಡುವ ಒಂದು ಉದ್ದೇಶವಾದರೆ ನಮ್ಮ ಕುಟುಂಬಗಳು, ಗೋತ್ರಗಳು, ತರವಾಡು ಮನೆತನಗಳನ್ನು ಗುರುತಿಸುವುದು ಅಗತ್ಯವಾಗಿದೆ. ಎಷ್ಟೋ ಮಂದಿಗೆ ನಮ್ಮ ಮೂಲ ತರವಾಡಿನ ಬಗ್ಗೆ ಅರಿವಿಲ್ಲ. ಸಮಾಜದಲ್ಲಿನ ಆರ್ಥಿಕವಾಗಿ ಹಿಂದುಳಿದವರನ್ನು ಮೇಲೆತ್ತುವ ಸಹಿt ಹಲವು ಉತ್ತಮ ಉದ್ದೇಶಗಳನ್ನಿಟ್ಟು ಜಿಲ್ಲಾ ಮಾತೃ
ಸಂಘವನ್ನು ಆರಂಭಿಸಿದ್ದೇವೆ. ದ.ಕ.ಜಿಲ್ಲೆಯ 6 ತಾಲೂಕುಗಳಿಗೆ ಪ್ರಾತಿನಿದ್ಯ ನೀಡಿ ಸಂಘ ಕಾರ್ಯಮಾಡುತ್ತದೆ. ತಾಲೂಕು ಸಂಘಗಳ ಸಮನ್ವಯಕರಾಗಿ ಒಟ್ಟು ಸೇರಿಸುವ ಕೆಲಸವನ್ನು ಮಾತೃ ಸಂಘ ಮಾಡುತ್ತದೆ. ಈ ಹಿಂದೆ ಮಾತೃ ಸಂಘ ಇರಲಿಲ್ಲ. ಈಗ ಅದರ ಅಗತ್ಯತೆಯನ್ನು ಮನಗಂಡು ಮಾತೃ ಸಂಘ ರಚನೆ ಮಾಡಿದ್ದೇವೆ ಎಂದು ಅವರು ಹೇಳಿದರು.
2018ರಲ್ಲಿ ಪ್ರಾರಂಭ ಮಾಡಿ ಈಗ ನೋಂದಾಯಿತವಾದಂತಹ ಸಂಸ್ಥೆಯಾಗಿರುವ ಜಿಲ್ಲಾ ಸಂಘದ ಕುರಿತು ಪ್ರಥಮ ಪತ್ರಿಕಾಗೋಷ್ಠಿಯನ್ನು ಪುತ್ತೂರಿನಲ್ಲಿ ಮಾಡುತ್ತಿದ್ದೇವೆ. ಜಿಲ್ಲೆಯ ಸುಳ್ಯ, ಮಂಗಳೂರು, ಪುತ್ತೂರು, ವಿಟ್ಲ- ಬಂಟ್ವಾಳ, ಬೆಳ್ತಂಗಡಿ, ಕಡಬ 6 ತಾಲೂಕುಗಳಿಗೆ
15ರಂದು ಸಮಾಜಕ್ಕೆ ದುಡಿದ ಅನುಭವಿ ಹಿರಿಯ / ಕಿರಿಯರನ್ನು ಗುರುತಿಸಿ ಒಟ್ಟು 24 ಸದಸ್ಯರ ಕಾರ್ಯಕಾರಿ ಸಮಿತಿ ಮತ್ತು 90 ಸದಸ್ಯರ ಆಡಳಿತ ಮಂಡಳಿ ರಚನೆಯಾಗಿದೆ.
ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ವಕೀಲ ದಿನೇಶ್ ಮಡಪ್ಪಾಡಿ,ಬೆಳ್ತಂಗಡಿ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷರೂ ಮತ್ತು ಜಿಲ್ಲಾ ಸಂಘದ ಉಪಾಧ್ಯಕ್ಷರೂ ಆಗಿರುವ ಕುಶಾಲಪ್ಪ ಗೌಡ ಪೂವಾಜೆ, ಕಡಬ ತಾಲೂಕು ಸಂಘದ ಉಪಾಧ್ಯಕ್ಷರೂ ಮತ್ತು ಜಿಲ್ಲಾ ಸಂಘದ ಉಪಾಧ್ಯಕ್ಷರೂ ಆಗಿರುವ ತಿಮ್ಮಪ್ಪ ಗೌಡ ಕುಂಡಡ್ಕ ಕಡಬ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಸದಸ್ಯರು ಮತ್ತು ನಿವೃತ್ತ ಎಸ್ಪಿ ಆಗಿರುವ ರಾಮದಾಸ್ ಗೌಡ
ಎಸ್ ಪುತ್ತೂರು, ಕರ್ನಾಟಕ ಅರೆಭಾಷೆ ಅಕಾಡೆಮಿಯ ಸದಸ್ಯೆಯಾಗಿರುವ ಜಿಲ್ಲಾ ಗೌಡ ಸಂಘದ ಕಾರ್ಯಕಾರಿ ಸಮಿತಿಯ ನಿರ್ದೇಶಕಿ ಲತಾಪ್ರಸಾದ್ ಕುದ್ದಾಜೆ, ಜಿಲ್ಲಾ ಕಾರ್ಯದರ್ಶಿಗಳಾದ ಕಿಶೋರ್ ಕುಮಾರ್ ನೆಲ್ಲಿಕಟ್ಟೆ, ಕೆ.ರಾಮಣ್ಣ ಗೌಡ ಕೊಂಡೆಬಾಯಿ ಮಂಗಳೂರು, ಜಿಲ್ಲಾ ಉಪಾಧ್ಯಕ್ಷ ಕೆ ಲಿಂಗಪ್ಪ ಗೌಡ ವಿಟ್ಲ ವಿಟ್ಲ-ಬಂಟ್ವಾಳದ ಸಿ ಕುಶಾಲಪ್ಪ ಚೆನ್ನಕಜೆ, ಕಾರ್ಯಕಾರಿ ಸಮಿತಿ ಸದಸ್ಯ
ಮೋಹನ್ ಗೌಡ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು