Sagara News

ಜನಾರ್ದನ ಕೆ ಎಂ ಮರವಂತೆ ಸಾರಥ್ಯದಲ್ಲಿ….!

ಬುಲ್ ಟ್ರಾಲ್ ಮಾಡುತ್ತಿರುವ ಬೋಟ್ ನ್ನು ಅಡ್ಡಗಟ್ಟಿದ ನಾಡದೋಣಿ ಮೀನುಗಾರರು

ಬೈಂದೂರು ವಲಯ ನಾಡದೋಣಿ ಮತ್ತು ಗಂಗೊಳ್ಳಿ ನಾಡದೋಣಿ ಮೀನುಗಾರರ ಒಂದುಗೂಡಿ ಸುಮಾರು ನೂರಕ್ಕೂ ಹೆಚ್ಚು ದೋಣಿಯವರು ಬುಲ್ ಟ್ರಾಲ್ ಮಾಡುತ್ತಿರುವ ಬೋಟ್ ನ್ನು ತಡೆದು ನಿಲ್ಲಿಸಿ ತಮ್ಮ ಅಕ್ರೋಶವನ್ನು ವ್ಯಕ್ತಪಡಿಸಿದರು.  

ಸಮುದ್ರದ ತೀರ ಪ್ರದೇಶದಲ್ಲಿ ಬುಲ್ ಟ್ರಾಲ್ ಮಾಡುವುದರಿಂದ  ಮುಂದಿನ ದಿನಗಳಲ್ಲಿ ಮೀನುಗಳ ಸಂತತಿ ನಾಶವಾಗುದರಲ್ಲಿ ಸಂಶಯವಿಲ್ಲ,

ಮಂಗಳೂರಿನಿಂದ ಕಾರವಾರದ ತನಕ ಇರುವ ನಾಡದೋಣಿ ಮೀನುಗಾರರು ಸಭೆ ನಡೆಸಿ ಬುಲ್ ಟ್ರಾಲ್ ಮೀನುಗಾರಿಕೆ ನಿಷೇಧಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದರು ಟ್ರಾಲ್ ಬೋಟ್ ನವರು ಸಮುದ್ರದ ತೀರ ಪ್ರದೇಶದಲ್ಲಿ ಬುಲ್ ಟ್ರಾಲ್ ಮಾಡುತ್ತಿರುವ ದ್ರಶ್ಯಗಳು ಕಂಡುಬಂದ್ದಿದ್ದು ಅಧಿಕಾರಿಗಳ ಗಮನಕ್ಕೆ ತಂದರು ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳೆದೆ ಇರುವುದು ನಾಡ ದೋಣಿಯ ಮೀನುಗಾರರಿಗೆ ಸಂಕಷ್ಟಕ್ಕೆ ಎಡೆಮಾಡಿಕೊಟ್ಟಿದೆ, ಅದಕ್ಕಾಗಿ ಇಂದು ನಾಡದೋಣಿಯ ಆಯಾಯ ಬಾಗದ ಮೀನುಗಾರರು ತೀರದ ಪ್ರದೇಶದಲ್ಲಿ ಬುಲ್ ಟ್ರಾಲ್ ಮೀನುಗಾರಿಕೆ ಮಾಡುವ ಬೋಟ್ ಗಳನ್ನು ತಡೆದು ನಿಲ್ಲಿಸಿ ನೀವು ಇಲ್ಲಿ ಬುಲ್ ಟ್ರಾಲ್ ಮಾಡಬೇಡಿ ಇದರಿಂದ ನಮಗೂ ನೀಮಗೂ ತೊಂದರೆ ಆಗುತ್ತದೆ, ಇದರಿಂದ ಸಂಘರ್ಷ ಕ್ಕೆ ಕಾರಣವಾಗುತ್ತದೆ, ಮುಂದಿನ ದಿನಗಳಲ್ಲಿ ಟ್ರಾಲ್ ಬೋಟ್ ನವರಿಗೂ ಮತ್ತು ನಾಡದೋಣಿಯವರಿಗೂ ಘರ್ಷಣೆ ಉಂಟಾಗುವ ಸಂಭವವಿದೆ, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸಚಿವರು ಮತ್ತು ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ನಾಡದೋಣಿ ಮೀನುಗಾರರು ಮನವಿ ಮಾಡಿ ಕೊಂಡಿರುತ್ತಾರೆ ಮುಂದಿನ ದಿನಗಳಲ್ಲಿ ಎಲ್ಲಾ ನಾಡದೋಣಿ ಮೀನುಗಾರರು ಆಯಾಯ ಬಾಗದಲ್ಲಿ ರಸ್ತೆಗೆ ಇಳಿದು ಮುಷ್ಕರ ಕ್ಕೆ ಎಡೆಮಾಡಿಕೊಡಬೇಡಿ ಎಂದು ಆಯಾಯ ಬಾಗದ ಮೀನುಗಾರ ಅಧ್ಯಕ್ಷರು ಎಚ್ಚರಿಕೆ ನೀಡಿರುತ್ತಾರೆ

ಬೈಂದೂರು ವಲಯ ನಾಡದೋಣಿ ಮೀನುಗಾರರ ಅಧ್ಯಕ್ಷರಾದ ನಾಗೇಶ್ ಖಾರ್ವಿ,  ಮರವಂತೆ ಮೀನುಗಾರ ಸೇವಾ ಸಮಿತಿಯ ಅಧ್ಯಕ್ಷರಾದ ಸುರೇಶ್ ಖಾರ್ವಿ, ವೆಂಕಟರಮಣ ಖಾರ್ವಿ, ಕೋಡೇರಿ ವಲಯ ಅಧ್ಯಕ್ಷ ರಾದ  ಡಿ ಚಂದ್ರ ಖಾರ್ವಿ, ಮಾಜಿ ಅಧ್ಯಕ್ಷರಾದ ಮದನ್ ಕುಮಾರ್,ರಾಜ್ಯ ಒಕ್ಕೂಟ ದ ಕಾರ್ಯದರ್ಶಿ ಯಶ್ವಂತ್ ಖಾರ್ವಿ, ಮಹಾ ಈಶ್ವರ್ ಸೇವಾ ಸಮಿತಿಯ ಅಧ್ಯಕ್ಷರಾದ ರಾಮ ಖಾರ್ವಿ,ರಾಣೆಬಲೆ ಒಕ್ಕೂಟದ ಅಧ್ಯರಾದ ವೆಂಕಟರಮಣ ಖಾರ್ವಿ,  ಮತ್ತು ಎಲ್ಲಾ ವಲಯದ  ದೋಣಿಯ ಸದಸ್ಯರು ಉಪಸ್ಥಿತರಿದ್ದರು,

About The Author

Leave a Reply

Your email address will not be published. Required fields are marked *